
ನವದೆಹಲಿ(ಡಿ.03): ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕ್ರಿಕೆಟ್‌ನಲ್ಲಿ ಅಷ್ಟಾಗಿ ಸಕ್ರಿಯವಾಗಿರದಿದ್ದರೂ, ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಸಿಕ್ಕಾಪಟ್ಟೆ ಚುರುಕಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಹಿಂಬಾಲಕರನ್ನು ಹೊಂದಿರುವ ಹರ್ಭಜನ್ ಸಿಂಗ್ ದಿನನಿತ್ಯದ ಆಗುಹೋಗುಗಳ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರತ ದೇಶಕ್ಕೆ ಕೊರೋನಾ ಲಸಿಕೆ ಅಗತ್ಯವಿದೆಯೇ ಎನ್ನುವ ಪ್ರಶ್ನೆ ಎತ್ತಿ ಟ್ವೀಟರ್‌ನಲ್ಲಿ ನೆಟ್ಟಿಗರ ಅಪಹಾಸ್ಯಕ್ಕೆ ಗುರಿಯಾಗಿದ್ದಾರೆ. ಹೌದು, ಕೆಲವೊಂದು ಅಂಕಿ-ಅಂಶಗಳೊಂದಿಗೆ ಟ್ವೀಟ್ ಮಾಡಿರುವ ಹರ್ಭಜನ್ ಸಿಂಗ್, ಫೈಝರ್ ಹಾಗೂ ಬಯೋಟೆಕ್ ಲಸಿಕೆಗಳು 94% ಪರಿಣಾಮಕಾರಿಯಾಗಿವೆ. ಇನ್ನು ಮಾಡೆರೆನಾ ಮತ್ತು ಆಕ್ಸ್‌ಫರ್ಡ್ ಲಸಿಕೆಗಳು ಕ್ರಮವಾಗಿ 94.5, 90% ಯಶಸ್ವಿಯಾಗಿವೆ. ಆದರೆ ಲಸಿಕೆಯಿಲ್ಲದೇ ದೇಶದಲ್ಲಿ ಕೊರೋನಾದಿಂದ ಗುಣಮುಖವಾಗುತ್ತಿರುವವರ ಸಂಖ್ಯೆ 93.6%. ಹೀಗಾಗಿ ನಿಜಕ್ಕೂ ದೇಶಕ್ಕೆ ಕೊರೋನಾ ಲಸಿಕೆಯ ಅಗತ್ಯವಿದೆಯಾ ಎಂದು ಪ್ರಶ್ನಿಸಿದ್ದಾರೆ.
3 ಕೋಟಿ ರುಪಾಯಿಗೆ ನಟರಾಜನ್‌ರನ್ನು KXIP ತಂಡಕ್ಕೆ ಖರೀದಿಸಿದಾಗ ಎಲ್ಲರೂ ಪ್ರಶ್ನಿಸಿದ್ದರು: ಸೆಹ್ವಾಗ್
13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಹಿಂದೆ ಸರಿದಿದ್ದರು. ಇದೀಗ ಹರ್ಭಜನ್ ಸಿಂಗ್ ಮಾಡಿದ ಟ್ವೀಟ್‌ಗೆ ನೆಟ್ಟಿಗರು ಬಿಸಿ ಮುಟ್ಟಿಸಿದ್ದಾರೆ. ಅದರ ಒಂದು ಝಲಕ್ ಇಲ್ಲಿದೆ ನೋಡಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.