ಅ19 ಫೈನಲ್ ಗೆಲುವಿನ ಸಂಭ್ರಮದಲ್ಲಿ ಪಾಕ್ ಜೊತೆ ಕಿರಿಕ್, ನಿಭಾಯಿಸಿದ ಭಾರತದ ಸ್ಟಾಫ್ ನಡೆಗೆ ಮೆಚ್ಚುಗೆ

Chethan Kumar   | ANI
Published : Nov 14, 2026, 07:44 PM IST
India Pakistan Tension During U19 Final Celebrations

ಸಾರಾಂಶ

ಅಂಡರ್ 19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ 1 ವಿಕೆಟ್ ರೋಚಕ ಗೆಲುವು ದಾಖಲಿಸಿದ ಭಾರತ ಸಂಭ್ರಮಾಚರಿಸಿದೆ. ಈ ವೇಳೆ ಪಾಕ್ ಕ್ರಿಕೆಟಿಗರ ಜೊತೆ ಕಿರಿಕ್ ಮಾಡಿಕೊಂಡಿದೆ. ಆದರೆ ತಕ್ಷಣಕ್ಕೆ ಧಾವಿಸಿದ ಭಾರತದ ತಂಡದ ಕೋಚಿಂಗ್ ಸ್ಟಾಫ್ ನಡೆದೆ ಮೆಚ್ಚುಗೆ ವ್ಯಕ್ತವಾಗಿದೆ.

ಓಮನ್ (ನ.14) ಭಾರತ ಹಾಗೂ ಪಾಕಿಸ್ತಾನ ನಡುವಿನ ಯಾವುದೇ ಪಂದ್ಯವಾಗಿರಲಿ, ಸ್ಲೆಡ್ಜಿಂಗ್, ಕಿರಿಕ್ ಇದ್ದೇ ಇರುತ್ತೆ. ಎರಡೂ ತಂಡಕ್ಕೂ ಗೆಲ್ಲಲೇಬೇಕು. ಇದಕ್ಕಿಂತ ಹೆಚ್ಚಾಗಿ ಅಭಿಮಾನಿಗಳಿಗೆ ಇದು ಪ್ರತಿಷ್ಠೆಯ ಪಂದ್ಯ. ಹೀಗಾಗಿ ಕಿತ್ತಾಟಗಳು ಸಾಮಾನ್ಯ. ಇದು ಅಂಡರ್ 19 ಏಷ್ಯಾಕಪ್ ಟೂರ್ನಿಯಲ್ಲಿ ಇತ್ತು. ಫೈನಲ್ ಪಂದ್ಯದಲ್ಲಿ ಭಾರತ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಪಾಕಿಸ್ತಾನ ಕ್ರಿಕೆಟಿಗರ ಮಾತುಗಳು ಭಾರತದ ಯುವ ಪಡೆಯನ್ನು ಕೆರಳಿಸಿತ್ತು. ಆದರೆ ತಾಳ್ಮೆ ಕಳೆದುಕೊಳ್ಳದ ಭಾರತ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿ ಟ್ರೋಫಿ ಗೆಲ್ಲುತ್ತಿದ್ದಂತೆ ತಿರುಗೇಟು ನೀಡಿತು. ಸಂಭ್ರಮಾಚರಣೆ ನಡುವೆ ಪಾಕಿಸ್ತಾನ ಕ್ರಿಕೆಟಿಗರ ಅವರದ್ದೇ ಭಾಷೆಯಲ್ಲಿ, ಅವರದ್ದೇ ಶೈಲಿಯಲ್ಲಿ ತಿರುಗೇಟು ಕೊಟ್ಟಿತು. ಆದರೆ ಪರಿಸ್ಥಿತಿ ಕೈಮೀರುವ ಮೊದಲೇ ಭಾರತದ ತಂಡದ ಸ್ಟಾಫ್ ಧಾವಿಸಿ ಪರಿಸ್ಥಿತಿ ನಿಭಾಯಿಸಿದ್ದಾರೆ.

ಏನಿದು ಕಿರಿಕ್?

ಅಂಡರ್ 19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ 338 ರನ್ ಟಾರ್ಗೆಟ್ ಪಡೆದ ಭಾರತ ಹೋರಾಟ ನೀಡಿತ್ತು. ಆದರೆ 9 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮೋಹಿತ್ ಉಲ್ವಾ ನೀಡಿದ ಹೋರಾಟದಿಂದ ಕೊನೆಯ ಎಸೆತದಲ್ಲಿ ಭಾರತ 1ವಿಕೆಟ್ ರೋಚಕ ಗೆಲುವು ಕಂಡಿತ್ತು. ಗೆಲುವಿನ ಬೆನ್ನಲ್ಲೇ ಡಗೌಟ್‌ನಲ್ಲಿದ್ದ ಟೀಂ ಇಂಡಿಯಾ ಕ್ರಿಕೆಟಿಗರು, ಸ್ಟಾಫ್ ಮೈದಾನಕ್ಕೆ ತೆರಳಿ ಸಂಭ್ರಮಾಚರಿಸಿತು. ಈ ವೇಳೆ ಫೀಲ್ಡಿಂಗ್‌ನಲ್ಲಿದ್ದ ಪಾಕಿಸ್ತಾನ ಕ್ರಿಕೆಟಿಗರಿಗೆ ತಿರುಗೇಟು ಕೊಟ್ಟಿತು. ಮೈದಾನದಿಂದ ಹೊರನಡೆಯುವಂತೆ ಭಾರತದ ಯುವ ಕ್ರಿಕೆಟಿಗರು ಸನ್ನೆ ಮಾಡಿದ್ದರು.

ಪಾಕಿಸ್ತಾನ ಕ್ರಿಕೆಟಿಗರು ಸೋತ ಬಳಿಕವೂ ಸ್ಲೆಡ್ಜಿಂಗ್ ಮಾಡಿದ್ದರು. ಇದು ಟೀಂ ಇಂಡಿಯಾ ಯುವ ಪಡೆಯನ್ನು ಮತ್ತಷ್ಟು ಕೆರಳಿಸಿತ್ತು. ಮಾತಿನ ಚಕಮಕಿ, ಹದ್ದು ಮೀರಿದ ವರ್ತನೆ ಶುರುವಾಗುತ್ತಿದ್ದಂತೆ ಟೀಂ ಇಂಡಿಯಾ ಸಪೋರ್ಟ್ ಸ್ಟಾಫ್ ಮಧ್ಯಪ್ರವೇಶಿಸಿದ್ದಾರೆ. ತಕ್ಷಣವೇ ಭಾರತೀಯ ಕ್ರಿಕೆಟಿಗರ ನಿಯಂತ್ರಿಸಿದ್ದಾರೆ. ಗೆಲುವಿನ ಸಂಭ್ರಮದಲ್ಲಿ ಹದ್ದು ಮೀರಿದ ವರ್ತನೆಗೆ ಕಡಿವಾಣ ಹಾಕಿದ್ದಾರೆ.

ಅಸಲು ಬಡ್ಡಿ ಸಮೇತೆ ತಿರುಗಿಸಿ ನೀಡಿದ ಭಾರತ

37ನೇ ಓವರ್‌ನಲ್ಲಿ ಅನ್ವಯ್ ದ್ರಾವಿಡ್ ರನೌಟ್‌ಗೆ ಬಲಿಯಾಗುತ್ತಿದ್ದಂತೆ ಅಂಡರ್ 19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಭಾರತ ಸಂಪೂರ್ಣವಾಗಿ ಹಿನ್ನಡೆ ಅನುಭವಿಸಿತ್ತು. ಇಷ್ಟೇ ಅಲ್ಲ ಪಾಕಿಸ್ತಾನ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ಬ-ಹತ್ ಮೊತ್ತದ ಕಾರಣ ಭಾರತ ಮತ್ತೆ ಕಮ್‌ಬ್ಯಾಕ್ ಮಾಡಲು ಬ್ಯಾಟರ್ ಇರಲಿಲ್ಲ. ಪಾಕಿಸ್ತಾನ ಇದೇ ಆತ್ಮವಿಶ್ವಾಸದಲ್ಲಿತ್ತು. ಆದರೆ ಭಾರತದ ಯುವ ಪಡೆ ಆತ್ಮವಿಶ್ವಾಸ ಕಳೆದುಕೊಂಡಿರಲಿಲ್ಲ. ಇದರ ನಡುವೆ ಪಾಕಿಸ್ತಾನ ಬೌಲರ್‌ಗಳು, ಫೀಲ್ಡರ್ಸ್ ಸ್ಲೆಡ್ಜಿಂಗ್ ಮಾಡಿದ್ದರು. ಈ ವೇಳೆ ಭಾರತದ ಬ್ಯಾಟರ್ ತಿರುಗೇಟು ನೀಡಲು ಹೋಗಿರಲಿಲ್ಲ. ಇಷ್ಟೇ ಅಲ್ಲ ಗೆಲುವಿನ ಕಡೆ ಫೋಕಸ್ ಮಾಡಿದ್ದರು. ಗೆದ್ದ ಬಳಿಕ ಅಸಲು ಬಡ್ಡಿ ಸಮೇತ ಸೇರಿಸಿ ನೀಡಿದ್ದಾರೆ. ಅದೃಷ್ಟವಶಾತ್ ಸಪೋರ್ಟ್ ಸ್ಟಾಫ್ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆ ವಿಕೆಟ್, ಕೊನೆ ಓವರ್, ಕೊನೆ ಎಸೆತ, ಪಾಕ್ ವಿರುದ್ಧ ಭಾರತಕ್ಕೆ ಗೆಲುವು ಕೊಟ್ಟ ಮೋಹಿತ್ ಉಲ್ವಾ ಯಾರು
ಪಾಕ್ ಸೊಕ್ಕು ಮುರಿದ ಮೋಹಿತ್ ಉಲ್ವಾ: ಲಾಸ್ಟ್‌ ಬಾಲ್‌ ಥ್ರಿಲ್ಲರ್‌ನಲ್ಲಿ ಏಷ್ಯಾ ಕಪ್ ಮುಡಿಗೇರಿಸಿಕೊಂಡ ಟೀಮ್‌ ಇಂಡಿಯಾ ಅಂಡರ್‌ 19