ಟೀಂ ಇಂಡಿಯಾ ಅನುಭವಿ ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ, ತಾವು ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವ ವೇಳೆಯಲ್ಲಿ ಮಾಡಿದ ತಪ್ಪನ್ನು ಕೊನೆಗೂ ಒಪ್ಪಿಕೊಂಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳಲ್ಲಿ ಒಬ್ಬರಾಗಿರುವ ಅಮಿತ್ ಮಿಶ್ರಾ, ಇದೀಗ ತಾವು ವಯೋ ವಂಚನೆ ಮಾಡಿರುವ ವಿಚಾರವನ್ನು ಕೊನೆಗೂ ಬಾಯ್ಬಿಟ್ಟಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ತಂಡದ ಹಾಲಿ ಕ್ರಿಕೆಟಿಗನ ಈ ಹೇಳಿಕೆ ಸಾಕಷ್ಟು ಸಂಚಲನ ಹುಟ್ಟುಹಾಕಿದೆ.
ಹೌದು, ಭಾರತದ ಮಾಜಿ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ತಾವು ವಯೋ ವಂಚನೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಪಾಡ್‌ಕಾಸ್ಟ್ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿರುವ ಅವರು ತಮ್ಮ ಕೋಚ್‌ರ ಒತ್ತಡದಿಂದಾಗಿ ತಮ್ಮ ವಯಸ್ಸನ್ನು ಒಂದು ವರ್ಷ ಕಡಿಮೆ ಕಡಿಮೆ ದಾಖಲಿಸಿದ್ದಾಗಿ ಹೇಳಿಕೊಂಡಿದ್ದಾರೆ.
Breaking: ಟಿ20 ವಿಶ್ವಕಪ್ ಗೆದ್ದ ಹಾರ್ದಿಕ್ ಪಾಂಡ್ಯಗೆ ಬಿಗ್ ಶಾಕ್ ನೀಡಲು ಮುಂದಾದ ಬಿಸಿಸಿಐ..!
ಸಂದರ್ಶನದ ವೇಳೆ ಈ ಹಿಂದೆ ಐಪಿಎಲ್‌ನಲ್ಲಿ ರೋಹಿತ್ ಶರ್ಮಾ, ಅಮಿತ್ ಮಿಶ್ರಾರನ್ನು ಅವರ ವಯಸ್ಸಿನ ವಿಚಾರಕ್ಕೆ ಕಾಲೆಳೆದಿದ್ದರ ಬಗ್ಗೆ ಸಂದರ್ಶನಕಾರ ಪ್ರಸ್ತಾಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಮಿಶ್ರಾ, ‘ನಾನು ಒಂದು ವರ್ಷ ಕಡಿಮೆ ದಾಖಲಿಸಿದ್ದೇನೆ. ನನ್ನ ಕೋಚ್‌ನ ಒತ್ತಡದಿಂದಾಗಿ ಹೀಗೆ ಮಾಡಬೇಕಾಯಿತು. ನಾನು ಭಾರತ ತಂಡಕ್ಕೆ ಕಾಲಿಟ್ಟಾಗ ನನಗೆ 21 ವರ್ಷ ವಯಸ್ಸು ಎಂದು ತಿಳಿಸಲಾಗಿತ್ತು. ಆದರೆ ನಿಜವಾಗಿಯೂ ಆಗ ನನಗೆ 22 ವರ್ಷವಾಗಿತ್ತು’ ಎಂದಿದ್ದಾರೆ.
ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ, 2003ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಆಗ ಅಮಿತ್ ಮಿಶ್ರಾ ವಯಸ್ಸು 22 ವರ್ಷವಾಗಿದ್ದರೂ, ದಾಖಲೆಯಲ್ಲಿ 21 ವರ್ಷ ಎಂದು ಕಡಿಮೆ ದಾಖಲು ಮಾಡಿದ್ದರು.
'ನಾನು, ಸಚಿನ್ ಅಲ್ಲವೇ ಅಲ್ಲ..!' ಈತನೇ ಸಾರ್ವಕಾಲಿಕ ಶ್ರೇಷ್ಠ ಪ್ರತಿಭಾನ್ವಿತ ಕ್ರಿಕೆಟಿಗನೆಂದ ಬ್ರಿಯಾನ್ ಲಾರಾ..!
ಈ ಹಿಂದೆ ರೋಹಿತ್ ಶರ್ಮಾ, ಅಮಿತ್ ಮಿಶ್ರಾ ಅವರ ಕಾಲೆಳೆದ ವಿಡಿಯೋ ಹೀಗಿದೆ ನೋಡಿ:
That ”Arre yaar” felt personal 😂 pic.twitter.com/oZ9nsYZao7
— Lucknow Super Giants (@LucknowIPL)2024ರ ಐಪಿಎಲ್ ಟೂರ್ನಿಯ ಮುಂಬೈ ಇಂಡಿಯನ್ಸ್-ಲಖನೌ ಸೂಪರ್ ಜೈಂಟ್ಸ್ ನಡುವಿನ ಪಂದ್ಯ ಮುಕ್ತಾಯದ ಬಳಿಕ "ನೀವು ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದಾಗ ನಾವಿನ್ನು ಲಂಗೋಟಿ(ನೆಪ್ಪೀಸ್) ಕಟ್ಟಿಕೊಳ್ಳುತ್ತಿದ್ದೆವು. ನೀವು 20 ವರ್ಷದವರಿದ್ದಾಗಲೇ ಅಲ್ಲವೇ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದು?" ಎಂದು ರೋಹಿತ್ ಶರ್ಮಾ ಹೇಳುತ್ತಾರೆ. ಆಗ ಅಮಿತ್ ಮಿಶ್ರಾ, 'ಹೌದು 20-21 ವರ್ಷ' ಎನ್ನುತ್ತಾರೆ.