
ಹೈದರಾಬಾದ್: ತನ್ನ ಅಮೋಘ ಬ್ಯಾಟಿಂಗ್, ಬೌಲಿಂಗ್ ಮೂಲಕ ಈ ಬಾರಿ ಐಪಿಎಲ್‌ನಲ್ಲಿ ಅಜೇಯವಾಗಿರುವ ರಾಜಸ್ಥಾನ ರಾಯಲ್ಸ್ ಗೆಲುವಿನ ಓಟ ಮುಂದುವರಿಸಲು ಕಾಯುತ್ತಿದ್ದು, ಸೋಮವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ. ರಾಯಲ್ಸ್ ಆಡಿರುವ ಎಲ್ಲಾ 4 ಪಂದ್ಯಗಳಲ್ಲೂ ಗೆದ್ದಿದ್ದರೆ, ಹೈದರಾಬಾದ್ ಆಡಿರುವ 4ರ ಪೈಕಿ 3ರಲ್ಲಿ ಸೋಲನುಭವಿಸಿದೆ.
ರಾಯಲ್ಸ್ ಆರಂಭಿಕ ಬ್ಯಾಟರ್, 15 ವರ್ಷದ ವೈಭವ್ ಸೂರ್ಯವಂಶಿ ಆಟ ಕ್ರಿಕೆಟ್ ಲೋಕವನ್ನೇ ಬೆರಗುಗೊಳಿಸುತ್ತಿದೆ. 4 ಪಂದ್ಯಗಳಲ್ಲಿ 200 ರನ್ ಕಲೆಹಾಕಿರುವ ಅವರು ಟೂರ್ನಿಯ ಗರಿಷ್ಠ ರನ್ ಸರದಾರರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರ ಜೊತೆ ಯಶಸ್ವಿ ಜೈಸ್ವಾಲ್(183), ಧ್ರುವ್ ಜುರೆಲ್(176) ಕೂಡಾ ರಾಯಲ್ಸ್ ಬ್ಯಾಟಿಂಗ್ ಆಧಾರಸ್ತಂಭ ಎನಿಸಿಕೊಂಡಿದ್ದಾರೆ. 9 ವಿಕೆಟ್ ಕಿತ್ತರುವ ರವಿ ಬಿಷ್ಣೋಯ್ ತಂಡದ ಬೌಲಿಂಗ್ ಟ್ರಂಪ್‌ಕಾರ್ಡ್.
ಮತ್ತೊಂದೆಡೆ ಸನ್‌ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿದ್ದರೂ ಗೆಲುವು ಸಿಗುತ್ತಿಲ್ಲ. ಪಂಜಾಬ್ ವಿರುದ್ಧ ಪವರ್-ಪ್ಲೇನಲ್ಲಿ 105 ರನ್ ಗಳಿಸಿದರೂ ಸೋತಿದ್ದು, ತಂಡದ ಮಧ್ಯಮ ಕ್ರಮಾಂಕ ಹಾಗೂ ಬೌಲಿಂಗ್ ವಿಭಾಗ ಎಷ್ಟು ದುರ್ಬಲವಾಗಿದೆ ಎಂಬುದಕ್ಕೆ ಸಾಕ್ಷಿ. ರಾಯಲ್ಸ್ ವಿರುದ್ಧವಾದರೂ ತಂಡ ಸುಧಾರಿತ ಪ್ರದರ್ಶನ ನೀಡಬೇಕಿದೆ.
ಪಂದ್ಯ ಆರಂಭ: ಸಂಜೆ 7.30ಕ್ಕೆ
ಲಖನೌ: ಪ್ರಸಿದ್ಧ್ ಕೃಷ್ಣ ಮಾರಕ ದಾಳಿ, ನಾಯಕ ಗಿಲ್ ಹಾಗೂ ಬಟ್ಲರ್ ತಲಾ ಅರ್ಧಶತಕ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ 7 ವಿಕೆಟ್ ಸುಲಭ ಗೆಲುವು ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಲಖನೌ 20 ಓವರ್‌ನಲ್ಲಿ 8 ವಿಕೆಟ್‌ಗೆ 164 ರನ್ ಕಲೆಹಾಕಿತು. ಅಬ್ಬರದ ಆರಂಭ ಪಡೆದಿದ್ದ ತಂಡ 7ನೇ ಓವರ್‌ವರೆಗೂ ಉತ್ತಮ ಸ್ಥಿತಿಯಲ್ಲಿತ್ತು. ಆದರೆ ಬಳಿಕ ಕುಸಿಯಿತು. ಕೊನೆಯಲ್ಲಿ ಮುಕುಲ್ 18, ಲಿಂಡೆ 16, ಶಮಿ 12 ರನ್ ಗಳಿಸಿ ತಂಡವನ್ನು 160ರ ಗಡಿ ದಾಟಿಸಿದರು. ಪ್ರಸಿದ್ಧ್ 4 ವಿಕೆಟ್ ಕಿತ್ತರು.
ಸ್ಪರ್ಧಾತ್ಮಕ ಗುರಿ ಪಡೆದ ಗುಜರಾತ್ ಯಾವುದೇ ಒತ್ತಡವಿಲ್ಲದೆ ಚೇಸ್ ಮಾಡಿತು. ತಂಡ 18.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ ಗೆದ್ದಿತು. ಗಿಲ್ 56, ಬಟ್ಲರ್ 37 ಎಸೆತಕ್ಕೆ 60 ರನ್ ಸಿಡಿಸಿದರು.
ಸ್ಕೋರ್: ಲಖನೌ 20 ಓವರಲ್ಲಿ 164/8 (ಮಾರ್ಕ್‌ರಮ್ 30, ಪೂರನ್ 19, ಪ್ರಸಿದ್ಧ್ 4-28, ಅಶೋಕ್ 2-32), ಗುಜರಾತ್ 18.4 ಓವರಲ್ಲಿ 165/3 (ಬಟ್ಲರ್ 60, ಗಿಲ್ 56, ಪ್ರಿನ್ಸ್ 1-31)
ಪಂದ್ಯಶ್ರೇಷ್ಠ: ಪ್ರಸಿದ್ಧ್ ಕೃಷ್ಣ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.