ಕೋಚ್ ರವಿಶಾಸ್ತ್ರಿಯಿಂದ ದೂರವಿರಿ: ಜಡ್ಡುಗೆ ನೆಟ್ಟಿಗರ ಕಿವಿಮಾತು..!

Suvarna News   | Asianet News
Published : Dec 22, 2020, 05:10 PM IST
ಕೋಚ್ ರವಿಶಾಸ್ತ್ರಿಯಿಂದ ದೂರವಿರಿ: ಜಡ್ಡುಗೆ ನೆಟ್ಟಿಗರ ಕಿವಿಮಾತು..!

ಸಾರಾಂಶ

ಇದು ವೈನ್ ಕುಡಿಯುವ ಸಮಯವಲ್ಲ ಎಂದು ಟ್ವೀಟ್ ಮಾಡಿದ್ದ ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾಗೆ ನೆಟ್ಟಿಗರು ಕಿವಿಮಾತು ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅಡಿಲೇಡ್‌(ಡಿ.22): ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯವಾದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್‌ಗಳ ಆಘಾತಕಾರಿ ಸೋಲು ಕಂಡಿತ್ತು. ಇದರ ಬೆನ್ನಲ್ಲೇ ಡಿಸೆಂಬರ್ 26ರಿಂದ ಆರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೂ ಮುನ್ನ ಗುಡ್‌ ನ್ಯೂಸ್ ಸಿಗುವ ಸಾಧ್ಯತೆ ದಟ್ಟವಾಗತೊಡಗಿದೆ.

ಹೌದು, ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ ಸಂಪೂರ್ಣ ಫಿಟ್ನೆಸ್ ಕಾಯ್ದುಕೊಳ್ಳುವತ್ತ ದಿಟ್ಟ ಹೆಜ್ಜೆಯಿಟ್ಟಿದ್ದು, ಬಹುತೇಕ ಎರಡನೇ ಟೆಸ್ಟ್ ಪಂದ್ಯದಲ್ಲಿ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ. ರವೀಂದ್ರ ಜಡೇಜಾ ಆಸ್ಟ್ರೇಲಿಯಾ ವಿರುದ್ದದ ಮೊದಲ ಟಿ20 ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಆ ಬಳಿಕ ನಡೆದ 2 ಟಿ20 ಪಂದ್ಯ ಹಾಗೂ ಅಡಿಲೇಡ್‌ ಟೆಸ್ಟ್‌ ಪಂದ್ಯದಿಂದ ಜಡ್ಡು ಹೊರಗುಳಿದಿದ್ದರು.

ಇದೆಲ್ಲದರ ನಡುವೆ ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿರುವ ಸೌರಾಷ್ಟ್ರ ಮೂಲದ ಕ್ರಿಕೆಟಿಗ ರವೀಂದ್ರ ಜಡೇಜಾ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಕಾಫಿ ಹೀರುತ್ತಿರುವ ಫೋಟೋವೊಂದನ್ನು ಶೇರ್ ಮಾಡಿದ್ದು, ಅದರಲ್ಲಿ "ಕಾಫಿ, ಯಾಕಂದ್ರೆ ಈಗ ವೈನ್ ಕುಡಿಯುವ ಸಮಯವಾಗಿಲ್ಲ" ಎಂದು ಬರೆದುಕೊಂಡಿದ್ದರು.

ಜಡ್ಡು ಅವರ ಈ ಪೋಸ್ಟ್ ನೋಡಿದ ನೆಟ್ಟಿಗರು, ಆಲ್ರೌಂಡರ್‌ಗೆ ಕೋಚ್ ರವಿಶಾಸ್ತ್ರಿ ಅವರಿಂದ ಅಂತರ ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದ್ದಾರೆ. ಇನ್ನು ಕೆಲವು ನೆಟ್ಟಿಗರು ಒಂದು ಹೆಜ್ಜೆ ಮುಂದೆ ಹೋಗಿ, ಶಾಸ್ತ್ರಿ ಜತೆ ಕೆಲವು ಕಾಲ ಕಳೆಯಿರಿ, ಆಗ ಯಾವ ಸಮಯವೂ ಇಷ್ಟು ಬೇಗ ಎನಿಸುವುದಿಲ್ಲ ಎಂದು ತಮಾಶೆ ಮಾಡಿದ್ದಾರೆ.

ಸುರೇಶ್ ರೈನಾ ಆರೆಸ್ಟ್‌ ಬಗ್ಗೆ ಕೊನೆಗೂ ಸಿಕ್ತು ಸ್ಪಷ್ಟನೆ..! ಅಷ್ಟಕ್ಕೂ ಆಗಿದ್ದೇನು?

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಕದಿನ ಸರಣಿಯಿಂದ ಪಂತ್ ಔಟ್; ಸಂಜು, ಇಶಾನ್ ಕಿಶನ್ ಬದಲಿಗೆ ಈ ವಿಕೆಟ್ ಕೀಪರ್‌ಗೆ ಬಿಸಿಸಿಐ ಬುಲಾವ್!
ಭಾರತ-ಕಿವೀಸ್ ಕದನ: ರೋ-ಕೋ ಅಬ್ಬರಕ್ಕೆ ವೇದಿಕೆ ಸಿದ್ಧ! ಮ್ಯಾಚ್ ಆರಂಭ ಎಷ್ಟು ಗಂಟೆಗೆ?