
ಡೆಲ್ಲಿ (ಆ.18) ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿ ಅದ್ಧೂರಿಯಾಗಿ ನಡೆಯುತ್ತಿದೆ. ಪಂದ್ಯಗಳು ರೋಚಕತೆ ಹೆಚ್ಚಿಸುತ್ತಿದೆ. ಇದರ ನಡುವ ಈಸ್ಟ್ ಡೆಲ್ಲಿ ರೈಡರ್ಸ್ ಹಾಗೂ ನ್ಯೂ ಡೆಲ್ಲಿ ಟೈಗರ್ಸ್ ನಡುವಿನ ಪಂದ್ಯದಲ್ಲಿ ಅನಾಹುತವೊಂದು ನಡೆದಿದೆ. ನ್ಯೂ ಡೆಲ್ಲಿ ತಂಡದ ಲಕ್ಷ್ಯ ತರೇಜ್ ಸಿಡಿಸಿದ ಬೌಂಡರಿ ಹೊಡೆತವೊಂದು ನೇರವಾಗಿ ಅಂಪೈರ್ ಮುಖಕ್ಕೆ ಬಾಲ್ ಬಡದಿದೆ. ಗಂಭೀರವಾಗಿ ಗಾಯಗೊಂಡ ಅಂಪೈರ್ ಧರ್ಮೇಶ್ ಭಾರದ್ವಾಜ್ ಅವರನ್ನು ಐಸಿಯುವಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಪಂದ್ಯದಲ್ಲಿ ಈ ಘಟನೆ ನಡೆದಿದೆ. ನ್ಯೂ ಡೆಲ್ಲಿ ಟೈಗರ್ಸ್ ಚೇಸಿಂಗ್ ಮಾಡುತ್ತಿದ್ದ ವೇಳೆ 18ನೇ ಓವರ್‌ನಲ್ಲಿ ಲಕ್ಷ್ಯ ತರೇಜಾ ಬಲವಾಡ ಶಾಟ್ ಹೊಡೆದಿದ್ದಾರೆ. ಸ್ಟ್ರೈಟ್ ಬೌಂಡರ್ ಸಿಡಿಸಲು ಮುಂದಾಗ ಲಕ್ಷ್ಯ ಬಲವಾಗಿ ಸ್ಟ್ರೈಟ್ ಡ್ರೈವ್ ಸಿಡಿಸಿದ್ದಾರೆ. ಬಾಲ್ ನೇರವಾಗಿ ಅಂಪೈರ್ ಧರ್ಮೇಶ್ ಭಾರದ್ವಾಜ್ ಕೆನ್ನಗೆ ಬಡಿದಿದೆ. ಬಾಲ್ ಬರುತ್ತಿದ್ದಂತೆ ಧರ್ಮೇಶ್ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ.
ಬಾಲ್ ಅಂಪೈರ್ ಕೆನ್ನಗೆ ಬಡಿಯುತ್ತಿದ್ದಂತೆ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಧರ್ಮೇಶ್ ಗಂಭೀರವಾಗಿ ಗಾಯಗೊಂಡಿದ್ದರು. ಇತ್ತ ಬ್ಯಾಟರ್ ಲಕ್ಷ್ಯ ತರೇಜಾ ಆತಂಕಗೊಂಡಿದ್ದಾರೆ. ಇತ್ತ ಅಂಪೈರ್ ಕೈ ಸನ್ನೆ ಮೂಲಕ ಫಿಸಿಯೋಗೆ ಸೂಚನೆ ನೀಡಿದ್ದಾರೆ. ಮೈದಾನದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಆದರೆ ಗಾಯದ ಪ್ರಮಾಣ ಗಂಭೀರವಾಗಿದ್ದ ಕಾರಣ ಅಂಪೈರ್ ಧರ್ಮೇಶ್ ಅವರನ್ನು ಆ್ಯಂಬುಲೆನ್ಸ್ ಮೂಲಕ ದೆಹಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಂಪೈರ್ ಕೆನ್ನೆ ಹಾಗೂ ದವಡೆ ಭಾಗದ ಮೂಳೆಗೆ ಗಂಭೀರ ಪೆಟ್ಟಾಗಿದೆ. ಹೀಗಾಗಿ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯುವಿನಲ್ಲೇ ಚಿಕಿತ್ಸೆ ಮುಂದುವರಿದಿದೆ. ಸದ್ಯ ಅಂಪೈರ್ ಪರಿಸ್ಥಿತಿ ಗಂಭೀರವಾಗಿದ್ದರೂ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಡೆಲ್ಲಿ ಪ್ರೀಮಿಯರ್ ಲೀಗ್ ಟೂರ್ನಿಯ ಹಿಂದಿನ ಪಂದ್ಯದಲ್ಲಿ ಅಂಪೈರ್ ಧರ್ಮೇಶ್ ಭುಜಕ್ಕೆ ಬಾಲ್ ಬಡಿದಿತ್ತು. ಇದರಿಂದ ಧರ್ಮೇಶ್ ಗಾಯಗೊಂಡಿದ್ದರು. ಈ ಗಾಯದಿಂದ ಚೇತರಿಸಿಕೊಂಡು ಮತ್ತೆ ಅಂಪೈರಿಂಗ್ ಇಳಿದ ಧರ್ಮೇಶ್ ಈ ಬಾರಿ ಗಂಭೀರವಾಗಿ ಗಾಯಗೊಂಡು ಐಸಿಯಿನಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.