U19 World Cup: ಕಿವೀಸ್ ಬಗ್ಗುಬಡಿದು ಸೆಮೀಸ್ ಹೊಸ್ತಿಲಲ್ಲಿ ಭಾರತ

By Kannadaprabha News  |  First Published Jan 31, 2024, 10:54 AM IST

ಮುಷೀರ್‌ರ 126 ಎಸೆತದಲ್ಲಿ 131 ರನ್ ಸಿಡಿಸಿದ ಮುಷೀರ್, ಭಾರತ 50 ಓವರಲ್ಲಿ 8 ವಿಕೆಟ್‌ಗೆ 295 ರನ್‌ಗಳ ದೊಡ್ಡ ಮೊತ್ತ ಕಲೆಹಾಕಲು ನೆರವಾದರು. ಆದರ್ಶ್ ಸಿಂಗ್ 52 ರನ್ ಕೊಡುಗೆ ನೀಡಿದರು. ಕಠಿಣ ಗುರಿ ಬೆನ್ನತ್ತಿದ ಕಿವೀಸ್, 28.1 ಓವರಲ್ಲಿ ಕೇವಲ 81 ರನ್‌ಗೆ ಆಲೌಟ್ ಆಯಿತು.


ಬ್ಲೂಮ್‌ಫೌಂಟೇನ್: ಮುಷೀರ್ ಖಾನ್‌ರ ಅತ್ಯಾಕರ್ಷಕ ಶತಕ, ಬೌಲರ್‌ಗಳ ಮಾರಕ ದಾಳಿಯ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಸೂಪರ್-6 ಪಂದ್ಯದಲ್ಲಿ 214 ರನ್ ಗಳ ಅಮೋಘ ಗೆಲುವು ಸಾಧಿಸಿದ ಭಾರತ, ಅಂಡರ್-19 ಏಕದಿನ ವಿಶ್ವಕಪ್‌ನ ಸೆಮಿಫೈನಲ್ ಹೊಸ್ತಿಲು ತಲುಪಿದೆ.

ಮುಷೀರ್‌ರ 126 ಎಸೆತದಲ್ಲಿ 131 ರನ್ ಸಿಡಿಸಿದ ಮುಷೀರ್, ಭಾರತ 50 ಓವರಲ್ಲಿ 8 ವಿಕೆಟ್‌ಗೆ 295 ರನ್‌ಗಳ ದೊಡ್ಡ ಮೊತ್ತ ಕಲೆಹಾಕಲು ನೆರವಾದರು. ಆದರ್ಶ್ ಸಿಂಗ್ 52 ರನ್ ಕೊಡುಗೆ ನೀಡಿದರು. ಕಠಿಣ ಗುರಿ ಬೆನ್ನತ್ತಿದ ಕಿವೀಸ್, 28.1 ಓವರಲ್ಲಿ ಕೇವಲ 81 ರನ್‌ಗೆ ಆಲೌಟ್ ಆಯಿತು. ಇನ್ನಿಂಗ್ಸ್‌ನ ಮೊದಲ ಓವರ್ ನಲ್ಲೇ 2 ವಿಕೆಟ್ ಕಿತ್ತ ರಾಜ್ ಲಿಂಬಾನಿ, ಕಿವೀಸ್‌ಗೆ ಭಾರಿ ಆಘಾತ ನೀಡಿದರು. ಸೌಮಿ ಪಾಂಡೆ 4, ಮುಷೀರ್ 2, ನಮನ್ ಹಾಗೂ ಅರ್ಶಿನ್ ತಲಾ 1 ವಿಕೆಟ್ ಕಬಳಿಸಿದರು.

Tap to resize

Latest Videos

'ನಂಗೆ ಹುಡುಗೀರಂದ್ರೆ ಇಷ್ಟ': ಮೂರನೇ ಮದುವೆ ಬೆನ್ನಲ್ಲೇ ಶೋಯೆಬ್ ಮಲಿಕ್ ಹಳೇ ವಿಡಿಯೋ ವೈರಲ್..!

ಸ್ಕೋರ್: 
ಭಾರತ 50 ಓವರಲ್ಲಿ 295/8 (ಮುಷೀರ್ ಖಾನ್ 131, ಅದರ್ಶ್ 52, ಕ್ಲಾರ್ಕ್ 62/4),
ನ್ಯೂಜಿಲೆಂಡ್ 28.1 ಓವರಲ್ಲಿ 81/10 (ಆಸ್ಕರ್ 19, ಸೌಮಿ ಪಾಂಡೆ 19/4, ರಾಜ್ ಲಿಂಬಾನಿ 17/2)

ಐಸಿಸಿ ಚೇರ್ಮನ್‌ ಹುದ್ದೆ ಮೇಲೆ ಕಣ್ಣು, ಎಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿರುವ ಜಯ್‌ ಶಾ!

ಸೆಮೀಸ್ ಲೆಕ್ಕಾಚಾರ ಹೇಗೆ?

ಗುಂಪು ಹಂತದಲ್ಲಿ ಐರ್ಲೆಂಡ್, ಬಾಂಗ್ಲಾದೇಶ ವಿರುದ್ಧ ಭಾರತ ಗೆದ್ದಿತ್ತು. ಆ ಎರಡೂ ತಂಡಗಳು ಸೂಪರ್-6 ಪ್ರವೇಶಿಸಿದ ಕಾರಣ, ಅವುಗಳ ವಿರುದ್ಧ ಗಳಿಸಿದ್ದ ಅಂಕಗಳು ಸೂಪರ್-6ನಲ್ಲಿ ಪರಿಗಣಿಸಲ್ಪಡುತ್ತದೆ. ಹೀಗಾಗಿ, ಭಾರತ ಸದ್ಯ 3 ಪಂದ್ಯಗಳಿಂದ 6 ಅಂಕ ಗಳಿಸಿ, ಗುಂಪು-1ರಲ್ಲಿ ಮೊದಲ ಸ್ಥಾನದಲ್ಲಿದೆ. ಸೂಪರ್-6 ಹಂತದಲ್ಲಿ ಭಾರತ ತನ್ನ 2ನೇ ಹಾಗೂ ಕೊನೆಯ ಪಂದ್ಯವನ್ನು ಫೆ.2ರಂದು ನೇಪಾಳ ವಿರುದ್ಧ ಆಡಲಿದೆ.

click me!