2022ರ ಐಪಿಎಲ್ ನಲ್ಲಿ RCB ತಂಡದ ಪರವಾಗಿ ಗರಿಷ್ಠ ಟ್ವೀಟ್, ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ನಂ.1!

By Santosh NaikFirst Published Jun 2, 2022, 5:54 PM IST
Highlights

ಐಪಿಎಲ್ ವಾರ್ ನಲ್ಲಿ ಸೋತರೇನಂತೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಷಿಯನ್ ಮೀಡಿಯಾ ವಾರ್ ನಲ್ಲಿ ಭರ್ಜರಿ ಗೆಲುವು ಕಂಡಿದೆ. ಟ್ವಿಟರ್ ಇಂಡಿಯಾ ನೀಡಿರುವ ಮಾಹಿತಿಯ ಪ್ರಕಾರ 15ನೇ ಆವೃತ್ತಿಯ ಐಪಿಎಲ್ ನಲ್ಲಿ ಆರ್ ಸಿಬಿ ತಂಡದ ಕುರಿತಾಗಿ ಗರಿಷ್ಠ ಟ್ವೀಟ್ ಗಳು ದಾಖಲಾಗಿದ್ದರೆ, ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಬಗ್ಗೆ ಹೆಚ್ಚು ಚರ್ಚೆಯಾಗಿದೆ.

ಬೆಂಗಳೂರು (ಜೂನ್ 2): ಅಭಿಮಾನಿಗಳ ವಿಚಾರದಲ್ಲಿ ಐಪಿಎಲ್ ಹಾಟ್ ಕೇಕ್ ಟೀಮ್ ರಾಯಲ್ ಚಾಲೆಂಜರ್ಸ್ (Royal Challengers Bangalore) ಪಾಲಿಗೆ ಈವರೆಗೂ ಲೀಗ್ ಟ್ರೋಫಿ ಗೆಲ್ಲೋಕೆ ಸಾಧ್ಯವಾಗಿಲ್ಲ. ಆದರೆ, ತನ್ನ ಫ್ಯಾನ್ ಬೇಸ್ ಕಾರಣದಿಂದಾಗಿ ಐಪಿಎಲ್ ನ ಅತ್ಯಂತ ಪ್ರಖ್ಯಾತ ಟೀಮ್ ಗಳಲ್ಲಿ ಒಂದಾಗಿದೆ. ಈಗ ತಾನೆ ಮುಕ್ತಾಯ ಕಂಡ ಐಪಿಎಲ್ ನಲ್ಲಿ (IPL) ಆರ್ ಸಿಬಿ (RCB) ತಂಡ ಬೆಂಗಳೂರಿನಲ್ಲಿ ಒಂದೇ ಒಂದು ಪಂದ್ಯ ಆಡಿರಲಿಲ್ಲ. ಆರ್ ಸಿಬಿ.. ಆರ್ ಸಿಬಿ ಎನ್ನುವ ಅಭಿಮಾನಿಗಳ ಕಿರುಚಾಟ ಈ ಬಾರಿ ಕೇಳಲು ಸಿಕ್ಕಿರಲಿಲ್ಲ.

ಆರ್ ಸಿಬಿ ದಿನಕಳೆದಂತೆ ತನ್ನ ಪ್ರಖ್ಯಾತಿಯ ಉತ್ತುಂಗಕ್ಕೆ ಏರುತ್ತಿದೆ ಎನ್ನುವ ಮಾಹಿತಿಯಲ್ಲಿ, 2022ರ ಐಪಿಎಲ್ ನಲ್ಲಿ ಆರ್ ಸಿಬಿ ತಂಡದ ಕುರಿತಾಗಿ ಗರಿಷ್ಠ ಟ್ವೀಟ್ ಗಳು ಬಂದಿವೆ ಎಂದು ಟ್ವಿಟರ್ ಇಂಡಿಯಾ ತಿಳಿಸಿದೆ. ಎರಡನೇ ಸ್ಥಾನದಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವಿದ್ದರೆ, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕುರಿತಾಗಿ ಮೈಕ್ರೋ ಬ್ಲಾಗಿಂಗ್ ಸೈಟ್ ನಲ್ಲಿ ಗರಿಷ್ಠ ಟ್ವೀಟ್ ಗಳು ಬಂದಿವೆ. ಕೆಕೆಆರ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕ್ರಮವಾಗಿ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿವೆ.

ಇನ್ನು ಆಟಗಾರರ ಪಟ್ಟಿಯ ಕುರಿತಾಗಿ ಹೇಳುವುದಾದರೆ, ಆರ್ ಸಿಬಿ ತಂಡ ಐಕಾನ್ ಪ್ಲೇಯರ್ ವಿರಾಟ್ ಕೊಹ್ಲಿ ಪರವಾಗಿ ಗರಿಷ್ಠ ಟ್ವೀಟ್ ಗಳು ಬಂದಿವೆ. ನಂತರದ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಇದ್ದಾರೆ. ಈ ಋತುವಿನ ಆರಂಭದಲ್ಲಿ ತಂಡದ ನಾಯಕತ್ವವನ್ನು ರವೀಂದ್ರ ಜಡೇಜಾಗೆ ನೀಡಿದ್ದ ಎಂಎಸ್ ಧೋನಿ, ಲೀಗ್ ನ ಮಧ್ಯದಲ್ಲಿಯೇ ರವೀಂದ್ರ ಜಡೇಜಾರಿಂದ ನಾಯಕತ್ವವನ್ನು ಮರಳಿ ಪಡೆದುಕೊಂಡಿದ್ದರು. ಮುಂಬೈ ಇಂಡಿಯನ್ಸ್ ತಂಡದ ನಾಯಕ ರವೀಂದ್ರ ಜಡೇಜಾ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ, ಆರ್ ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ಮೊದಲ ಐದು ಸ್ಥಾನಗಳಲ್ಲಿರುವ ಇತರ ಪ್ಲೇಯರ್ ಗಳು

ಇನ್ನು ಹ್ಯಾಶ್ ಟ್ಯಾಗ್ ಬಗ್ಗೆ ಹೇಳುವುದಾದರೆ, #IPL2022 ಎನ್ನುವ ಹ್ಯಾಶ್ ಟ್ಯಾಗ್ ಅನ್ನು ದೊಡ್ಡ ಮಟ್ಟದಲ್ಲಿ ಬಳಕೆ ಮಾಡಲಾಗಿದ್ದು, ಇದು ನಂ.1 ಸ್ಥಾನದಲ್ಲಿದೆ. ನಂತರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ #whistlepodu ಹಾಗೂ #yellowlove ಇದೆ. ಆರ್ ಸಿಬಿ ತಂಡದ #playbold ಮತ್ತು #wearechallengers ಅಗ್ರ ಐದು ಸ್ಥಾನಗಳಲ್ಲಿವೆ.

ಗುಜರಾತ್ ಟೈಟಾನ್ಸ್ (@gujarat_titans) ಈ ಬಾರಿ ಟ್ರೋಫಿ ಜಯಿಸಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (@RCBTweets) ಟ್ವಿಟರ್ ಹೋರಾಟದಲ್ಲಿ ಜಯ ಕಂಡಿದೆ. ಹಾಲಿ ಋತುವಿನಲ್ಲಿ ಟ್ವೀಪಲ್ಸ್ ಗಳು ಆರ್ ಸಿಬಿ ಕುರಿತಾಗಿ ಗರಿಷ್ಠ ಟ್ವೀಟ್ ಮಾಡಿದ್ದಾರೆ. ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ (@imVKohli) ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ' ಎಂದು ಟ್ವಿಟರ್ ಇಂಡಿಯಾ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಮುಂದಿನ ಐಪಿಎಲ್​ಗೆ ಬದಲಾಗಲಿದ್ದಾರೆ ನಾಯಕರು..!

2022 ರ ಐಪಿಎಲ್ ಋತು ಮಾರ್ಚ್ 26 ರಿಂದ ಮೇ 29 ರವರೆಗೆ ನಡೆಯಿತು. ಕೆಲವು ಸ್ಮರಣೀಯ ಪ್ರದರ್ಶನಗಳನ್ನು ಕಂಡ ಎರಡು ತಿಂಗಳ ಕ್ರಿಕೆಟ್ ಹೋರಾಟದ ಬಳಿಕ, 
ಐಪಿಎಲ್ ನಲ್ಲಿ ಮೊದಲ ಬಾರಿಗೆ ಆಡಿದ ಗುಜರಾತ್ ಟೈಟಾನ್ಸ್ (ಜಿಟಿ) ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಆರ್‌ಆರ್ ವಿರುದ್ಧ ಏಳು ವಿಕೆಟ್‌ಗಳ ಜಯದೊಂದಿಗೆ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು. 

ನೀನೇ ನನಗೆ ಸರಿಯಾದ ಜೋಡಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೀಪಕ್ ಚಹಾರ್

ಹಾರ್ದಿಕ್ ಪಾಂಡ್ಯ ನೇತೃತ್ವದ ಟೈಟಾನ್ಸ್ ಲಕ್ನೋ ಸೂಪರ್ ಜೈಂಟ್ಸ್ (LSG) ಜೊತೆಗೆ 15 ನೇ ಆವೃತ್ತಿಗೆ ಮುನ್ನ ಐಪಿಎಲ್  ಸ್ಪರ್ಧೆಗೆ ಪ್ರವೇಶಿಸಿದ ಎರಡು ಹೊಸ ತಂಡಗಳಲ್ಲಿ ಒಂದಾಗಿದೆ. 2022 ರ ಐಪಿಎಲ್ ವಿಶ್ವದ ಶ್ರೀಮಂತ T20 ಲೀಗ್ ಅನ್ನು ಹಿಂದೆ ಎಂಟು ತಂಡಗಳೊಂದಿಗೆ 10-ತಂಡಗಳ ಈವೆಂಟ್‌ಗೆ ವಿಸ್ತರಿಸಿತು.

Latest Videos

click me!