
ಮುಂಬೈ: ಹಾಲಿ ಚಾಂಪಿಯನ್ ಆರ್‌ಸಿಬಿಯ ಮತ್ತೆ ಗೆಲುವಿನ ಹಳಿಗೆ ಮರಳಿದೆ. ಆರಂಭಿಕ 2 ಗೆಲುವಿನ ಬಳಿಕ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲಿನಿಂದ ಕುಗ್ಗಿದ್ದ ಬೆಂಗಳೂರು ತಂಡ, ಭಾನುವಾರ ಮುಂಬೈ ಇಂಡಿಯನ್ಸನ್ನು ಅದರದೇ ತವರಿನಲ್ಲಿ 0 ರನ್‌ಗಳಿಂದ ಮಣಿಸಿದೆ. 4 ಪಂದ್ಯಗಳಲ್ಲಿ ಆರ್‌ಸಿಬಿ 3ರಲ್ಲಿ ಗೆದ್ದರೆ, ಮುಂಬೈ 4ರಲ್ಲಿ 3ನೇ ಸೋಲು ಕಂಡಿದ್ದು, 8ನೇ ಸ್ಥಾನದಲ್ಲೇ ಬಾಕಿಯಾಗಿದೆ.
ಆರ್‌ಸಿಬಿಯನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿ, ಕಡಿಮೆ ಮೊತ್ತಕ್ಕೆ ನಿಯಂತ್ರಿಸುವ ಮುಂಬೈ ಯೋಜನೆ ಫಲ ಕೊಡಲಿಲ್ಲ. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆರ್‌ಸಿಬಿ 4 ವಿಕೆಟ್‌ಗೆ ಬರೋಬ್ಬರಿ 240 ರನ್ ಸಿಡಿಸಿತು. ಆರಂಭಿಕ 3 ಓವರ್ ಬಳಿಕ ಕುಸಿಯುತ್ತಲೇ ಹೋದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 222 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಆರ್‌ಸಿಬಿ ಮೊದಲ ಓವರ್‌ನಿಂದಲೇ ಸ್ಫೋಟಕ ಆಟವಾಡಿತು. ಪವರ್‌ಪ್ಲೇನಲ್ಲೇ ತಂಡ 71 ರನ್ ಸಿಡಿಸಿತು. 10 ಓವರ್‌ಗಳಲ್ಲಿ ಸ್ಕೋರ್ 115 ಆಗಿತ್ತು. ಮೊದಲ ವಿಕೆಟ್‌ಗೆ 10.5 ಓವರ್‌ನಲ್ಲಿ 120 ರನ್ ಜೊತೆಯಾಟ ಲಭಿಸಿತು. ಸಾಲ್ಟ್ 36 ಎಸೆತಕ್ಕೆ 78 ರನ್ ಚಚ್ಚಿದರು. ಭಡ್ತಿ ಪಡೆದು ಬಂದ ನಾಯಕ ರಜತ್ ರನ್ ವೇಗ ಮತ್ತಷ್ಟು ಹೆಚ್ಚಿಸಿದರು. 11 ಎಸೆತದಲ್ಲೇ 44 ರನ್ ಗಳಿಸಿದ್ದ ರಜತ್, ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ದಾಖಲೆ ಬರೆಯುವ ಅವಕಾಶ ತಪ್ಪಿಸಿಕೊಂಡರು. 20 ಎಸೆತಕ್ಕೆ 53 ರನ್ ಗಳಿಸಿ ಔಟಾದರು. ಕೊಹ್ಲಿ 38 ಎಸೆತಕ್ಕೆ 50 ರನ್ ಬಾರಿಸಿದರೆ, ಟಿಮ್ ಡೇವಿಡ್ 16 ಎಸೆತಕ್ಕೆ ಔಟಾಗದೆ 34 ರನ್ ಸಿಡಿಸಿದರು.
5 ಓವರ್‌ನಲ್ಲಿ 56 ರನ್ ಗಳಿಸಿದ್ದ ಮುಂಬೈ ಉತ್ತಮ ಸ್ಥಿತಿಯಲ್ಲಿತ್ತು. ಈ ನಡುವೆ ರೋಹಿತ್ ಗಾಯದಿಂದಾಗಿ ಹೊರನಡೆದರು. 8ನೇ ಓವರ್‌ನಲ್ಲಿ ರಿಕೆಲ್ಟನ್(37), ತಿಲಕ್(1) ವಿಕೆಟ್ ಪಡೆದ ಸುಯಶ್ ಶರ್ಮಾ ಮುಂಬೈ ಕುಸಿತಕ್ಕೆ ನಾಂದಿ ಹಾಡಿದರು. ಆ ಬಳಿಕ ಸೂರ್ಯಕುಮಾರ್ 33, ಹಾರ್ದಿಕ್ ಪಾಂಡ್ಯ 40 ಹಾಗೂ ರುಥರ್‌ಫೋರ್ಡ್ 31 ಎಸೆತಕ್ಕೆ ಅಜೇಯ 71 ರನ್ ಗಳಿಸಿದರೂ ತಂಡಕ್ಕೆ ಗೆಲ್ಲಲಾಗಲಿಲ್ಲ.
ಸ್ಕೋರ್: ಆರ್‌ಸಿಬಿ 20 ಓವರ್‌ನಲ್ಲಿ 240/4 (ಸಾಲ್ಟ್ 78, ರಜತ್ 53, ಕೊಹ್ಲಿ 50, ಡೇವಿಡ್ 34, ಶಾರ್ದೂಲ್ 1-32), ಮುಂಬೈ 20 ಓವರ್‌ನಲ್ಲಿ 222/5 (ರುಥರ್‌ಫೋರ್ಡ್ 71, ಹಾರ್ದಿಕ್ ಪಾಂಡ್ಯ 40, ಸುಯಶ್ 2-47)
ಪಂದ್ಯಶ್ರೇಷ್ಠ: ಫಿಲ್ ಸಾಲ್ಟ್
ಆರ್‌ಸಿಬಿ ಸ್ಫೋಟಕ ಬ್ಯಾಟಿಂಗ್ ಮುಂದೆ ಮುಂಬೈ ಬಳಿ ಉತ್ತರವೇ ಇರಲಿಲ್ಲ. ರೋಹಿತ್ ಗಾಯಗೊಂಡು ಹೊರಹೋಗಿದ್ದು, 8ನೇ ಓವರ್‌ನಲ್ಲಿ ರಿಕೆಲ್ಟನ್, ತಿಲಕ್ ಇಬ್ಬರನ್ನೂ ಸುಯಶ್ ಔಟ್ ಮಾಡಿದ ಬಳಿಕ ಮುಂಬೈ ಚೇತರಿಸಿಕೊಳ್ಳಲೇ ಇಲ್ಲ.
ಆರ್‌ಸಿಬಿ ತಂಡ ಈ ಬಾರಿ ಸತತ 4ನೇ ಪಂದ್ಯದಲ್ಲೂ 200+ ರನ್ ಕಲೆಹಾಕಿತು. ಸನ್‌ರೈಸರ್ಸ್ ವಿರುದ್ಧ ಬೆಂಗಳೂರಿನಲ್ಲಿ 202 ರನ್ ಯಶಸ್ವಿಯಾಗಿ ಬೆನ್ನತ್ತಿ ಗೆದ್ದಿದ್ದ ಆರ್‌ಸಿಬಿ, ಸಿಎಸ್‌ಕೆ ವಿರುದ್ಧ ಪಂದ್ಯದಲ್ಲಿ 3 ವಿಕೆಟ್‌ಗೆ 250 ರನ್ ಸೇರಿಸಿತ್ತು. ಬಳಿಕ ಗುವಾಹಟಿಯಲ್ಲಿ ರಾಜಸ್ಥಾನ ವಿರುದ್ಧ 8 ವಿಕೆಟ್‌ಗೆ 201 ರನ್ ಗಳಿಸಿತ್ತು. ಮುಂಬೈ ವಿರುದ್ಧ 240 ರನ್ ಸೇರಿಸಿತು.
ಆರ್‌ಸಿಬಿ ಸತತ 4 ಬಾರಿ 200+ ರನ್ ಗಳಿಸಿದ್ದು ಐಪಿಎಲ್‌ನಲ್ಲಿ ಜಂಟಿ 2ನೇ ಗರಿಷ್ಠ. 2025-26ರಲ್ಲಿ ಸನ್‌ರೈಸರ್ಸ್ ಸತತ 5 ಬಾರಿ ಈ ಸಾಧನೆ. 2023ರಲ್ಲಿ ಪಂಜಾಬ್, 2024ರಲ್ಲಿ ಆರ್‌ಸಿಬಿ ಸತತ 4 ಬಾರಿ 200+ ರನ್ ಗಳಿಸಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.