Vaibhav Suryavanshi: ಆಟಕ್ಕೆ ಬ್ರೇಕ್ ಹಾಕಲು ದಿಗ್ಗಜ ಕೋಚ್ ಪ್ಲಾನ್: ಆತನ ಮೇಲೆ ಪ್ರೆಶರ್ ಹಾಕಬೇಕು ಎಂದ ಖ್ಯಾತ ತರಬೇತುದಾರ!

Published : Sep 23, 2026, 05:43 PM IST
vaibhav sooryavanshi

ಸಾರಾಂಶ

ಮಳೆಯಿಂದಾಗಿ 5 ಓವರ್‌ಗಳಿಗೆ ಸೀಮಿತವಾದ ಪಂದ್ಯದಲ್ಲಿ ಜಪಾನ್ ವಿರುದ್ಧ ಭಾರತ 2 ರನ್‌ಗಳ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಆಡದಿದ್ದರೂ, ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ರಾಬ್ ವಾಲ್ಟರ್ ಸವಾಲೆಸೆದಿದ್ದಾರೆ. ಮುಂಬರುವ ನ್ಯೂಜಿಲೆಂಡ್ ಪ್ರವಾಸದಲ್ಲಿ ವೈಭವ್ ಪ್ರದರ್ಶನ ನೋಡಲು ಕುತೂಹಲ ಮೂಡಿದೆ.

ಜಪಾನ್‌ನ ಸಾನೋ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಜಪಾನ್ ತಂಡವನ್ನು ಕೇವಲ 2 ರನ್‌ಗಳಿಂದ ಸೋಲಿಸಿತು. ಮಳೆಯಿಂದಾಗಿ ಈ ಪಂದ್ಯವನ್ನು 5 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 4 ವಿಕೆಟ್ ನಷ್ಟಕ್ಕೆ 32ರನ್ ಗಳಿಸಿದರೆ, ಗುರಿ ಬೆನ್ನಟ್ಟಿದ ಜಪಾನ್ 30 ರನ್‌ಗಳಷ್ಟೇ ಗಳಿಸಲು ಶಕ್ತವಾಯಿತು. ಈ ಪಂದ್ಯದಲ್ಲಿ ಭಾರತದ ಯುವ ಉದಯೋನ್ಮುಖ ಆಟಗಾರ ವೈಭವ್ ಸೂರ್ಯವಂಶಿಗೆ ಆಡುವ ಬಳಗದಲ್ಲಿ ಅವಕಾಶ ಸಿಗಲಿಲ್ಲವಾದರೂ, ಅವರು ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.

ವೈಭವ್ ಸೂರ್ಯವಂಶಿಗೆ ಸವಾಲೆಸೆದ ನ್ಯೂಜಿಲೆಂಡ್ ಕೋಚ್!

ವೈಭವ್ ಸೂರ್ಯವಂಶಿ ಅವರ ಅದ್ಭುತ ಬ್ಯಾಟಿಂಗ್ ತಂತ್ರಕ್ಕೆ ನ್ಯೂಜಿಲೆಂಡ್ ತಂಡದ ಮುಖ್ಯ ಕೋಚ್ ರಾಬ್ ವಾಲ್ಟರ್ ಸವಾಲು ನೀಡಿದ್ದಾರೆ. ನಮ್ಮ ಮೈದಾನದಲ್ಲಿ ವೇಗದ ಬೌಲಿಂಗ್ ಮತ್ತು ಬೌನ್ಸ್ ಎದುರಿಸುವಾಗ ವೈಭವ್ ಸೂರ್ಯವಂಶಿ ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಲು ನಾನು ಕಾತುರನಾಗಿದ್ದೇನೆ ಎಂದು ವಾಲ್ಟರ್ ಹೇಳಿದ್ದಾರೆ.

ಪ್ರತಿಭಾವಂತ ಪ್ಲೇಯರ್!

ಅಲ್ಲದೆ, ಅವರು ಒಬ್ಬ ಅತ್ಯಂತ ಪ್ರತಿಭಾವಂತ ಆಟಗಾರ. ಐಪಿಎಲ್‌ನಲ್ಲಿ ಪ್ರಪಂಚದ ಶ್ರೇಷ್ಠ ಬೌಲರ್‌ಗಳನ್ನು ಎದುರಿಸಿದ್ದಾರೆ. ಆದರೆ ನಮ್ಮ ದೇಶದ ಪಿಚ್‌ಗಳಲ್ಲಿ ಅವರು ಹೇಗೆ ಬ್ಯಾಟಿಂಗ್ ಮಾಡುತ್ತಾರೆ ಮತ್ತು ನಮ್ಮ ಬೌಲರ್‌ಗಳು ಅವರನ್ನು ಹೇಗೆ ಒತ್ತಡಕ್ಕೆ ಸಿಲುಕಿಸುತ್ತಾರೆ ಎಂಬುದು ಅತ್ಯಂತ ಸವಾಲಿನ ವಿಷಯ" ಎಂದು ಅಭಿಪ್ರಾಯಪಟ್ಟಿದ್ದಾರೆ.

ನ್ಯೂಜಿಲೆಂಡ್ ಪ್ರವಾಸಕ್ಕೆ ಸಜ್ಜಾಗುತ್ತಿದೆ ಭಾರತ!

ಟೀಮ್ ಇಂಡಿಯಾ ಅಕ್ಟೋಬರ್ ಮಧ್ಯದಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಇಲ್ಲಿ ಐದು ಪಂದ್ಯಗಳ ಟಿ೨೦ ಸರಣಿಯನ್ನು ಆಡಲಿದೆ. ಈ ಸರಣಿಗೆ ಭಾರತೀಯ ತಂಡವನ್ನು ಇನ್ನೂ ಪ್ರಕಟಿಸಲಾಗಿಲ್ಲವಾದರೂ, ವೈಭವ್ ಅವರಿಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಇನ್ನೊಂದೆಡೆ, ನ್ಯೂಜಿಲೆಂಡ್ ಈಗಾಗಲೇ ಈ ಸರಣಿಗಾಗಿ ತನ್ನ ತಂಡವನ್ನು ಪ್ರಕಟಿಸಿದೆ.

ನ್ಯೂಜಿಲೆಂಡ್ ಟಿ20 ತಂಡ!

ಮಿಚೆಲ್ ಸ್ಯಾಂಟ್ನರ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೇ, ಜಾಕೋಬ್ ಡಫಿ, ಲಾಕಿ ಫರ್ಗುಸನ್, ಜ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಬೆವೊನ್ ಜಾಕೋಬ್ಸ್, ಕೈಲ್ ಜೇಮಿಸನ್, ಆಡಮ್ ಮಿಲ್ನೆ, ಡ್ಯಾರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಟಿಮ್ ಸೀಫರ್ಟ್ ಹಾಗೂ ನಾಥನ್ ಸ್ಮಿತ್.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಶ್ವಕಪ್ ಗೆಲ್ಲಿಸಿದ್ದ ಹೀರೋ; ಸ್ಯಾಮ್ಸನ್, ಅಕ್ಷರ್‌ಗೆ ನಾಯಕನಾಗಿದ್ದರೂ ಭಾರತ ತಂಡದ ಬಾಗಿಲು ತೆರೆಯಲೇ ಇಲ್ಲ!
2027-31ರ ಕ್ರಿಕೆಟ್‌ ಕ್ಯಾಲೆಂಡರ್‌ನಲ್ಲಿ ಭರ್ಜರಿ ಬದಲಾವಣೆ? ODI ಸರಣಿ ಕಡಿತ, T20ಗೆ ಹೆಚ್ಚು ಒತ್ತು!