
ಸಿಡ್ನಿ (ಡಿ.14) ಆಸ್ಟ್ರೇಲಿಯಾದ ಸಿಡ್ನಿಯ ಬೊಂಡಿ ಬೀಚ್‌ನಲ್ಲಿ ಇಬ್ಬರು ಗನ್‌ಮ್ಯಾನ್ ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಹಲವರು ಗಾಯಗೊಂಡಿದ್ದಾರೆ. ಯಹೂದಿಗಳ ಹುನುಖ್ಹಾ ಹಬ್ಬದ ಆಚರಣೆ ವೇಳೆ ಈ ಗುಂಡಿನ ದಾಳಿ ನಡೆದಿದೆ. ಇದರ ಪರಿಣಾಮ ಅಮಾಯಕ 12 ಜೀವಗಳು ಬಲಿಯಾಗಿದೆ. ಇಬ್ಬರು ಶೂಟರ್‌ಗಳ ಪೈಕಿ ಒರ್ವನ ಪೊಲೀಸರು ಹತ್ಯೆ ಮಾಡಿದರೆ, ಮತ್ತೊರ್ವನಿಂದ ಸಾಮಾನ್ಯ ವ್ಯಕ್ತಿಯೊಬ್ಬ ಗನ್ ಕಸಿದು ಹಲವರ ಪ್ರಾಣ ಉಳಿಸಿದ್ದಾನೆ. ಈ ಘಟನೆಗೆ ವಿಶ್ವದೆಲ್ಲೆಡೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಇದೇ ವೇಳೆ ಬೊಂಡಿ ಬೀಚ್ ದಾಳಿಯ ಕರಾಳ ಘಟನೆಗಳು ಬಯಲಾಗುತ್ತಿದೆ. ಇದೇ ಬೊಂಡಿ ಬೀಚ್‌ನಲ್ಲಿ ಭಾನುವಾರದ ರಜಾ ದಿನ ಕಳೆಯಲು ಹೋದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ಕರಾಳ ಅನುಭವವನ್ನು ಮೈಕಲ್ ವಾನ್ ಹೇಳಿಕೊಂಡಿದ್ದಾರೆ.
2025ರ ಆ್ಯಶಸ್ ಟೆಸ್ಟ್ ಸರಣಿ ನಡೆಯುತ್ತಿದೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಕಾಮಂಟೇಟರಿ, ವಿಶ್ಲೇಷಣೆಗಾಗಿ ಮೈಕಲ್ ವಾನ್ ಸಿಡ್ನಿಯಲ್ಲಿ ಬೀಡು ಬಿಟ್ಟಿದ್ದಾರೆ. ಇಂದು ರಜಾ ದಿನವಾದ ಕಾರಣ ಮೈಕಲ್ ವಾನ್ ಸಿಡ್ನಿಯ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾದ ಬೊಂಡಿ ಬೀಚ್‌ಗೆ ತೆರಳಿದ್ದಾರೆ. ಇದೇ ಬೀಚ್‌ನಲ್ಲಿ ಯಹೂದಿಗಳ ಹನುಖ್ಹಾ ಹಬ್ಬಕೂಡ ಆಚರಿಸಲಾಗುತಿತ್ತು. ಆದರೆ ಏಕಾಏಕಿ ಗುಂಡಿನ ದಾಳಿ ಶುರುವಾಗಿದೆ. ಗುಂಡಿನ ದಾಳಿ ನಡೆಯುವ ಸ್ಥಳದ ಪಕ್ಕದಲ್ಲೇ ಇದ್ದ ಕೋಣೆಯಲ್ಲಿದ್ದ ಮೈಕಲ್ ವಾನ್ ಜೀವ ಭಯದಿಂದ ಒದ್ದಾಡಿದ್ದಾರೆ. ತಮ್ಮ ಕೋಣೆಯ ಬಾಗಿಲು ಲಾಕ್ ಮಾಡಿ ಭಯದಿಂದ ಒಳಗೆ ಕುಳಿತುಕೊಂಡಿದ್ದಾರೆ. ಗುಂಡಿನ ಮೊರೆತದ ಶಬ್ಬಗಳು ಪದೇ ಪದೇ ಕೇಳಿಸುತ್ತಿತ್ತು ಎಂದು ವಾನ್ ಕರಾಳ ಘಟನೆಯನ್ನು ಹೇಳಿಕೊಂಡಿದ್ದಾರೆ.
ಗುಂಡಿನ ದಾಳಿ ಆರಂಭಗೊಳ್ಳುತ್ತಿದ್ದಂತೆ ಯಹೂದಿಗಳು ದಿಕ್ಕಾಪಾಲಾಗಿ ಒಡಲು ಆರಂಭಿಸಿದ್ದಾರೆ. ಈ ವೇಳೆ ಹೊರಗಡೆ ಇದ್ದ ಮೈಕಲ್ ವಾನ್, ತಕ್ಷಣ ತಮ್ಮ ಕೋಣೆ ಸೇರಿಕೊಂಡು ಬಾಗಿಲು ಲಾಕ್ ಮಾಡಿದ್ದಾರೆ. ಬೊಂಡಿ ಅನುಭವ ಭಯಾನಕ. ಸದ್ಯ ಸುರಕ್ಷಿತವಾಗಿ ಮನೆ ತಲುಪಿದ್ದೇನೆ. ಈ ಅಪಾಯದ ಸಂದರ್ಭದಲ್ಲಿ ತುರ್ತು ಸೇವೆ ನೀಡಿದ ತಂಡಕ್ಕೆ ಧನ್ಯವಾದ. ಇದೇ ವೇಳೆ ಓರ್ವ ಉಗ್ರನ ಬರಿಗೈಯಲ್ಲಿ ಹಿಡಿದು ಗನ್ ಕಸಿದ ವ್ಯಕ್ತಿಗೆ ಸಲಾಂ. ಘಟನೆಯಲ್ಲಿ ತುತ್ತಾದ ಎಲ್ಲರ ಜೊತೆಗಿದ್ದೇನೆ ಎಂದು ಮೈಕಲ್ ವಾನ್ ಹೇಳಿದ್ದಾರೆ.
ಬೊಂಡಿ ಬೀಚ್‌ನಲ್ಲಿ ಯಹೂದಿಗಳು ಹಬ್ಬ ಆಚರಿಸುತ್ತಿದ್ದಂತೆ ಇಬ್ಬರು ಗನ್ ಹಿಡಿದು ಬಂದ ಉಗ್ರರು ದಾಳಿ ನಡೆಸಿದ್ದಾರೆ ಯಹೂದಿಗಳ ಟಾರ್ಗೆಟ್ ಮಾಡಿ ಈ ದಾಳಿ ನಡೆಸಲಾಗಿತ್ತು. ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದಾರೆ. ಪೊಲೀಸರು ಉಗ್ರರ ವಿರುದ್ದ ಗುಂಡಿನ ಚಕಮಕಿ ನಡೆಸಿದ್ದಾರೆ. ಓರ್ವ ಉಗ್ರನ ಪೊಲೀಸರು ಹತ್ಯೆ ಮಾಡಿದ್ದಾರೆ. ಮತ್ತೊರ್ವನ ಅರೆಸ್ಟ್ ಮಾಡಿದ್ದಾರೆ. ಘಟನೆಗೆ ಆಸ್ಟ್ರೇಲಿಯಾ ಪ್ರಧಾನಿ ಆ್ಯಂಥೋನಿ ಆಲ್ಬನೀಸ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದರೆ. ಇದೇ ವೇಳೆ ಗಾಯಾಳುಗಳಿಗೆ ಎಲ್ಲಾ ವ್ಯವಸ್ಥೆ ಮಾಡಲು ಸೂಚಿಸಿದ್ದಾರೆ. ನಾಗರೀಕರು ಪೊಲೀಸ್ ಸೂಚನೆಯನ್ನು ಪಾಲಿಸಲು ಮನವಿ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.