ರೋಹಿತ್ ಶರ್ಮಾಗೆ ನಾಯಕತ್ವ ನೀಡಲು 4ನೇ ಟಿ20 ಪಂದ್ಯದ 4 ಓವರ್ ಸಾಕು!

By Suvarna NewsFirst Published Mar 19, 2021, 9:06 PM IST
Highlights

4ನೇ ಟಿ20 ಪಂದ್ಯದಲ್ಲಿನ ಅಂತಿಮ 4 ಓವರ್ ಸಾಕು, ರೋಹಿತ್ ಶರ್ಮಾ ನಾಯಕತ್ವ ವಿವರಿಸಲು. ಇದು ಸತ್ಯ ಕೂಡ. ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಿದ ರೀತಿ ಇದೀಗ ಈ ಆಗ್ರಹಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಸಾಮಾಜಿಕ ಜಾಲಾತಾಣದಲ್ಲಿ ಕೊಹ್ಲಿ ಬದಲು ರೋಹಿತ್‌ಗೆ ಕ್ಯಾಪ್ಟನ್ ನೀಡಲು ಆಗ್ರಹ ಹೆಚ್ಚಾಗಿದೆ.

ಅಹಮ್ಮದಾಬಾದ್(ಮಾ.19): ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟಿ20 ಪಂದ್ಯ ಉಭಯ ತಂಡಗಳಿಗೆ ಮಹತ್ವದ್ದಾಗಿತ್ತು. ಈ ರೋಚಕ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿ ಸರಣಿ ಜೀವಂತವಾಗಿದೆ. ಆದರೆ ಚೇಸಿಂಗ್ ವೇಳೆ ಇಂಗ್ಲೆಂಡ್ ಇನ್ನೇನು ಈ ಪಂದ್ಯದಲ್ಲೂ ಗೆಲುವು ಸಾಧಿಸುತ್ತೆ ಅನ್ನೋ ವಾತಾವರಣ ನಿರ್ಮಾಣವಾಗಿತ್ತು. ಆದರೆ ಅಂತಿಮ 4 ಓವರ್‌ನಲ್ಲಿ ಪಂದ್ಯದ ಚಿತ್ರಣ ಬದಲಾಗಿತ್ತು. ಇದಕ್ಕೆ ಕಾರಣ ರೋಹಿತ್ ಶರ್ಮಾ ನಾಯಕತ್ವ.

ಪಂದ್ಯದ ಮಹತ್ವದ ಘಟ್ಟದಲ್ಲಿ ವಿರಾಟ್‌ ಕೊಹ್ಲಿ ಮೈದಾನ ತೊರೆದಿದ್ದೇಕೆ..?.

ಹೌದು, ವಿರಾಟ್ ಕೊಹ್ಲಿ  ಇಂಗ್ಲೆಂಡ್ ರನ್ ಚೇಸಿಂಗ್ ಸಂದರ್ಭದ  ಅಂತಿಮ ನಾಲ್ಕು ಓವರ್‌ ಇರುವಾಗ ಮೈದಾನದಿಂದ ಹೊರನಡೆದಿದ್ದರು. ರೋಹಿತ್ ಶರ್ಮಾ 4 ಓವರ್‌ಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಇನ್ನು ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವ ಸಾಬೀತು ಪಡಿಸಿದ್ದಾರೆ. ಹೀಗಾಗಿ ಇದೀಗ ಟಿ20ಯಲ್ಲಿ ಕೊಹ್ಲಿ ಬದಲು ರೋಹಿತ್‌ಗೆ ನಾಯಕತ್ವ ನೀಡಿ ಎಂದು ಆಗ್ರಹ ಹೆಚ್ಚಾಗಿದೆ.

ಟಾಸ್ ಸೋತವನೂ ಬಾಸ್; 4ನೇ T20 ಗೆಲುವಿನ ಜೊತೆಗೆ ಟೀಕೆಗೆ ಉತ್ತರ ನೀಡಿದ ಭಾರತ!

ರೋಹಿತ್ ಶರ್ಮಾ ನಾಯಕತ್ವ ನೀಡಲು ಕ್ರಿಕೆಟ್ ದಿಗ್ಗಜರು , ಮಾಜಿ ಕ್ರಿಕೆಟಿಗರ ಪರೋಕ್ಷ ಸೂಚನೆ ನೀಡಿದ್ದಾರೆ.  ಇನ್ನು ಅಭಿಮಾನಿಗಳು ರೋಹಿತ್‌ಗೆ ನಾಯಕತ್ವ ನೀಡಿದರೆ ಮಾತ್ರ ಐಸಿಸಿ ಟ್ರೋಫಿ  ಗೆಲ್ಲಲು ಸಾಧ್ಯ ಅನ್ನೋ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

 

Great captaincy from Virat ... !! Allowing to get involved & clearly his tactics work ...

— Michael Vaughan (@MichaelVaughan)

Rohit Sharma for T20 captaincy! 🙏🏻

— Venkat Parthasarathy (@Venkrek)

Will say this again. Give this team to Rohit Sharma and he'll give you world cups.

— ANSHUMAN🚩 (@AvengerReturns)
click me!