774 ಅಂತಾರಾಷ್ಟ್ರೀಯ ವಿಕೆಟ್, ಎರಡು ವಿಶ್ವಕಪ್‌ ಫೈನಲ್‌: ವಿದಾಯದ ಹೊಸ್ತಿಲಲ್ಲಿರುವ ಸೌಥಿ ಸಂಪತ್ತು ಎಷ್ಟು?

By Naveen Kodase  |  First Published Dec 11, 2024, 2:04 PM IST

ನ್ಯೂಜಿಲೆಂಡ್ ವೇಗದ ಬೌಲರ್ ಟಿಮ್ ಸೌಥಿ ಇಂದು ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸೌಥಿ ಕಿವೀಸ್ ತಂಡದ ಪರವಾಗಿ ಹಲವು ವರ್ಷಗಳಿಂದ ವೇಗದ ದಾಳಿಯನ್ನು ಮುನ್ನಡೆಸುತ್ತಾ ಬಂದಿದ್ದಾರೆ ಹಾಗೂ 774 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದಿದ್ದಾರೆ.


ಬೆಂಗಳೂರು: ನ್ಯೂಜಿಲೆಂಡ್ ಅನುಭವಿ ವೇಗದ ಬೌಲರ್ ಟಿಮ್ ಸೌಥಿ ಇಂದು ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಟಿಮ್ ಸೌಥಿ ಡಿಸೆಂಬರ್ 11, 1988ರಲ್ಲಿ ಜನಿಸಿದರು. ಅನುಭವಿ ವೇಗಿ ಸೌಥಿ ಕಿವೀಸ್ ತಂಡದ ಪರವಾಗಿ ಹಲವು ವರ್ಷಗಳಿಂದ ವೇಗದ ದಾಳಿಯನ್ನು ಮುನ್ನಡೆಸುತ್ತಾ ಬಂದಿದ್ದಾರೆ. 

ಬಲಗೈ ವೇಗಿ ಸೌಥಿ 2008ರಲ್ಲಿ ಇಂಗ್ಲೆಂಡ್ ವಿರುದ್ದ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡುವ ಮೂಲಕ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಮೊದಲ ಪಂದ್ಯದಲ್ಲೇ ಸೌಥಿ ಒಂದು ವಿಕೆಟ್ ತಮ್ಮ ಖಾತೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅದೇ ವರ್ಷ ಇಂಗ್ಲೆಂಡ್ ವಿರುದ್ಧವೇ ಸೌಥಿ ನ್ಯೂಜಿಲೆಂಡ್ ಟೆಸ್ಟ್ ತಂಡಕ್ಕೂ ಪಾದಾರ್ಪಣೆ ಮಾಡುವಲ್ಲಿ ಯಶಸ್ವಿಯಾದರು. 

Tap to resize

Latest Videos

ರೋಹಿತ್ ಶರ್ಮಾ ನಾಯಕತ್ವದ ಮೇಲೆ ಬುಮ್ರಾ ಕಣ್ಣು? ಹಿಟ್‌ಮ್ಯಾನ್ ಯುಗಾಂತ್ಯ?

ಸತತ ಎರಡು ವಿಶ್ವಕಪ್ ಫೈನಲ್ ಆಡಿದ್ದ ಸೌಥಿ:

undefined

ಟಿಮ್ ಸೌಥಿ 2011ರಲ್ಲಿ ಮೊದಲ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್ ಪಂದ್ಯವನ್ನಾಡಿದ್ದರು. ಇದಾದ ಬಳಿಕ ಟಿಮ್ ಸೌಥಿ 2015 ಹಾಗೂ 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲೂ ಕಿವೀಸ್ ತಂಡದ ವೇಗದ ಬೌಲಿಂಗ್ ಮುಂಚೂಣಿ ವಹಿಸಿದ್ದರು. ನ್ಯೂಜಿಲೆಂಡ್ ತಂಡವು 2015 ಹಾಗೂ 2019ರ ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿತ್ತಾದರೂ, ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸುವ ಮೂಲಕ ನಿರಾಸೆ ಅನುಭವಿಸಿತ್ತು. 

ಟಿಮ್ ಸೌಥಿ ನೆಟ್ ವರ್ತ್‌: 

ನ್ಯೂಜಿಲೆಂಡ್ ತಂಡದ ಪರ ಅತ್ಯದ್ಭುತ ಪ್ರದರ್ಶನ ತೋರಿದ ಆಟಗಾರರಲ್ಲಿ ಟಿಮ್ ಸೌಥಿ ಕೂಡಾ ಒಬ್ಬರೆನಿಸಿಕೊಂಡಿದ್ದಾರೆ. ಇನ್ನು ಮಾಧ್ಯಮಗಳ ವರದಿಗಳ ಪ್ರಕಾರ ಟಿಮ್ ಸೌಥಿ ಅವರ ನೆಟ್ ವರ್ತ್ 5 ಮಿಲಿಯನ್ ಡಾಲರ್. ಅಂದರೆ ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ ಸರಿಸುಮಾರು 40 ಕೋಟಿ. ಇದಲ್ಲದೇ ಟಿಮ್ ಸೌಥಿ ಅವರು ವಾಸವಾಗಿರುವ ಐಶಾರಾಮಿ ಮನೆಯ ಮೌಲ್ಯವೇ 5 ಕೋಟಿ ರುಪಾಯಿಗಳಾಗಿವೆ. 

ಮೊಹಮ್ಮದ್ ಸಿರಾಜ್‌ಗೆ ಬಿಗ್ ಶಾಕ್, ಆಸೀಸ್ ಬ್ಯಾಟರ್‌ಗೆ ಖಡಕ್ ವಾರ್ನಿಂಗ್ ಕೊಟ್ಟ ಐಸಿಸಿ!

ಟಿಮ್ ಸೌಥಿ ಕ್ರಿಕೆಟ್ ಬದುಕು: 

ವೇಗಿ ಟಿಮ್ ಸೌಥಿ ಇದುವರೆಗೂ ನ್ಯೂಜಿಲೆಂಡ್ ತಂಡದ ಪರ 106 ಟೆಸ್ಟ್, 161 ಏಕದಿನ ಹಾಗೂ 125 ಟಿ20 ಪಂದ್ಯಗಳನ್ನಾಡಿದ್ದಾರೆ. 106 ಟೆಸ್ಟ್ ಪಂದ್ಯಗಳನ್ನಾಡಿರುವ ಸೌಥಿ 389 ವಿಕೆಟ್ ಕಬಳಿಸಿದ್ದಾರೆ. ಇದಲ್ಲದೇ ಏಕದಿನ ಕ್ರಿಕೆಟ್‌ನಲ್ಲಿ 221 ಹಾಗೂ ಟಿ20ಯಲ್ಲಿ 164 ಬಲಿ ಪಡೆದಿದ್ದಾರೆ. ಒಟ್ಟಾರೆ ಮೂರು ಮಾದರಿಯ ಕ್ರಿಕೆಟ್‌ನಿಂದ ಸೌಥಿ ಬರೋಬ್ಬರಿ 774 ವಿಕೆಟ್ ಕಬಳಿಸಿದ್ದಾರೆ. ಇನ್ನು ಐಪಿಎಲ್‌ನಲ್ಲಿ 54 ಪಂದ್ಯಗಳನ್ನಾಡಿ 47 ವಿಕೆಟ್ ಕಬಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ ವೃತ್ತಿಜೀವನದ ನಿವೃತ್ತಿ ಹೊಸ್ತಿಲಲ್ಲಿರುವ ಸೌಥಿಗೆ ಮತ್ತೊಮ್ಮೆ ಜನ್ಮದಿನದ ಶುಭಾಶಯಗಳು.
 

click me!