ಮುಂದಿನ ಐಪಿಎಲ್​ಗೆ ಬದಲಾಗಲಿದ್ದಾರೆ ನಾಯಕರು..!

Published : Jun 02, 2022, 03:53 PM IST
ಮುಂದಿನ ಐಪಿಎಲ್​ಗೆ ಬದಲಾಗಲಿದ್ದಾರೆ ನಾಯಕರು..!

ಸಾರಾಂಶ

2022ರ ಆವೃತ್ತಿಯ ಐಪಿಎಲ್ ಮುಕ್ತಾಯದ ಬೆನ್ನಲ್ಲಿಯೇ ಮುಂದಿನ ವರ್ಷದ ಐಪಿಎಲ್ ನಲ್ಲಿ ಯಾವೆಲ್ಲಾ ಬದಲಾವಣೆಗಳು ಆಗಬಹುದು ಎನ್ನುವ ಕುತೂಹಲಗಳು ಹುಟ್ಟಿಕೊಂಡಿವೆ. ಮೂಲಗಳ ಪ್ರಕಾರ ಮುಂದಿನ ವರ್ಷದ ಐಪಿಎಲ್ ಗೆ ನಾಲ್ಕು ತಂಡಗಳ ನಾಯಕರು ಬದಲಾಗುವ ಸೂಚನೆ ಇದೆ.

ಬೆಂಗಳೂರು (ಜೂನ್ 2): ಮಳೆ ನಿಂತರೂ ಮಳೆ ಹನಿ ನಿಲ್ಲಲ್ಲ ಅನ್ನೋ ಹಾಗೆ ಐಪಿಎಲ್ ಮುಗಿದ್ರೂ ಐಪಿಎಲ್ (IPL) ಸ್ಟೋರಿಗಳು ಮುಗಿಯುವಂತೆ ಕಾಣ್ತಿಲ್ಲ. ಪಾಯಿಂಟ್ ಟೇಬಲ್​ನಲ್ಲಿ ಟಾಪ್​-5ರಲ್ಲಿ ಸ್ಥಾನ ಪಡೆದಿರೋ ತಂಡಗಳು ಸೈಲೆಂಟ್ ಆಗಿವೆ. ಆದ್ರೆ ಉಳಿದ ಐದು ಟೀಮ್ ಫ್ರಾಂಚೈಸಿಗಳು ಮಾತ್ರ ವೈಲೆಂಟ್ ಆಗಿದ್ದಾರೆ. ಅದರಲ್ಲೂ ಒಬ್ಬರು ಸುಮ್ಮನಿದ್ದಾರೆ. ಆದ್ರೆ ನಾಲ್ಕು ತಂಡಗಳ ಫ್ರಾಂಚೈಸಿಗಳು ಮಾತ್ರ ಯಾಕೋ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದ್ರೆ ಮುಂದಿನ ವರ್ಷ ಈ ನಾಲ್ಕು ಟೀಮ್ ಕ್ಯಾಪ್ಟನ್​ಗಳು (Captains) ಬದಲಾಗೋದು ಪಕ್ಕಾ ಅನಿಸ್ತಿದೆ.

ಪಂಜಾಬ್ ಪುತ್ತರ್ ಆಗಲಿಲ್ಲ ಮಯಾಂಕ್​: ಕೆಎಲ್ ರಾಹುಲ್ (KL Rahul) ಪಂಜಾಬ್ ಕಿಂಗ್ಸ್ ಬಿಟ್ಟ ಮೇಲೆ ನಾಯಕನಾಗಿ ಮಯಾಂಕ್ ಅಗರ್ವಾಲ್ (Mayank Agarwal), ಆರಂಭದಲ್ಲಿ ಉತ್ತಮವಾಗಿಯೇ ತಂಡವನ್ನ ಲೀಡ್ ಮಾಡಿದ್ರು. ಆದ್ರೆ ಪಂಜಾಬ್ 7 ಗೆದ್ದು 7 ಸೋತು ಲೀಗ್​ನಿಂದಲೇ ಕಿಕೌಟ್ ಆಯ್ತು. ಮಯಾಂಕ್ ವೈಯಕ್ತಿಕವಾಗಿಯೂ ಕಳಪೆ ಪ್ರದರ್ಶನ ನೀಡಿದ್ರು. ಅಲ್ಲಿಗೆ ಮುಂದಿನ ಸೀಸನ್​ಗೆ ಪಂಜಾಬ್ ಕ್ಯಾಪ್ಟನ್ ಬದಲಾಗೋದು ಪಕ್ಕಾ. ಅಷ್ಟೇ ಏಕೆ. ಕೋಚ್ ಅನಿಲ್ ಕುಂಬ್ಳೆ  (Anil Kumble) ಅವಧಿಯೂ ಮುಗಿದಿದ್ದು ಅವರಿಗೂ ಗೇಟ್ ಪಾಸ್ ನೀಡೋ ಸಾಧ್ಯತೆ ಇದೆ.

ಕೆಕೆಆರ್​​ಗೆ ಶ್ರೇಯಸ್​ ತರಲಿಲ್ಲ ಶ್ರೇಯಸ್ಸು: ಬಿಡ್​ನಲ್ಲಿ ಕೋಟಿ ಕೋಟಿ ಕೊಟ್ಟು ಶ್ರೇಯಸ್ ಅಯ್ಯರ್ (Shreyas iyer) ಖರೀದಿಸಿದ ಕೆಕೆಆರ್, ಕ್ಯಾಪ್ಟನ್ ಮಾಡಿತು. ಆದ್ರೆ ಕೆಕೆಆರ್ ಲೀಗ್​ನಲ್ಲಿ ಗೆದ್ದಿದ್ದು ಜಸ್ಟ್ ಆರೇ ಮ್ಯಾಚ್. ಇದು ಸಾಲದೆಂಬಂತೆ ಸಿಒಇ ವೆಂಕಿ ಮೈಸೂರ್ ಜೊತೆ ಶ್ರೇಯಸ್ ಕಿರಿಕ್ ಬೇರೆ ಮಾಡಿಕೊಂಡಿದ್ದಾರೆ. ಅಲ್ಲಿಗೆ ನಾಯಕನಾಗಿ ಮಾತ್ರವಲ್ಲ, ಪ್ಲೇಯರ್ ಆಗಿಯೂ ಶ್ರೇಯಸ್ ಕೆಕೆಆರ್ ನಲ್ಲಿ ಉಳಿಯೋದು ಡೌಟ್. ಕ್ಯಾಪ್ಟನ್ ಆಗಲೇಬೇಕು ಅಂತ ಡೆಲ್ಲಿಯಿಂದ ಕೋಲ್ಕತ್ತಾಗೆ ಬಂದ ಶ್ರೇಯಸ್, ಮುಂದಿನ ವರ್ಷ ಮತ್ತೆ ಬಿಡ್​ಗೆ ಬರೋದರಲ್ಲಿ ಅನುಮಾನವಿಲ್ಲ.

ಧೋನಿ TO ಜಡ್ಡು.. ಜಡ್ಡು TO ಧೋನಿ.. ಧೋನಿ TO ಯಾರು..?: ಈ ಸೀಸನ್ ಐಪಿಎಲ್ ಆರಂಭಕ್ಕೂ ಮುನ್ನವೇ ಎಂಎಸ್ ಧೋನಿ (MS Dhoni) ನಾಯಕತ್ವ ಬಿಟ್ಟಿದ್ದರಿಂದ ರವೀಂದ್ರ ಜಡೇಜಾ ಅವರನ್ನ ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಪ್ಟನ್ ಮಾಡಲಾಯ್ತು. ಆದ್ರೆ ಸತತ ಸೋಲಿನಿಂದ ಕೆಂಗೆಟ್ಟ ಜಡ್ಡು, ಅರ್ಧದಲ್ಲೇ  ನಾಯತಕ್ವ ತ್ಯಜಿಸಿದ್ದರಿಂದ ಮತ್ತೆ ಧೋನಿ ನಾಯಕರಾದ್ರು. ಆದ್ರೂ ಸಿಎಸ್ ಕೆ ನಸೀಬು ಏನು ಬದಲಾಗಲಿಲ್ಲ. 14ರಲ್ಲಿ ಚೆನ್ನೈ ಗೆದ್ದಿದ್ದು ಕೇವಲ ನಾಲ್ಕನ್ನ ಮಾತ್ರ. ಮುಂದಿನ ವರ್ಷವೂ ಧೋನಿ ಐಪಿಎಲ್ ಆಡ್ತಿನಿ ಅಂತ ಹೇಳಿಬಹುದು. ಆದ್ರೆ ಅವರೇ ನಾಯಕಾಗಿರ್ತಾರೆ ಅಂತ ಹೇಳೋಕಾಗಲ್ಲ. ಯಾಕಂದ್ರೆ ಮುಂದಿನ ವರ್ಷ ಧೋನಿ ಐಪಿಎಲ್ ಗೆ ಗುಡ್ ಬೈ ಹೇಳೋ ಎಲ್ಲಾ ಸಾಧ್ಯತೆ ಇದೆ. ಹಾಗಾಗಿ ಮುಂದಿನ ವರ್ಷ ರುತುರಾಜ್ ಗಾಯಕ್ವಾಡ್ ಸಿಎಸ್ ಕೆ (CSK) ಕ್ಯಾಪ್ಟನ್ ಆಗ್ತಾರೆ ಅನ್ನಲಾಗ್ತಿದೆ.

IND VS WI: ಭಾರತ-ವೆಸ್ಟ್ ಇಂಡೀಸ್ ಸರಣಿಯ ವೇಳಾಪಟ್ಟಿ ಪ್ರಕಟ..!

ಮುಂದಿನ ಸೀಸನ್​ನಲ್ಲಿ ಮುಂಬೈ ಕ್ಯಾಪ್ಟನ್ ಯಾರು:
ಕೇವಲ ಮುಂಬೈ ಇಂಡಿಯನ್ಸ್​ಗೆ ಕ್ಯಾಪ್ಟನ್ ಆಗಿದ್ದಾಗ ರೋಹಿತ್ ಶರ್ಮಾ (Rohit Sharma) ದಾಖಲೆಯ ಐದು ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದರು. ಆದ್ರೆ ಯಾವಾಗ ಹಿಟ್ ಮ್ಯಾನ್ ಹೆಗಲಿಗೆ ಟೀಂ ಇಂಡಿಯಾ ನಾಯಕತ್ವ ಬಿದ್ದಿತೋ ಆಗ ಒತ್ತಡಕ್ಕೆ ಒಳಗಾದ್ರು. ಇಂದು ಒಂದು ಮಾದರಿ ನಾಯಕನಲ್ಲ. ಭಾರತದ ಮೂರು ಮಾದರಿ ತಂಡಕ್ಕೂ ರೋಹಿತ್ ನಾಯಕ. ಹಾಗಾಗಿ ಒತ್ತಡಕ್ಕೆ ಒಳಗಾದ ರೋಹಿತ್, ಐಪಿಎಲ್​ನಲ್ಲಿ ಮುಂಬೈ  ಇಂಡಿಯನ್ಸ್ (Mumbai Indians) ತಂಡವನ್ನ ತೀರ ಕಳಪೆಯಾಗಿಯೇ ಮುನ್ನಡೆಸಿದ್ರು.

ವಿರಾಟ್ ಕೊಹ್ಲಿ ಆಡಿದ್ರೂ ಕಿಂಗ್, ಆಡದೇ ಇದ್ರೂ ಕಿಂಗ್..!

ಫಾರ್ ದ ಫಸ್ಟ್ ಟೈಮ್ ಮುಂಬೈ, ಅಂಕಪಟ್ಟಿಯಲ್ಲಿ ಕೊನೆ ಸ್ಥಾನ ಪಡೆಯಿತು. ಬರೋಬ್ಬರಿ 10 ಲೀಗ್ ಪಂದ್ಯಗಳನ್ನ ಸೋತ ಅಪಕೀರ್ತಿಗೆ ಒಳಗಾಗಿದೆ. ಮುಂಬೈ ತಂಡವನ್ನ ಐದು ಸಲ ಚಾಂಪಿಯನ್ ಮಾಡಿದ ರೋಹಿತ್​ ಅವರನ್ನ ಕೈಬಿಡುವಂತಿಲ್ಲ. ಇಟ್ಟುಕೊಳ್ಳುವಂತಿಲ್ಲ ಅನ್ನೋ ಸ್ಥಿತಿ ಮುಂಬೈಗೆ ನಿರ್ಮಾಣವಾಗಿದೆ. ಮುಂದಿನ ವರ್ಷದ ಮುಂಬೈ ನಡೆ ನಿಗೂಢ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?