
ಬೆಂಗಳೂರು (ಜ.11): ಆರ್‌ಸಿಬಿಯ ಸ್ಟಾರ್ ಪ್ಲೇಯರ್ ಯಶ್ ದಯಾಳ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದ ಬಳಿಕ ಮತ್ತೊಬ್ಬ ಆರ್‌ಸಿಬಿ ಪ್ಲೇಯರ್ ಇದೇ ರೀತಿಯ ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಆದರೆ, ಈತ ರಂಗಿನಾಟ ಆಡಿರೋದು ಸೋಶಿಯಲ್ ಮೀಡಿಯಾದಲ್ಲಿ. ಆದರೆ, ಈ ಪ್ಲೇಯರ್ ಸದ್ಯ ಆರ್‌ಸಿಬಿ ಟೀಮ್‌ನಲ್ಲಿಲ್ಲ. 2026ರ ಐಪಿಎಲ್ ಸೀಸನ್ ಆರಂಭಕ್ಕೂ ಮುನ್ನವೇ ಆರ್‌ಸಿಬಿಯ ಈ ಮಾಜಿ ಆಟಗಾರ ಸೋಶಿಯಲ್ ಮೀಡಿಯಾ ಚಾಟ್‌ಗಳು ಸಖತ್ ವೈರಲ್ ಆಗಿವೆ. ಈ ಆಟಗಾರನ ಹೆಸರು ಸ್ವಸ್ತಿಕ್ ಚಿಕಾರ. ಕಳೆದ ವರ್ಷ ಐಪಿಎಲ್ ಗೆದ್ದ ಆರ್‌ಸಿಬಿ ಟೀಮ್‌ನ ಭಾಗವಾಗಿದ್ದ ಸ್ವಸ್ತಿಕ್ ಚಿಕಾರ ಸೋಶಿಯಲ್ ಮೀಡಿಯಾದಲ್ಲಿ ಹಲವು ಹುಡುಗಿಯರೊಂದಿಗೆ ಮಾಡಿರುವ ಚಾಟ್‌ನ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿವೆ.
ಆರ್‌ಸಿಬಿ ಮಾಜಿ ಆಟಗಾರ ಈ ವರ್ತನೆ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದು ಚರ್ಚೆಗೆ ಕಾರಣವಾಗಿದೆ. ಇವೆಲ್ಲವನ್ನು ಗೊತ್ತಾಗಿಯೇ ಆರ್‌ಸಿಬಿ 2026ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ಸ್ವಸ್ತಿಕ್ ಚಿಕಾರನನ್ನು ತಂಡದಿಂದ ಕೈಬಿಟ್ಟಿತ್ತು. ಇನ್ನು ಹರಾಜಿನಲ್ಲಿ ಅವರು ಯಾವುದೇ ತಂಡಕ್ಕೆ ಆಯ್ಕೆಯಾಗದೇ ಇರುವುದು ಅವರ ಈ ವರ್ತನೆಯೂ ಪ್ರಮುಖ ಕಾರಣ ಎಂದು ಅಭಿಮಾನಿಗಳು ಊಹಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಯೂಸರ್ ಒಬ್ಬರು, ತಾವು ಸ್ವಸ್ತಿಕ್ ಚಿಕಾರನನ್ನು ಕಾನ್ಪುರದ ಮಾಲ್‌ನಲ್ಲಿ ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ. ನನ್ನನ್ನು ಹಾಗೂ ನನ್ನ ಸ್ನೇಹಿತೆಯನ್ನು ಆತ ಕಾಫಿಗೆ ಕರೆದಿದ್ದ ಎಂದಿದ್ದಾರೆ. ರಾಧಿಕಾ ಶರ್ಮ ಹೆಸರಿನ ಯೂಸರ್, ನಾನು ಕ್ರಿಕೆಟ್‌ಅನ್ನು ಅಷ್ಟಾಗಿ ಫಾಲೋ ಮಾಡದ ಕಾರಣ ಕ್ರಿಕೆಟಿಗನನ್ನು ಆರಂಭದಲ್ಲಿ ಗುರುತಿಸಲಿಲ್ಲ ಎಂದು ಹೇಳಿದ್ದಾರೆ. ಆದರೆ, ಮಾಲ್‌ನಲ್ಲಿ ಅವರ ಭೇಟಿಯ ನಂತರ, ಚಿಕಾರ ಸೋಶಿಯಲ್ ಮೀಡಿಯಾದಲ್ಲಿ ನನ್ನನ್ನು ಫಾಲೋ ಮಾಡಲು ಆರಂಭಿಸಿದ್ದು ಮಾತ್ರವಲ್ಲದೆ, ಫ್ಲರ್ಟಿಂಗ್ ಸಂದೇಶ ಕಳಿಹಿಸಲು ಪ್ರಾರಂಭಿಸಿದ್ದ ಎಂದಿದ್ದಾರೆ.
'ಮಾಲ್‌ನಲ್ಲಿ ಭೇಟಿಯಾಗಿ ಒಂದು ಅಥವಾ ಎರಡು ದಿನ ಆಗಿರಬಹುದು. ಆತ ಫ್ಲರ್ಟಿಂಗ್ ಆರಂಭಿಸಿದ್ದ. ತಕ್ಷಣವೇ ಆತನನ್ನು ನಾನು ರಿಮೂವ್ ಮಾಡಿದೆ' ಎಂದು ಆಕೆ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಆತನನ್ನು ಫಾಲೋ ಲಿಸ್ಟ್‌ನಿಂದ ರೂಮೂವ್ ಮಾಡಿದರೂ, ಕೂಡ, ಆತ ಹೇಳುತ್ತಿದ್ದ ಒಂದು ಕೆಫೆ ಅಥವಾ ರೆಸ್ಟೋರೆಂಟ್‌ನಲ್ಲಿ ಭೇಟಿಯಾಗುವಂತೆ ಒತ್ತಾಯ ಮಾಡುತ್ತಿದ್ದ ಎಂದು ಆರ್‌ಸಿಬಿ ಮಾಜಿ ಪ್ಲೇಯರ್ ಮೇಲೆ ಆರೋಪ ಮಾಡಿದ್ದಾರೆ.
ಇದೇ ವೇಳೆ ಆತನ ಜೊತೆಗಿನ ಚಾಟ್‌ಗಳನ್ನೂ ಕೂಡ ರಿವಿಲ್ ಮಾಡಿದ್ದಾರೆ. ಇದಲರಲ್ಲಿ ಸ್ವಸ್ತಿಕ್ ಚಿಕಾರ ಆಕೆಗೆ ಸ್ಟಾರ್‌ಬಕ್ಸ್‌ನಲ್ಲಿ ಮೀಟ್ ಆಗುವಂತೆ ಹೇಳುವುದು ಕಂಡಿದೆ.
2026 ರ ಸೀಸನ್‌ಗೆ ಮೊದಲು ಫ್ರಾಂಚೈಸಿ ಚಿಕಾರ ಅವರನ್ನು ಬಿಡುಗಡೆ ಮಾಡಿತ್ತು, ಆದರೆ ಯಶ್ ದಯಾಳ್ ವಿರುದ್ಧ ಅದೇ ಕ್ರಮ ಕೈಗೊಂಡಿಲ್ಲ. ಮೈದಾನದ ಹೊರಗೆ ನಡೆದ ಘಟನೆಗಳಿಗಾಗಿ ಟೀಕೆಗೆ ಗುರಿಯಾಗಿದ್ದಾರೆ. ಎಡಗೈ ವೇಗಿ ದಯಾಳ್, ಆರ್‌ಸಿಬಿ ಕ್ಯಾಂಪೇನ್‌ನಲ್ಲಿ ತಂಡದ ಪ್ರಮುಖ ಆಟಗಾರರಾಗಿದ್ದರು. ಆದರೆ 2025 ರ ಮಧ್ಯದಲ್ಲಿ, ಗಾಜಿಯಾಬಾದ್ ಮತ್ತು ಜೈಪುರದಲ್ಲಿ ಎರಡು ಪ್ರತ್ಯೇಕ ಪೊಲೀಸ್ ಪ್ರಕರಣಗಳಲ್ಲಿ ವೇಗದ ಬೌಲರ್ ಮೇಲೆ ಲೈಂಗಿಕ ಶೋಷಣೆಯ ಆರೋಪ ಹೊರಿಸಲಾಗಿತ್ತು.
ಗಾಜಿಯಾಬಾದ್‌ನಲ್ಲಿ ಮಹಿಳೆಯೊಬ್ಬರು ಎಫ್‌ಐಆರ್ ದಾಖಲಿಸಿ, ಮದುವೆಯ ಸುಳ್ಳು ಭರವಸೆ ನೀಡಿ ಐದು ವರ್ಷಗಳ ಸಂಬಂಧದ ಅವಧಿಯಲ್ಲಿ ದಯಾಳ್ ವಿರುದ್ಧ ಕಿರುಕುಳ, ದೈಹಿಕ ಕಿರುಕುಳ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದರು. ಆದರೆ, ದಯಾಳ್ ವಿರುದ್ಧ ಆರ್‌ಸಿಬಿ ಯಾವುದೇ ಕ್ರಮ ಕೈಗೊಳ್ಳದ ಕಾರಣ ತಂಡದ ವಿರುದ್ಧವೇ ಟೀಕೆ ವ್ಯಕ್ತವಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.