ಮುಂಬೈ ಪೊಲೀಸರು ಸುರೇಶ್ ರೈನಾ ಅವರನ್ನು ಆರೆಸ್ಟ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆಯೊಂದು ಹೊರಬಿದ್ದಿದೆ. ಅಷ್ಟಕ್ಕೂ ಆಗಿದ್ದೇನು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ.
ಮುಂಬೈ(ಡಿ.22): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರನ್ನು ಮುಂಬೈ ಪೊಲೀಸರು ಬಂಧಿಸಿ ಆ ಬಳಿಕ ಬೇಲ್ ಮೇಲೆ ಬಿಡುಗಡೆ ಮಾಡಿದ ವಿಚಾರ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಈ ಘಟನೆಯ ಕುರಿತಂತೆ ಸ್ಪಷ್ಟನೆ ಹೊರಬಿದ್ದಿದೆ.
ಹೌದು, ಸುರೇಶ್ ರೈನಾ ಮುಂಬೈನ ವಿಮಾನ ನಿಲ್ದಾಣದ ಸಮೀಪವಿರುವ ಡ್ರ್ಯಾಗನ್‌ಫ್ಲೈ ಕ್ಲಬ್‌ನಲ್ಲಿ ತಡರಾತ್ರಿಯವರೆಗೂ ಪಾಲ್ಗೊಂಡಿದ್ದರು. ಇದರ ಜತೆಗೆ ಕೋವಿಡ್ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾರೆ ಎಂದು ಆರೋಪಿಸಿ ಮುಂಬೈ ಪೊಲೀಸರು ಡ್ರ್ಯಾಗನ್‌ಫ್ಲೈ ಕ್ಲಬ್‌ನ 7 ಸಿಬ್ಬಂದಿ ಸೇರಿದಂತೆ 34 ಮಂದಿಯನ್ನು ಆರೆಸ್ಟ್ ಮಾಡಿದ್ದರು. ಬಳಿಕ ಬೇಲ್ ಮೇಲೆ ಬಿಡುಗಡೆಯಾಗಿದ್ದರು. ಈ ಘಟನೆಯ ಕುರಿತಂತೆ ಸುರೇಶ್ ರೈನಾ ಇದೀಗ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಆರೆಸ್ಟ್..!
ಸುರೇಶ್ ರೈನಾ ಮುಂಬೈನಲ್ಲಿ ಒಂದು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಆ ಚಿತ್ರೀಕರಣ ಮುಗಿಯುವುದು ತಡವಾಗಿದೆ. ಬಳಿಕ ಅಲ್ಲಿನ ಸ್ನೇಹಿತರು ರಾತ್ರಿ ಊಟಕ್ಕೆ ಕ್ಲಬ್‌ಗೆ ಆಹ್ವಾನಿಸಿದ್ದಾರೆ. ಊಟ ಮುಗಿಸಿಕೊಂಡು ಸಮೀಪದಲ್ಲೇ ಇದ್ದ ವಿಮಾನ ನಿಲ್ದಾಣದ ಮೂಲಕ ರೈನಾ ಡೆಲ್ಲಿಗೆ ತೆರಳಬೇಕಿತ್ತು. ರೈನಾರಿಗೆ ಅಲ್ಲಿನ ಸ್ಥಳೀಯ ಡೆಡ್ ಲೈನ್ ಸಮಯ ಹಾಗೂ ಕೋವಿಡ್ ಶಿಷ್ಟಾಚಾರದ ಬಗ್ಗೆ ಅರಿವಿರಲಿಲ್ಲ.
ಆದರೆ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಬಂದ ನಂತರವೇ ರೈನಾಗೆ ಈ ವಿಚಾರ ಗಮನಕ್ಕೆ ಬಂದಿದೆ. ಹಾಗೂ ಪೊಲೀಸರಿಗೆ ಸಹಕರಿಸಿದ್ದಾರೆ. ಉದ್ದೇಶಪೂರ್ವಕವಲ್ಲದ ಈ ಘಟನೆಗೆ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ. ತಾವು ಯಾವಾಗಲು ಸರ್ಕಾರ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳು ರೂಪಿಸುವ ಕಾನೂನುಗಳನ್ನು ಪಾಲಿಸುತ್ತೇನೆ ಹಾಗೂ ಗೌರವಿಸುತ್ತೇನೆ. ಮುಂದೆಂದೂ ಈ ರೀತಿ ಘಟನೆಯಾಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ.