Ind vs WI: ಭಾರತ-ವೆಸ್ಟ್ ಇಂಡೀಸ್ ಸರಣಿಯ ವೇಳಾಪಟ್ಟಿ ಪ್ರಕಟ..!

Published : Jun 02, 2022, 03:39 PM IST
Ind vs WI: ಭಾರತ-ವೆಸ್ಟ್ ಇಂಡೀಸ್ ಸರಣಿಯ ವೇಳಾಪಟ್ಟಿ ಪ್ರಕಟ..!

ಸಾರಾಂಶ

* ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಸೀಮಿತ ಓವರ್‌ಗಳ ಸರಣಿಯ ವೇಳಾಪಟ್ಟಿ ಪ್ರಕಟ * ವೆಸ್ಟ್ ಇಂಡೀಸ್ ಪ್ರವಾಸದಲ್ಲಿ 3 ಪಂದ್ಯಗಳ ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿ ಆಡಲಿರುವ ಭಾರತ * ಕೊನೆಯ ಎರಡು ಟಿ20 ಪಂದ್ಯಗಳಿಗೆ ಅಮೆರಿಕದ ಪ್ಲೋರಿಡಾ ಆತಿಥ್ಯ

ನವದೆಹಲಿ(ಜೂ.02): ಭಾರತ ಪುರುಷರ ಕ್ರಿಕೆಟ್ ತಂಡವು ಮುಂದಿನ ತಿಂಗಳು ಅಂದರೆ ಜುಲೈನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆಯಲ್ಲಿ 3 ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಈ ವಿಚಾರವನ್ನು ವೆಸ್ಟ್ ಇಂಡೀಸ್ ಕ್ರಿಕೆಟ್‌ ಮಂಡಳಿ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯು ಖಚಿತಪಡಿಸಿದೆ. ಜುಲೈ 22ರಿಂದ ಆಗಸ್ಟ್‌ 07ರವರೆಗೆ ಉಭಯ ತಂಡಗಳು ಒಟ್ಟು 8 ಸೀಮಿತ ಓವರ್‌ಗಳ ಪಂದ್ಯಗಳನ್ನಾಡಲಿವೆ.

ಭಾರತ ಕ್ರಿಕೆಟ್ ತಂಡವು ಸದ್ಯ ಜೂನ್ 09ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ಎದುರಿನ ಸರಣಿಗೆ ಸಜ್ಜಾಗುತ್ತಿದೆ. ಇದಾದ ಬಳಿಕ ಭಾರತ ತಂಡವು ಇಂಗ್ಲೆಂಡ್ ಹಾಗೂ ಐರ್ಲೆಂಡ್ ಎದುರು ದ್ವಿಪಕ್ಷೀಯ ಸರಣಿಯನ್ನಾಡಲಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಸೀಮಿತ ಓವರ್‌ಗಳ ಸರಣಿಯು ಜುಲೈ 17ಕ್ಕೆ ಅಂತ್ಯವಾಗಲಿದೆ. ಇಂಗ್ಲೆಂಡ್‌ನಿಂದ ನೇರವಾಗಿ ಟೀಂ ಇಂಡಿಯಾ ಆಟಗಾರರು ವೆಸ್ಟ್ ಇಂಡೀಸ್‌ನತ್ತ ಮುಖ ಮಾಡಲಿದ್ದಾರೆ. 

ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಯ ಮೊದಲ ಮೂರು ಪಂದ್ಯಗಳಿಗೆ ಟ್ರಿನಿಡ್ಯಾಡ್‌ ಅಂಡ್ ಟೊಬ್ಯಾಗೊ, ಸೇಂಟ್ ಕಿಟ್ಸ್‌&ನೇವಿಸ್ ಆತಿಥ್ಯವನ್ನು ವಹಿಸಲಿದೆ. ಕೊನೆಯ ಎರಡು ಟಿ20 ಪಂದ್ಯಗಳಿಗೆ ಅಮೆರಿಕದ ಪ್ಲೋರಿಡಾದಲ್ಲಿರುವ ಪೋರ್ಟ್‌ ಲೌಡರ್‌ಹಿಲ್ ಸಾಕ್ಷಿಯಾಗಲಿದೆ. ಮೂರು ಪಂದ್ಯಗಳ ಏಕದಿನ ಸರಣಿಯು ಜುಲೈ 22, 24 ಮತ್ತು 27ರಂದು ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿ ನಡೆಯಲಿವೆ. ಇನ್ನು 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಜುಲೈ 29ರಂದು ಬ್ರಿಯನ್ ಲಾರಾ ಸ್ಟೇಡಿಯಂನಲ್ಲಿ ನಡೆದರೆ, ಆಗಸ್ಟ್ 01 ಮತ್ತು 2ರಂದು ಸೇಂಟ್ ಕಿಟ್ಸ್‌ ವಾರ್ನರ್‌ ಪಾರ್ಕ್‌ ಮೈದಾನದಲ್ಲಿ ನಡೆಯಲಿದೆ. ಇನ್ನು ಕೊನೆಯ ಎರಡು ಪಂದ್ಯಗಳು ಆಗಸ್ಟ್ 06 ಹಾಗೂ 07ರಂದು ಪ್ಲೋರಿಡಾದಲ್ಲಿ ನಡೆಯಲಿದೆ. ಈ ಸಂಪೂರ್ಣ ಟೂರ್ನಿಯು ಫ್ಯಾನ್‌ಕೋಡ್‌(FanCode)ನಲ್ಲಿ ಪ್ರಸಾರವಾಗಲಿದೆ. 

No bio-bubble ದಕ್ಷಿಣ ಆಫ್ರಿಕಾ ಸರಣಿಗೂ ಮುನ್ನ ಗುಡ್‌ ನ್ಯೂಸ್ ನೀಡಿದ ಬಿಸಿಸಿಐ..!

ವೆಸ್ಟ್ ಇಂಡೀಸ್ ಸೀಮಿತ ಓವರ್‌ಗಳ ತಂಡದ ನಾಯಕರಾಗಿ ಇತ್ತೀಚೆಗಷ್ಟೇ ನೇಮಕವಾಗಿರುವ ನಿಕೋಲಸ್ ಪೂರನ್, ನಾವು ಯುವ ಆಟಗಾರರನ್ನೊಳಗೊಂಡ ತಂಡವನ್ನು ಹೊಂದಿದ್ದು, ಗತಕಾಲದ ವೈಭವವನ್ನು ಮರುಕಳಿಸುವಂತ ಆಟವನ್ನು ಆಡುವುದಾಗಿ ಪೂರನ್ ತಿಳಿಸಿದ್ದಾರೆ. 

ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ವೇಳಾಪಟ್ಟಿ ಹೀಗಿದೆ ನೋಡಿ

ಏಕದಿನ ಸರಣಿ ವೇಳಾಪಟ್ಟಿ

1st ODI: ಜುಲೈ 22 (ಪೋರ್ಟ್‌ ಆಫ್‌ ಸ್ಪೇನ್‌)

2nd ODI: ಜುಲೈ 24 (ಪೋರ್ಟ್‌ ಆಫ್‌ ಸ್ಪೇನ್‌)

3rd ODI: ಜುಲೈ 27 (ಪೋರ್ಟ್‌ ಆಫ್‌ ಸ್ಪೇನ್‌)

ಎಲ್ಲಾ ಏಕದಿನ ಸರಣಿಯ ಪಂದ್ಯಗಳ ನೇರಪ್ರಸಾರ  7 pm ಭಾರತೀಯ ಕಾಲಮಾನ ಆರಂಭವಾಗಲಿವೆ

ಏಕದಿನ ಸರಣಿಯ ವೇಳಾಪಟ್ಟಿ

1st T20I: ಜುಲೈ 29: (ಪೋರ್ಟ್‌ ಆಫ್‌ ಸ್ಪೇನ್‌)

2nd T20I: ಆಗಸ್ಟ್‌ 1 (ಸೇಂಟ್ಸ್ ಕಿಟ್ಸ್‌& ನೇವಿಸ್)

3rd T20I: ಆಗಸ್ಟ್‌ 2 (ಸೇಂಟ್ಸ್ ಕಿಟ್ಸ್‌& ನೇವಿಸ್)

4th T20I: ಆಗಸ್ಟ್ 6 (ಪ್ಲೋರಿಡಾ, USA)

5th T20I: ಆಗಸ್ಟ್‌ 7 (ಪ್ಲೋರಿಡಾ, USA)

ಎಲ್ಲಾ ಟಿ20 ಸರಣಿಯ ಪಂದ್ಯಗಳು ಭಾರತೀಯ ಕಾಲಮಾನ 8 pm ನಿಂದ ಆರಂಭವಾಗಲಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?