
ದುಬೈ (ಡಿ.14) ಅಂಡರ್ 19 ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಸತತ 2ನೇ ಗೆಲುವು ದಾಖಲಿಸಿದೆ. ಪಾಕಿಸ್ತಾನ ವಿರುದ್ಧ ನಡೆದ ರೋಚಕ ಹೋರಾಟದಲ್ಲಿ ಟೀಂ ಇಂಡಿಯಾ 90 ರನ್ ಗೆಲುವು ದಾಖಲಿಸಿದೆ. ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ ಬಳಿಕ ಟೀಂ ಇಂಡಿಯಾ ಬೌಲಿಂಗ್‌ನಲ್ಲಿ ಮಿಂಚಿನ ದಾಳಿ ನಡೆಸಿತ್ತು. ಇದರ ಪರಿಣಾಮ ಪಾಕಿಸ್ತಾನ ಕೇವಲ 150 ರನ್‌ಗೆ ಆಲೌಟ್ ಆಗಿದೆ. ಭಾರತ ನೀಡಿದ 241 ರನ್ ಟಾರ್ಗೆಟ್ ಬೆನ್ನಟ್ಟಲು ಪ್ರಯತ್ನಿಸಿದ ಪಾಕಿಸ್ತಾನ 41.2 ಓವರ್‌ಗಳಲ್ಲಿ 150 ರನ್‌ಗೆ ಆಲೌಟ್ ಆಗಿದೆ.
ಪಾಕಿಸ್ತಾನ ಈ ಪಂದ್ಯದಲ್ಲಿ ಟಾಸ್ ಗೆದ್ದು ಭಾರತವನ್ನು ಬ್ಯಾಟಿಂಗ್ ಆಹ್ವಾನಿಸಿತ್ತು. ಚೇಸಿಂಗ್ ಮೂಲಕ ಟೀಂ ಇಂಡಿಯಾ ಸೋಲಿಸಲು ಎಲ್ಲಾ ಪ್ಲಾನ್ ಮಾಡಿತ್ತು. ಆದರೆ ಟೀಂ ಇಂಡಿಯಾ ಪ್ರದರ್ಶನ ಮುಂದೆ ಸಾಧ್ಯವಾಗಲಿಲ್ಲ. ಪಾಕಿಸ್ತಾನಕ್ಕೆ 241 ರನ್ ಟಾರ್ಗೆಟ್ ನೀಡಲಾಗಿತ್ತು. ಗುರಿ ಬೆನ್ನಲ್ಲಟ್ಟಲು ಆರಂಭಿಸಿದ ಪಾಕಿಸ್ತಾನಕ್ಕೆ ದೀಪೇಶ್ ದೇವೇಂದ್ರನ್ ಹಾಗೂ ಕಾನಿಶ್ಕ್ ಚೌಹಾನ್ ಮಾರಕ ದಾಳಿಗೆ ತತ್ತರಿಸಿತು. 30 ರನ್‌ಗಳಿಗೆ ಇಬ್ಬರು ನಾಲ್ಕು ವಿಕೆಟ್ ಕಬಳಿಸಿದ್ದರು. ಇದರಿಂದ ಚೇತರಿಸಿಕೊಳ್ಳಲು ಪಾಕಿಸ್ತಾನಕ್ಕೆ ಅವಕಾಶ ನೀಡಲಿಲ್ಲ.
ಕುಸಿದ ತಂಡದಕ್ಕೆ ಪಾಕಿಸ್ತಾನ ನಾಯಕ ಫರ್ಹಾನ್ ಯೂಸುಫ್ ಹಾಗೂ ಹುಜೈಫಾ ಅಹ್ಸಾನ್ ಉತ್ತಮ ಜೊತೆಯಾಟ ನೀಡಿದರು. ಫರ್ಹಾನ್ ಯೂಸುಫ್ 23 ರನ್ ಸಿಡಿಸಿ ಔಟಾದರು. ಆದರೆ ಹುಝೈಫಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. 70 ರನ್ ಸಿಡಿಸಿ ಹೀನಾಯ ಸೋಲು ತಪ್ಪಿಸಿದರು. ಹುಝೈಫಾ ಹೋರಾಟದಿಂದ ಪಾಕಿಸ್ತಾನ 100 ರನ್ ಗಡಿ ದಾಟಿತ್ತು. ಹುಝೈಫಾ ವಿಕೆಟ್ ಪತನದೊಂದಿಗೆ ಪಾಕಿಸ್ತಾನಕ್ಕೆ ವಿಕೆಟ್ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.ಹೀಗಾಗಿ 150 ರನ್‌ಗೆ ಆಲೌಟ್ ಆಯಿತು.
ದೀಪೇಶ್ ದೇವೇಂದ್ರನ್ 3, ಕಾನಿಷ್ಕ್ 3, ಕಿಶನ್ ಕುಮಾರ್ ಸಿಂಗ್ 2, ಖಿಲನ್ ಪಟೇಲ್ 1 ಹಾಗೂ ವೈಭವ್ ಸೂರ್ಯವಂಶಿ 1 ವಿಕೆಟ್ ಕಬಳಿಸಿದರು. ವೈಭವ್ ಸೂರ್ಯವಂಶಿ ಬ್ಯಾಟಿಂಗ್‌ನಲ್ಲಿ ನಿರಾಸೆ ಅನುಭವಿಸಿದ್ದರು. ಆದರೆ ಬೌಲಿಂಗ್‌ನಲ್ಲಿ ವಿಕೆಟ್ ಪಡೆದು ಗಮನಸೆಳೆದರು.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾಗೆ ಆ್ಯರೋನ್ ಜಾರ್ಜ್ ಹೋರಾಟ ನೆರವಾಗಿತ್ತು. ಆ್ಯರೋನ್ 85 ರನ್ ಸಿಡಿಸಿ ಅಬ್ಬರಿಸಿದ್ದರು. ಇನ್ನು ನಾಯಕ ಆಯುಷ್ ಮ್ಹಾಟ್ರೆ 38, ಅಭಿಘ್ಯಾನ್ ಕುಂಡು 28, ಕಾನಿಷ್ಕ್ ಚೌಹಾನ್ 48 ರನ್ ಸಿಡಿಸಿದರು. ಈ ಮೂಲಕ ಭಾರತ 46.1 ಓವರ್‌ಗಳಲ್ಲಿ 240 ರನ್‌ಗೆ ಆಲೌಟ್ ಆಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.