ಭಾರತದ ಕೈತಪ್ಪಿದ ಕಿರಿಯರ ಏಷ್ಯಾ ಕಪ್‌: ಬಾಂಗ್ಲಾ ವಿರುದ್ಧ ಫೈನಲ್‌ನಲ್ಲಿ ಸೋಲು!

Published : Dec 09, 2024, 10:38 AM IST
ಭಾರತದ ಕೈತಪ್ಪಿದ ಕಿರಿಯರ ಏಷ್ಯಾ ಕಪ್‌: ಬಾಂಗ್ಲಾ ವಿರುದ್ಧ ಫೈನಲ್‌ನಲ್ಲಿ ಸೋಲು!

ಸಾರಾಂಶ

ಅಂಡರ್-19 ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ 59 ರನ್‌ಗಳಿಂದ ಸೋಲನುಭವಿಸಿದೆ. ಬಾಂಗ್ಲಾದೇಶ ತಂಡವು ಸತತ ಎರಡನೇ ಬಾರಿಗೆ ಟ್ರೋಫಿ ಗೆದ್ದುಕೊಂಡಿದೆ. ಭಾರತ ತಂಡವು 198 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿ 139 ರನ್‌ಗಳಿಗೆ ಆಲೌಟ್ ಆಯಿತು.

ದುಬೈ: ಅಂಡರ್‌-19 ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ 9ನೇ ಬಾರಿ ಚಾಂಪಿಯನ್‌ ಎನಿಸಿಕೊಳ್ಳುವ ಭಾರತದ ಕನಸು ಭಗ್ನಗೊಂಡಿದೆ. ಭಾನುವಾರ ನಡೆದ 11ನೇ ಆವೃತ್ತಿ ಟೂರ್ನಿಯ ಫೈನಲ್‌ನಲ್ಲಿ ಭಾರತಕ್ಕೆ ಬಾಂಗ್ಲಾದೇಶ ವಿರುದ್ಧ 59 ರನ್‌ ಆಘಾತಕಾರಿ ಸೋಲು ಎದುರಾಯಿತು. ಬಾಂಗ್ಲಾ ಸತತ 2ನೇ ಬಾರಿ ಟ್ರೋಫಿಗೆ ಮುತ್ತಿಟ್ಟಿತು.

ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ 49.1 ಓವರ್‌ಗಳಲ್ಲಿ 198 ರನ್‌ಗೆ ಆಲೌಟಾಯಿತು. ರಿಜಾನ್‌ ಹೊಸನ್‌ 47, ಮೊಹಮದ್‌ ಶಿಹಾಬ್‌ 40, ಫರೀದ್‌ ಹಸನ್‌ 39 ರನ್‌ ಗಳಿಸಿದರು. ಭಾರತದ ಪರ ಯುಧಜಿತ್‌ ಗುಹಾ, ಚೇತನ್‌ ಶರ್ಮಾ, ಹಾರ್ದಿಕ್‌ ರಾಜ್‌ ತಲಾ 2 ವಿಕೆಟ್‌ ಕಿತ್ತರು.

ಸುಲಭ ಗುರಿ ಸಿಕ್ಕರೂ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ ಭಾರತ 35.2 ಓವರ್‌ಗಳಲ್ಲಿ 139 ರನ್‌ಗೆ ಆಲೌಟಾಯಿತು. ನಾಯಕ ಮೊಹಮದ್‌ ಅಮಾನ್‌(26) ತಂಡದ ಪರ ಗರಿಷ್ಠ ವೈಯಕ್ತಿಕ ಮೊತ್ತ ದಾಖಲಿಸಿದರು. ಹಾರ್ದಿಕ್‌ ರಾಜ್‌ 24, ಸಿದ್ಧಾರ್ಥ್‌ 20, ಕಾರ್ತಿಕೇಯ 21 ರನ್‌ ಗಳಿಸಿದರು. ಇಕ್ಬಾಸ್ ಹೊಸಲ್‌ 3 ವಿಕೆಟ್‌ ಕಿತ್ತರು.

ಕೇವಲ 19 ರನ್ ಟಾರ್ಗೆಟ್ ನೀಡಿ ಮುಗ್ಗರಿಸಿದ ಭಾರತ,ಕಣ್ಣು ಕೆಂಪಾಗಿಸಿದ ಪಿಂಕ್ ಬಾಲ್ ಟೆಸ್ಟ್ ಫಲಿತಾಂಶ!

ಸ್ಕೋರ್‌: ಬಾಂಗ್ಲಾ 49.1 ಓವರಲ್ಲಿ 198/10 (ರಿಜಾನ್‌ 47, ಶಿಹಾಬ್‌ 40, ಯುಧಜಿತ್‌ 2-29), ಭಾರತ 35.2 ಓವರಲ್ಲಿ 139/10 (ಅಮಾನ್‌ 26, ಇಕ್ಬಾಲ್‌ 3-24)

ಪಂದ್ಯಶ್ರೇಷ್ಠ: ಇಕ್ಬಾಲ್‌ ಹೊಸೈನ್.

01ನೇ ಸೋಲು: ಭಾರತ ಅಂಡರ್‌-19 ಏಷ್ಯಾಕಪ್‌ ಫೈನಲ್‌ನಲ್ಲಿ ಸೋತಿದ್ದು ಇದೇ ಮೊದಲು. ಈ ಹಿಂದೆ 8 ಬಾರಿಯೂ ಗೆದ್ದಿತ್ತು.

02ನೇ ಟ್ರೋಫಿ: ಬಾಂಗ್ಲಾ ಸತತ 2ನೇ ಟ್ರೋಫಿ ಎತ್ತಿ ಹಿಡಿಯಿತು. 2+ ಬಾರಿ ಕಪ್‌ ಗೆದ್ದ ಕೇವಲ 2ನೇ ತಂಡ.

ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿ: ಇಂದಿನಿಂದ ಬೆಂಗಳೂರಿನಲ್ಲಿ ನಾಕೌಟ್‌

ಬೆಂಗಳೂರು: ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ನಾಕೌಟ್‌ ಹಂತದ ಪಂದ್ಯಗಳು ಸೋಮವಾರದಿಂದ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ. 2 ಪ್ರಿ ಕ್ವಾರ್ಟರ್‌ ಫೈನಲ್‌, 4 ಕ್ವಾರ್ಟರ್‌, 2 ಸೆಮೀಸ್‌ ಹಾಗೂ ಫೈನಲ್ ಪಂದ್ಯಕ್ಕೆ ಬೆಂಗಳೂರು ಆತಿಥ್ಯ ವಹಿಸಲಿದೆ. ಸೋಮವಾರ ಬೆಂಗಾಲ್‌-ಚಂಡೀಗಢ, ಆಂಧ್ರ-ಉತ್ತರ ಪ್ರದೇಶ ತಂಡಗಳು ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸೆಣಸಾಡಲಿವೆ. ಡಿ.11ಕ್ಕೆ ಕ್ವಾರ್ಟರ್‌ ಫೈನಲ್‌, ಡಿ.13ಕ್ಕೆ ಸೆಮಿಫೈನಲ್‌, ಡಿ.15ರಂದು ಫೈನಲ್‌ ಪಂದ್ಯ ನಡೆಯಲಿವೆ.

ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾಗೆ ಅನ್ಯಾಯ! ಕಾಂಗರೂ ನೆಲದಲ್ಲಿ ಮಹಾ ಮೋಸ!

ಕೂಚ್‌ ಬೆಹಾರ್‌: ರಾಜ್ಯಕ್ಕೆ ಇನ್ನಿಂಗ್ಸ್‌, 200 ರನ್‌ ಜಯ

ಬೆಂಗಳೂರು: ಕೂಚ್‌ ಬೆಹಾರ್‌ ಅಂಡರ್‌-19 ರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ಹ್ಯಾಟ್ರಿಕ್‌ ಗೆಲುವು ಸಾಧಿಸಿದೆ. ತಂಡ ಮೇಘಾಲಯ ವಿರುದ್ಧ ಇನ್ನಿಂಗ್ಸ್‌ ಹಾಗೂ 200 ರನ್‌ ಅಂತರದಲ್ಲಿ ಬೃಹತ್‌ ಜಯ ದಾಖಲಿಸಿತು. ತಂಡ ಸದ್ಯ ‘ಎ’ ಗುಂಪಿನಲ್ಲಿ ಆಡಿರುವ 5 ಪಂದ್ಯಗಳಲ್ಲಿ 20 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಮೇಘಾಲಯ 212ಕ್ಕೆ ಆಲೌಟಾಗಿತ್ತು. ಕರ್ನಾಟಕ 5 ವಿಕೆಟ್‌ಗೆ 503 ರನ್‌ ಡಿಕ್ಲೇರ್‌ ಘೋಷಿಸಿತ್ತು. 2ನೇ ಇನ್ನಿಂಗ್ಸ್‌ನಲ್ಲಿ ಮೇಘಾಲಯ ಕೇವಲ 91 ರನ್‌ಗೆ ಆಲೌಟಾಯಿತು.
 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

RCB ಅಭಿಮಾನಿಗಳ ಹೊಸ ಕ್ರಶ್ ಲಾರೆನ್ ಬೆಲ್; ಈಕೆ ಅಪ್ಸರೆಗಿಂತ ಕಮ್ಮಿಯೇನಿಲ್ಲ!
WPL 2026: ಎಲ್ಲಾ ತಂಡಗಳ ನಾಯಕಿಯರ ಸಂಬಳ ಎಷ್ಟು? ಸ್ಮೃತಿ ಸಂಬಳ ಇಷ್ಟೊಂದಾ?