
ನವದೆಹಲಿ(ಸೆ.29): ಮುಂಬರುವ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯಲ್ಲಿ 10 ತಂಡಗಳು ಕಣಕ್ಕಿಳಿಯುವುದು ಬಹುತೇಕ ಖಚಿತ ಎನಿಸಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಐಪಿಎಲ್ (IPL) ಸೇರಲಿರುವ ಎರಡು ಹೊಸ ತಂಡಗಳ ಹೆಸರನ್ನು ಅಕ್ಟೋಬರ್ 25ರಂದು ಘೋಷಿಸಲಿದೆ
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಬರುವ ಅಕ್ಟೋಬರ್ 25ರಂದು ಎರಡು ಹೊಸ ತಂಡಗಳ ಹೆಸರನ್ನು ಘೋಷಿಸಿದ ಬಳಿಕ ತಕ್ಷಣವೇ 2023-2027ರವರೆಗಿನ ಐಪಿಎಲ್ ಮಾಧ್ಯಮ ಪ್ರಸಾರದ ಹಕ್ಕಿನ ಟೆಂಡರ್ ಕರೆಯಲಾಗುವುದು ಎಂದು ಬಿಸಿಸಿಐ ತಿಳಿಸಿದೆ.
ಈ ಮೊದಲು ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಕೇವಲ ಒಂದು ತಂಡ ಸೇರ್ಪಡೆಯಾಗಲಿದೆ ಎಂದು ವರದಿಯಾಗಿತ್ತು. ಇದಾದ ಬಳಿಕ ಎರಡು ಹೊಸ ತಂಡಗಳ ಸೇರ್ಪಡೆಗೆ ಬಿಸಿಸಿಐ (BCCI) ಒಲವು ತೋರಿತ್ತು ಎಂದು ವರದಿಯಾಗಿದೆ. ಹೀಗಾಗಿ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹೊಸದಾಗಿ ಎಷ್ಟು ತಂಡಗಳು ಸೇರ್ಪಡೆಯಾಗಲಿವೆ ಎನ್ನುವುದರ ಕುರಿತಂತೆ ಯಾವುದೇ ಸ್ಪಷ್ಟ ಮಾಹಿತಿ ಹೊರಬಿದ್ದಿರಲಿಲ್ಲ. ಆದರೆ ಈಗ ಸ್ವತಃ ಬಿಸಿಸಿಐ ಈ ಕುರಿತಂತೆ ಸ್ಪಷ್ಟ ಮಾಹಿತಿ ಹೊರಹಾಕಿದ್ದು ಇನ್ನೆರಡು ತಂಡಗಳು ಐಪಿಎಲ್‌ನಲ್ಲಿ ಸೇರ್ಪಡೆಯಾಗುವುದು ಖಚಿತವೆನಿಸಿದೆ.
IPL 2021 ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ..! ಏಕಕಾಲದಲ್ಲಿ ನಡೆಯಲಿವೆ 2 ಪಂದ್ಯ.!
ಬಿಸಿಸಿಐ ಹೊಸ ತಂಡಗಳು ಖರೀದಿಸಲು ಆಸಕ್ತಿಯಿದ್ದವರು 10 ಲಕ್ಷ ರುಪಾಯಿ ಹಣ ಪಾವತಿ ಮಾಡಿ ಅರ್ಜಿ ಪಡೆಯಲು ಸೂಚಿಸಿತ್ತು. ಇದಕ್ಕೆ ಈ ಮೊದಲು ಅಕ್ಟೋಬರ್ 05ರ ವರೆಗೆ ಡೆಡ್‌ಲೈನ್ ನೀಡಿತ್ತು. ಇದೀಗ ಆ ಗಡುವನ್ನು ಅಕ್ಟೋಬರ್ 10ಕ್ಕೆ ವಿಸ್ತರಿಸಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ನಡೆದ ಮರುದಿನ ಅಂದರೆ ಅಕ್ಟೋಬರ್ 25ರಂದು ಐಪಿಎಲ್‌ನಲ್ಲಿ ಎರಡು ಹೊಸ ತಂಡಗಳ ಹೆಸರು ಅಧಿಕೃತವಾಗಲಿದೆ. ಈಗಾಗಲೇ 8 ತಂಡಗಳು ಐಪಿಎಲ್‌ನಲ್ಲಿ ಕಾದಾಡುತ್ತಿವೆ.
ಈಗಾಗಲೇ ಮುಂಬರುವ ಐಪಿಎಲ್ ಟೂರ್ನಿಗೆ ತಂಡಗಳನ್ನು ಖರೀದಿಸಲು ಹಲವು ಉದ್ಯಮಿಗಳು ಆಸಕ್ತಿ ತೋರಿದ್ದಾರೆ. ಈ ಪೈಕಿ ಅದಾನಿ ಗ್ರೂಪ್ ಹಾಗೂ ಸಂಜೀವ್ ಗೋಯೆಂಕಾ ಗ್ರೂಪ್ ಈಗಾಗಲೇ ಐಪಿಎಲ್ ತಂಡ ಖರೀದಿಸಲು ಹೆಚ್ಚು ಒಲವು ತೋರಿದೆ ಎಂದು ವರದಿಯಾಗಿದೆ. ಹೊಸ ತಂಡಗಳಿಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಹಾಗೂ ಲಖನೌದ ಏಕಾನಾ ಸ್ಟೇಡಿಯಂ ತವರಿನ ಕ್ರೀಡಾಂಗಣಗಳೆನಿಸಿಕೊಳ್ಳಲಿವೆ ಎಂದು ವರದಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.