
ನವದೆಹಲಿ(ಸೆ.29): ಇದೇ ಮೊದಲ ಬಾರಿಗೆ ಐಪಿಎಲ್ (IPL 2021) ಇತಿಹಾಸದಲ್ಲಿ ಎರಡು ಲೀಗ್ ಪಂದ್ಯಗಳನ್ನು ಒಟ್ಟಿಗೆ ನಡೆಸಲು ಬಿಸಿಸಿಐ (BCCI) ನಿರ್ಧರಿಸಿದೆ. 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಲೀಗ್ ಹಂತದ ಕೊನೆಯ ಎರಡು ಪಂದ್ಯಗಳು ಒಂದೇ ದಿನ ಒಂದೇ ಸಮಯದಲ್ಲಿ ನಡೆಯಲಿವೆ.
ಸಾಮಾನ್ಯವಾಗಿ ಎರಡು ಪಂದ್ಯಗಳು ನಡೆಯುವ ದಿನದಂದು ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ ಹಾಗೂ ಎರಡನೇ ಪಂದ್ಯ ಸಂಜೆ 7.30ಕ್ಕೆ ಆರಂಭವಾಗುತ್ತವೆ. ಆದರೆ ಅಕ್ಟೋಬರ್ 08ರಂದು ಸನ್‌ರೈಸರ್ಸ್ ಹೈದರಾಬಾದ್ (SunRisers Hyderabad)- ಮುಂಬೈ ಇಂಡಿಯನ್ಸ್ (Mumbai Indians), ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore)- ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಪಂದ್ಯಗಳು ಸಂಜೆ 7.30ಕ್ಕೆ ಆರಂಭಗೊಳ್ಳಲಿವೆ.
IPL 2021: ಟಿ20 ಕ್ರಿಕೆಟಲ್ಲಿ ಹೊಸ ವಿಶ್ವ ದಾಖಲೆ ಬರೆದ ಪೊಲ್ಲಾರ್ಡ್!
ಬೇರೆ ತಂಡಗಳ ಫಲಿತಾಂಶವನ್ನು ಗಮನದಲ್ಲಿಟ್ಟುಕೊಂಡು ಮತ್ತೊಂದು ತಂಡ ಲಾಭ ಪಡೆಯಬಾರದೆಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಇದೆಲ್ಲದರ ಜತೆಗೆ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೂ ಒಂದು ದಿನ ಬಿಡುವ ಸಿಕ್ಕಂತೆ ಆಗಲಿದೆ. ಅಕ್ಟೋಬರ್ 10ರಂದು ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ.
ಕ್ರಿಕೆಟ್ ಜೂಜಿನಲ್ಲಿ ಬಿಹಾರ ಕ್ಷೌರಿಕನಿಗೆ 1 ಕೋಟಿ ರು.!
ಪಾಟ್ನಾ: ಕ್ರೀಡಾ ಆ್ಯಪ್‌ವೊಂದರಲ್ಲಿ ಕ್ರಿಕೆಟ್ ಜೂಜು ಆಡಿದ್ದ ಬಿಹಾರದ ಕ್ಷೌರಿಕರೊಬ್ಬರು ರಾತ್ರೋರಾತ್ರಿ ಕೋಟ್ಯಧಿಪತಿಯಾಗಿದ್ದಾರೆ. ಮಧುಬಾನಿ ಜಿಲ್ಲೆಯ ಅಶೋಕ್ ಕುಮಾರ್ ಎಂಬವರು ಭಾನುವಾರ ನಡೆದ ಕೋಲ್ಕತಾ ಹಾಗೂ ಚೆನ್ನೈ ನಡುವಿನ ಪಂದ್ಯದ ಮೂಲಕ 1 ಕೋಟಿ ರು. ಗೆದ್ದಿದ್ದಾರೆ.
IPL 2021 ಆರ್‌ಸಿಬಿಗಿಂದು ರಾಜಸ್ಥಾನ ರಾಯಲ್ಸ್ ಚಾಲೆಂಜ್..!
50 ರು. ಶುಲ್ಕ ಕಟ್ಟಿ ಇತ್ತಂಡಗಳ ಆಟಗಾರರನ್ನು ಆಯ್ಕೆ ಮಾಡಿದ್ದ ಅವರು ಅದರಲ್ಲಿ ಜಾಕ್‌ಪಾಟ್ ಹೊಡೆದಿದ್ದಾರೆ. ‘ಹಣ ಗೆದ್ದ ಆ ರಾತ್ರಿ ನನಗೆ ನಿದ್ದೆ ಬರಲೇ ಇಲ್ಲ. ಇಷ್ಟು ಹಣ ಗೆದ್ದರೂ ನಾನು ಕ್ಷೌರಿಕ ವೃತ್ತಿಯಲ್ಲೇ ಮುಂದುವರಿಯುತ್ತೇನೆ’ ಎಂದು ಅಶೋಕ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.