U-19 World Cup 2024: ಸೂಪರ್ ಸಿಕ್ಸ್‌ನಲ್ಲಿಂದು ಭಾರತ vs ನ್ಯೂಜಿಲೆಂಡ್ ಫೈಟ್

By Kannadaprabha News  |  First Published Jan 30, 2024, 11:50 AM IST

‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಪರಿಣಾಮ ಭಾರತ ಈ ಪಂದ್ಯವನ್ನೂ ಇಲ್ಲಿನ ಮನ್ಗುವಾಂಗ್ ಓವಲ್ ಕ್ರೀಡಾಂಗಣದಲ್ಲೇ ಆಡುವ ಅವಕಾಶ ಪಡೆದಿದ್ದು, ಇದೇ ಮೈದಾನದಲ್ಲಿ ಗುಂಪು ಹಂತದ ಎಲ್ಲಾ ಮೂರು ಪಂದ್ಯಗಳನ್ನಾಡಿ ಭಾರತ ಜಯಿಸಿತ್ತು. ಗುಂಪು ಹಂತದಲ್ಲಿ ಭಾರತ ಆಲ್ರೌಂಡ್ ಪ್ರದರ್ಶನ ನೀಡಿದ್ದರೂ, ಕೆಲ ಆಟಗಾರರು ಇನ್ನಷ್ಟೇ ತಮ್ಮ ಆಯ್ಕೆ ಸಮರ್ಥಿಸಿಕೊಳ್ಳಬೇಕಿದೆ.


ಬ್ಲೂಮ್‌ಫೌಂಟೇನ್(ಜ.30): ಗುಂಪು ಹಂತದಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಅಂಡರ್-19 ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿರುವ ಭಾರತ ತಂಡವು, ಸೂಪರ್-6 ಹಂತದ ತನ್ನ ಮೊದಲ ಪಂದ್ಯದಲ್ಲಿ ಮಂಗಳವಾರ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ.

‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದ ಪರಿಣಾಮ ಭಾರತ ಈ ಪಂದ್ಯವನ್ನೂ ಇಲ್ಲಿನ ಮನ್ಗುವಾಂಗ್ ಓವಲ್ ಕ್ರೀಡಾಂಗಣದಲ್ಲೇ ಆಡುವ ಅವಕಾಶ ಪಡೆದಿದ್ದು, ಇದೇ ಮೈದಾನದಲ್ಲಿ ಗುಂಪು ಹಂತದ ಎಲ್ಲಾ ಮೂರು ಪಂದ್ಯಗಳನ್ನಾಡಿ ಭಾರತ ಜಯಿಸಿತ್ತು. ಗುಂಪು ಹಂತದಲ್ಲಿ ಭಾರತ ಆಲ್ರೌಂಡ್ ಪ್ರದರ್ಶನ ನೀಡಿದ್ದರೂ, ಕೆಲ ಆಟಗಾರರು ಇನ್ನಷ್ಟೇ ತಮ್ಮ ಆಯ್ಕೆ ಸಮರ್ಥಿಸಿಕೊಳ್ಳಬೇಕಿದೆ.

Latest Videos

undefined

ವಿರಾಟ್ ಕೊಹ್ಲಿ ನನ್ನ ಮೇಲೆ ಉಗುಳಿದ್ದರು: ಗಂಭೀರ ಆರೋಪ ಮಾಡಿದ ದಕ್ಷಿಣ ಆಫ್ರಿಕಾ ಮಾಜಿ ನಾಯಕ..!

ಭಾರತ ಗುಂಪು ಹಂತದ ಮೂರೂ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿ ದೊಡ್ಡ ಮೊತ್ತ ದಾಖಲಿಸಿತ್ತು. ಐರ್ಲೆಂಡ್ ವಿರುದ್ಧ ಮುಷೀರ್ ಖಾನ್, ಅಮೆರಿಕದ ವಿರುದ್ಧ ಅರ್ಶಿಣ್ ಕುಲ್ಕರ್ಣಿ ಶತಕ ಸಿಡಿಸಿದ್ದರು. ನಾಯಕ ಉದಯ್ ಸಹರನ್ ಉಪಯುಕ್ತ ಕೊಡುಗೆಗಳನ್ನು ನೀಡಿದ್ದು, ಆದರ್ಶ್ ಸಿಂಗ್ ಸಹ ಮಿಂಚಿದ್ದಾರೆ. ಸೌಮಿ ಪಾಂಡೆ ಹಾಗೂ ನಮನ್ ತಿವಾರಿ ತಲಾ 8 ವಿಕೆಟ್ ಗಳನ್ನು ಕಬಳಿಸಿದ್ದು, ಇವರಿಬ್ಬರ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ.

ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಸೂಪರ್-6 ಮಾದರಿ ಹೇಗೆ?

ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಒಟ್ಟು 16 ತಂಡಗಳ ಪೈಕಿ ಸೂಪರ್-6 ಹಂತಕ್ಕೆ 12 ತಂಡಗಳು ಕಾಲಿಟ್ಟಿದ್ದು, ತಲಾ 6 ತಂಡಗಳ ಎರಡು ಗುಂಪುಗಳನ್ನು ರಚಿಸಲಾಗಿದೆ. ಸೂಪರ್-6ಗೆ ಕಾಲಿಟ್ಟಿರುವ ತಂಡಗಳ ಪೈಕಿ ಈಗಾಗಲೇ ಗುಂಪು ಹಂತದಲ್ಲಿ ಆ ತಂಡವನ್ನು ಎದುರಿಸಿದ್ದರೆ, ಆ ಪಂದ್ಯದಲ್ಲಿ ಗಳಿಸಿದ ಅಂಕ, ನೆಟ್ ರನ್‌ರೇಟ್ ಸೂಪರ್- 6ನಲ್ಲೂ ಪರಿಗಣಿಸಲ್ಪಡುತ್ತದೆ.

ಈ ಕ್ರಿಕೆಟಿಗನ ಬಳಿಯಿದೆ ₹1.5 ಲಕ್ಷ ಕೋಟಿ ಸಂಪತ್ತು..! ಈತನ ಪಿತ್ರಾರ್ಜಿತ ಆಸ್ತಿಯೇ 70 ಸಾವಿರ ಕೋಟಿ..!

ಭಾರತ ಗುಂಪು ಹಂತದಲ್ಲಿ ಬಾಂಗ್ಲಾ, ಐರ್ಲೆಂಡ್ ತಂಡಗಳನ್ನು ಸೋಲಿಸಿತ್ತು. ಹೀಗಾಗಿ, ಭಾರತ ಸೂಪರ್-6 ಹಂತದ ಗುಂಪು-1ರಲ್ಲಿ 4 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಸೂಪರ್-6 ಹಂತದಲ್ಲಿ ಭಾರತಕ್ಕೆ ನ್ಯೂಜಿಲೆಂಡ್, ನೇಪಾಳ (ಫೆ.2) ಎದುರಾ ಗಲಿದ್ದು, ಗುಂಪಿನಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆದರೆ ಸೆಮೀಸ್‌ಗೆ ಪ್ರವೇಶ ಸಿಗಲಿದೆ. ಫೆ.6, ಫೆ.8ರಂದು ಕ್ರಮವಾಗಿ 1ನೇ ಹಾಗೂ 2ನೇ ಸೆಮೀಸ್ ನಡೆಯಲಿದ್ದು, ಫೆ.11ಕ್ಕೆ ಫೈನಲ್ ನಡೆಯಲಿದೆ. 
 

click me!