ಏಕದಿನ ಸರಣಿ ಗೆದ್ದು ಬೀಗುತ್ತಿರುವ ಆಸ್ಟ್ರೇಲಿಯಾಗೆ ಮತ್ತೊಂದು ಶಾಕ್..!

Suvarna News   | Asianet News
Published : Dec 03, 2020, 12:46 PM IST
ಏಕದಿನ ಸರಣಿ ಗೆದ್ದು ಬೀಗುತ್ತಿರುವ ಆಸ್ಟ್ರೇಲಿಯಾಗೆ ಮತ್ತೊಂದು ಶಾಕ್..!

ಸಾರಾಂಶ

ಅಸ್ಟ್ರೇಲಿಯಾ ತಂಡಕ್ಕೆ ಈಗಾಗಲೇ ಗಾಯದ ಸಮಸ್ಯೆ ಕಾಡುತ್ತಿದ್ದು, ಡೇವಿಡ್‌ ವಾರ್ನರ್ ಸೀಮಿತ ಓವರ್‌ಗಳ ಸರಣಿಯಿಂದ ಹೊರಬಿದ್ದಿದ್ದಾರೆ. ಇದರ ಬೆನ್ನಲ್ಲೇ ಮತ್ತೋರ್ವ ಆಟಗಾರ ಗಾಯಕ್ಕೆ ತುತ್ತಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಕ್ಯಾನ್‌ಬೆರ್ರಾ(ಡಿ.03): ಭಾರತ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದು ಬೀಗುತ್ತಿರುವ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಬಾಧಿಸುತ್ತಿದೆ. ಈಗಾಗಲೇ ಡೇವಿಡ್‌ ವಾರ್ನರ್ ಗಾಯದ ಸಮಸ್ಯೆಯಿಂದಾಗಿ ಭಾರತ ವಿರುದ್ದದ ಸೀಮಿತ ಓವರ್‌ಗಳ ಸರಣಿಯಿಂದ ಹೊರಬಿದ್ದಿದ್ದಾರೆ.

ಇದೀಗ ಆಸ್ಪ್ರೇಲಿಯಾ ವೇಗದ ಬೌಲರ್‌ ಮಿಚೆಲ್‌ ಸ್ಟಾರ್ಕ್ ಗಾಯಗೊಂಡ ಕಾರಣ, ಭಾರತ ವಿರುದ್ಧದ 3ನೇ ಏಕದಿನ ಪಂದ್ಯಕ್ಕೆ ಅಲಭ್ಯರಾಗಿದ್ದರು. ಸ್ಟಾರ್ಕ್, ಬೆನ್ನುಹುರಿ ಹಾಗೂ ಪಕ್ಕೆಲುಬಿನ ನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ನಾಯಕ ಫಿಂಚ್‌ ಹೇಳಿದ್ದಾರೆ. 

ಭಾರತ ವಿರುದ್ದದ ಏಕದಿನ ಸರಣಿಯಲ್ಲಿ ಮಿಚೆಲ್ ಸ್ಟಾರ್ಕ್ ಅವರ ಪ್ರದರ್ಶನ ಅಷ್ಟೇನು ಮಾರಕವಾಗಿರಲಿಲ್ಲ. ಮೊದಲೆರಡು ಏಕದಿನ ಪಂದ್ಯಗಳಲ್ಲಿ ಮಿಚೆಲ್ ಸ್ಟಾರ್ಕ್ 147 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆಯಲಷ್ಟೇ ಶಕ್ತವಾಗಿದ್ದರು.

ಕೊನೆಯ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ

ಸ್ಟಾರ್ಕ್ ಗಾಯಗೊಳ್ಳುವ ಮೂಲಕ, ಆಸೀಸ್‌ ತಂಡದ ಗಾಯಾಳುಗಳ ಸಂಖ್ಯೆ 2ಕ್ಕೇರಿದೆ. 2ನೇ ಪಂದ್ಯದಲ್ಲಿ ಆರಂಭಿಕ ಡೇವಿಡ್‌ ವಾರ್ನರ್‌ ಗಾಯಗೊಂಡಿದ್ದರು. ಇನ್ನು ಮತ್ತೋರ್ವ ವೇಗಿ ಪ್ಯಾಟ್‌ ಕಮಿನ್ಸ್‌ಗೆ ಟೆಸ್ಟ್‌ ಸರಣಿಗೆ ಸಜ್ಜಾಗುವ ಉದ್ದೇಶದಿಂದಾಗಿ ವಿಶ್ರಾಂತಿ ನೀಡಲಾಗಿದೆ. ಇದರ ಲಾಭ ಪಡೆದ ಟೀಂ ಇಂಡಿಯಾ ಕೊನೆಯ ಪಂದ್ಯವನ್ನು 13 ರನ್‌ಗಳಿಂದ ಜಯಿಸಿತ್ತು.

ಶನಿವಾರದಿಂದ ಟಿ20 ಸರಣಿ:

ಭಾರತ ಹಾಗೂ ಆಸ್ಪ್ರೇಲಿಯಾ ನಡುವಣ 3 ಪಂದ್ಯಗಳ ಟಿ20 ಸರಣಿ ನಾಳೆಯಿಂದ ಆರಂಭವಾಗಲಿದೆ. ಡಿ.4 ರಂದು ಕ್ಯಾನ್‌ಬೆರ್ರಾ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಡಿ.6 ಕ್ಕೆ 2ನೇ ಟಿ20 ಹಾಗೂ ಡಿ. 8ರಂದು 3ನೇ ಟಿ20 ಪಂದ್ಯ ನಡೆಯಲಿದೆ. 

ಕೊನೆಯ 2 ಟಿ20 ಪಂದ್ಯಗಳಿಗೆ ಸಿಡ್ನಿ ಕ್ರೀಡಂಗಣದ ಆತಿಥ್ಯ ವಹಿಸಲಿದೆ. ಡಿ. 6 ರಂದು ಸಿಡ್ನಿಯ ಮತ್ತೊಂದು ಮೈದಾನವಾದ ಡ್ರುಮ್ಯೊನೇ ಓವಲ್‌ನಲ್ಲಿ ಭಾರತ ‘ಎ’ ಮತ್ತು ಆಸ್ಪ್ರೇಲಿಯಾ ‘ಎ’ ನಡುವಣ ಮೊದಲ ಅಭ್ಯಾಸ ಪಂದ್ಯ ನಡೆಯಲಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!
ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!