ಡಾನ್ ಬ್ರಾಡ್ಮನ್‌ ಬ್ಯಾಗಿ ಗ್ರೀನ್ ಕ್ಯಾಪ್ 2.51 ಕೋಟಿ ರುಪಾಯಿಗೆ ಹರಾಜು..!

By Suvarna NewsFirst Published Dec 22, 2020, 4:00 PM IST
Highlights

ವಿಶ್ವ ಕ್ರಿಕೆಟ್ ಕಂಡ ದಿಗ್ಗಜ ಕ್ರಿಕೆಟಿಗ ಸರ್ ಡಾನ್ ಬ್ರಾಡ್ಮನ್ ಅವರ ಬ್ಯಾಗಿ ಗ್ರೀನ್ ಕ್ಯಾಪ್ ಭಾರೀ ಮೊತ್ತಕ್ಕೆ ಹರಾಜಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಸಿಡ್ನಿ(ಡಿ.22): ಕ್ರಿಕೆಟ್ ದಂತಕಥೆ ಸರ್ ಡಾನ್ ಬ್ರಾಡ್ಮನ್ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗ ಪಡೆದುಕೊಂಡ ಬ್ಯಾಗಿ ಗ್ರೀನ್ ಕ್ಯಾಪ್‌ ಬರೋಬ್ಬರಿ 4,50,000(2.51 ಕೋಟಿ ರುಪಾಯಿ) ಆಸ್ಟ್ರೇಲಿಯನ್ ಡಾಲರ್‌ಗೆ ಹರಾಜಾಗಿದೆ. ಡಾನ್ ಬ್ರಾಡ್ಮನ್ 1928-29ರ ಆ್ಯಷಸ್ ಸರಣಿಯ ವೇಳೆ ಇಂಗ್ಲೆಂಡ್‌ ವಿರುದ್ದ ಬ್ರಿಸ್ಬೇನ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

ಈ ಮೂಲಕ ಡಾನ್ ಬ್ರಾಡ್ಮನ್ ಕ್ಯಾಪ್‌ ಎರಡನೇ ಗರಿಷ್ಠ ಮೊತ್ತಕ್ಕೆ ಹರಾಜಾದ ಕ್ಯಾಪ್ ಎನಿಸಿಕೊಂಡಿದೆ. ಈ ಮೊದಲು ಶೇನ್ ವಾರ್ನ್‌ ಅವರು ಬುಶ್‌ಫೈರ್ ಪರಿಹಾರ ನಿಧಿಗೆ ದೇಣಿಗೆ ನೀಡಲು ತಮ್ಮ ಪಾದಾರ್ಪಣ ಪಂದ್ಯದ ಬ್ಯಾಗಿ ಗ್ರೀನ್ ಕ್ಯಾಪ್ ಹರಾಜಿಗಿಟ್ಟಿದ್ದರು. ಸ್ಪಿನ್ ದಿಗ್ಗಜ ವಾರ್ನ್ ಕ್ಯಾಪ್ 1 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್‌ಗೆ ಹರಾಜಾಗುವ ಮೂಲಕ ದಾಖಲೆ ನಿರ್ಮಿಸಿತ್ತು.

ರೂಡ್ ಮೈಕ್ರೋಫೋನ್ ಸಂಸ್ಥಾಪಕರಾಗಿರುವ ಆಸ್ಟ್ರೇಲಿಯಾದ ಉದ್ಯಮಿ ಪೀಟರ್ ಫ್ರಿಡ್ಮನ್ ಕ್ರಿಕೆಟ್ ದಿಗ್ಗಜ ಬ್ರಾಡ್ಮನ್‌ ಅವರ ಬ್ಯಾಗಿ ಗ್ರೀನ್ ಕ್ಯಾಪನ್ನು ದುಬಾರಿ ಮೊತ್ತ ನೀಡಿ ಖರೀದಿಸಿದ್ದು, ಇದನ್ನು ಕಾಂಗರೂ ನಾಡಿನಾದ್ಯಂತ ಪ್ರದರ್ಶಿಸುವುದಾಗಿ ತಿಳಿಸಿದ್ದಾರೆ.

ಬ್ಯಾಗಿ ಗ್ರೀನ್ ಕ್ಯಾಪ್ ದಾಖಲೆ ಮೊತ್ತಕ್ಕೆ ಹರಾಜು; ಧೋನಿ ಹಿಂದಿಕ್ಕಿದ ಶೇನ್ ವಾರ್ನ್!

ಸರ್ ಡಾನ್ ಬ್ರಾಡ್ಮನ್ ಅವರೊಬ್ಬ ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ. ಅವರು ಕೇವಲ ನಮ್ಮ ದೇಶದ ದಿಗ್ಗಜ ಮಾತ್ರವಲ್ಲ, ಕ್ರೀಡಾ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಪ್ರತಿಭೆ. ನನ್ನಲ್ಲಿ ಬ್ಯಾಗಿ ಗ್ರೀನ್‌ ಕ್ಯಾಪ್‌ ಬಗ್ಗೆ ಸಾಕಷ್ಟು ಆಲೋಚನೆಗಳಿವೆ. ಈ ಕ್ಯಾಪ್‌ನೊಂದಿಗೆ ಆಸ್ಟ್ರೇಲಿಯದಾದ್ಯಂತ ಸುತ್ತಿ ಕ್ರೀಡಾಭಿಮಾನಿಗಳ ಹಾಗೂ ಕ್ರಿಕೆಟ್‌ ಪಂಡಿತರ ಜತೆ ಕ್ಯಾಪ್‌ನೊಂದಿಗೆ ಕೆಲವು ಕ್ಷಣಗಳನ್ನು ಕಳೆಯಲು ಬಯಸಿದ್ದೇನೆಂದು ಫ್ರಿಡ್ಮನ್ ತಿಳಿಸಿದ್ದಾರೆ.  

ಕ್ರಿಕೆಟ್ ಸ್ಥಿರ ಪ್ರದರ್ಶನಕ್ಕೆ ಹೆಸರಾಗಿದ್ದ ಡಾನ್ ಬ್ರಾಡ್ಮನ್ 52 ಟೆಸ್ಟ್ ಪಂದ್ಯಗಳನ್ನಾಡಿ 99.94ರ ಸರಾಸರಿಯಲ್ಲಿ 29 ಶತಕ ಹಾಗೂ 13 ಅರ್ಧಶತಕ ಸಹಿತ 6996 ರನ್ ಬಾರಿಸಿದ್ದರು. 

click me!