
ಮುಂಬೈ(ಏ.06): ಐಪಿಎಲ್ 15ನೇ ಸೀಸನ್ನಲ್ಲಿ (IPL 2022) 13 ಪಂದ್ಯಗಳು ಮುಗಿದು ಹೋಗಿವೆ. ಇಂದು 14ನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ಗಳಾದ ಮುಂಬೈ ಇಂಡಿಯನ್ಸ್ (Mumbai Indians) ಮತ್ತು ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ಮುಖಾಮುಖಿಯಾಗ್ತಿವೆ. ಈ ನಡುವೆ ಕಳೆದ 14 ಸೀಸನ್ಗಳಲ್ಲಿ 10 ಐಪಿಎಲ್ ಟ್ರೋಫಿಗಳ ಗೆದ್ದ ಮೂರು ತಂಡಗಳು ಈ ಸೀಸನ್ನಲ್ಲಿ ಒಂದೇ ಒಂದು ಜಯ ದಾಖಲಿಸಿಲ್ಲ. ಪಾಯಿಂಟ್ ಟೇಬಲ್ನಲ್ಲಿ ಕೊನೆ ಸ್ಥಾನ ಪಡೆದುಕೊಂಡು ಕೂತಿವೆ.
ಹೇಳಿಕೊಳ್ಳೋಕೆ ಮಾಜಿ ಚಾಂಪಿಯನ್ಸ್. ಈ ತಂಡಗಳ ಹೆಸರು ಹೇಳಿದರೆ ಎದುರಾಳಿ ತಂಡಗಳು ಹೆದರುತ್ತವೆ. ಆದರೆ ಈ ಟೀಮ್ಗಳು ಮಾತ್ರ ಈ ಸೀಸನ್ನಲ್ಲಿ ತೀರ ಕಳಪೆ ಪ್ರದರ್ಶನ ನೀಡಿವೆ. ಮೂರು ತಂಡಗಳು ಸೇರಿ 7 ಪಂದ್ಯಗಳನ್ನಾಡಿದ್ರೂ ಜಯ ಮಾತ್ರ ದಕ್ಕಿಲ್ಲ. ಬರೀ ಸೋಲುಗಳೇ.
ಮುಂಬೈ ಇಂದಾದ್ರೂ ಗೆಲುವಿನ ಖಾತೆ ತೆರೆಯುತ್ತಾ..?:
ದಾಖಲೆಯ 5 ಬಾರಿ ಐಪಿಎಲ್ ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಈ ಸೀಸನ್ನಲ್ಲಿ ಸತತ ಎರಡು ಪಂದ್ಯ ಸೋತಿದೆ. ಇಂದು ಪುಣೆಯಲ್ಲಿ 3ನೇ ಪಂದ್ಯವನ್ನ KKR ವಿರುದ್ಧ ಆಡಲಿದ್ದು, ಇಂದಾದ್ರೂ ಗೆಲುವಿನ ಖಾತೆ ತೆರೆಯುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಮುಂಬೈನಲ್ಲೇ ಐಪಿಎಲ್ ನಡೆಯುತ್ತಿದ್ದರೂ, ಅಲ್ಲಿಯೇ ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ಧ ಪರಾಭವಗೊಂಡಿದೆ. ಮುಂಬೈನಲ್ಲಿ ಸಿಗದ ಜಯ, ಇಂದು ಪುಣೆಯಲ್ಲಿ ಸಿಗುತ್ತಾ..? ಸತತ ಸೋಲಿನಿಂದ ಹೊರಬರುತ್ತಾ ಅನ್ನೋ ಕುತೂಹಲವಿದೆ.
ಹಾಲಿ ಚಾಂಪಿಯನ್ಸ್ಗೆ ಹ್ಯಾಟ್ರಿಕ್ ಸೋಲು:
ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಹಾಲಿ ಚಾಂಪಿಯನ್. ಮುಂಬೈ ಬಿಟ್ಟರೆ ಅತಿಹೆಚ್ಚು ಅಂದರೆ 4 ಬಾರಿ ಐಪಿಎಲ್ ಟ್ರೋಫಿ ಗೆದ್ದಿರೋ ಸಿಎಸ್ಕೆ, ಈ ಸಲ ಹ್ಯಾಟ್ರಿಕ್ ಸೋಲು ಅನುಭವಿಸಿದೆ. ಉದ್ಘಾಟನಾ ಪಂದ್ಯದಲ್ಲೇ ಕೆಕೆಆರ್ ವಿರುದ್ಧ ಸೋತಿದ್ದ ಚೆನ್ನೈ, ಬಳಿಕ ಲಖನೌ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧವೂ ಹೀನಾಯವಾಗಿ ಸೋತಿದೆ. ತಂಡದಲ್ಲಿ ಆಗಿರೋ ಕೆಲ ಬದಲಾವಣೆಗಳು ಮತ್ತು ಕ್ಯಾಪ್ಟನ್ಸಿ ಚೇಂಜ್ ಆಗಿರೋದು ಸೋಲಿಗೆ ಕಾರಣ ಅನ್ನಲಾಗ್ತಿದೆ. ಆದರೆ ಸಿಎಸ್ಕೆ ಫ್ಯಾನ್ಸ್ ಮಾತ್ರ ನೂತನ ನಾಯಕ ರವೀಂದ್ರ ಜಡೇಜಾ (Ravindra Jadeja) ಬೆನ್ನಿಗೆ ನಿಂತಿದ್ದಾರೆ. ಜಡೇಜಾಗೆ ಕ್ಯಾಪ್ಟನ್ಸಿ ಮಾಡಲು ಬಿಡಿ ಎಂದು ಟ್ರೋಲ್ ಮಾಡ್ತಿದ್ದಾರೆ. ಕಾರಣ, ಜಡ್ಡು ನಾಯಕನಾದ್ರೂ ಎಲ್ಲಾ ಡಿಶಿಷನ್ ತೆಗೆದುಕೊಳ್ತಿರೋದು ಎಂಎಸ್ ಧೋನಿ (MS Dhoni). ನಾಳೆ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಗೆದ್ದು ಹ್ಯಾಟ್ರಿಕ್ ಸೋಲಿನಿಂದ ಹೊರಬರುತ್ತಾ ನೋಡಬೇಕು.
IPL 2022 ಫಾರಿನ್ ಪ್ಲೇಯರ್ಸ್ ವಿರಾಟ್ ಕೊಹ್ಲಿಗೆ ಕ್ಲೋಸ್ ಫ್ರೆಂಡ್ಸ್ ಆಗ್ತಿರೋದ್ಯಾಕೆ..?
ಸನ್ರೈಸರ್ಸ್ಗೆ ಈ ಸೀಸನ್ನಲ್ಲಿ ಸತತ ಎರಡು ಸೋಲು:
ಸನ್‌ರೈಸರ್ಸ್ ಹೈದ್ರಾಬಾದ್ (Sunrisers Hyderabad) ಸಮಸ್ಯೆಗಳು ಮುಗಿಯುವಂತೆ ಕಾಣುತ್ತಿಲ್ಲ. ಕಳೆದ ಸೀಸನ್ನಲ್ಲಿ ಡೇವಿಡ್ ವಾರ್ನರ್ (David Warner) ಜೊತೆ ಕಿರಿಕ್ ಮಾಡಿಕೊಂಡು ಟೂರ್ನಿ ಮಧ್ಯೆಯೇ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿದ್ದ ಸನ್‌ರೈಸರ್ಸ್, ಈ ಸಲ ಬಿಡ್ನಲ್ಲಿ ಫ್ರಾಂಚೈಸಿಗಳು ತನಗೆ ಬೇಕಾದ ಆಟಗಾರರನ್ನ ಖರೀದಿಸಿದ್ದರು. ಇದರಿಂದ ಸಹಾಯಕ ಕೋಚ್ ಸೈಮನ್ ಕ್ಯಾಟಿಚ್ ರಾಜೀನಾಮೆ ನೀಡಿ ತಂಡ ಬಿಟ್ಟಿದ್ದರು. ಇಷ್ಟೆಲ್ಲಾ ಕಿರಿಕ್ ಮಾಡಿಕೊಂಡ ಹೈದ್ರಾಬಾದ್, ಈ ಸಲ ಆಡಿದ ಎರಡು ಪಂದ್ಯಗಳನ್ನೂ ಸೋತಿದೆ. ಜೊತೆಗೆ ಕಳೆದ 16 ಪಂದ್ಯಗಳಲ್ಲಿ ಗೆದ್ದಿರೋದು ಮೂರನ್ನ ಮಾತ್ರ. ಒಟ್ನಲ್ಲಿ 10 ಕಪ್ಗಳನ್ನ ಗೆದ್ದ ತಂಡಗಳು ಜಯ ದಾಖಲಿಸಲು ಪರದಾಡುತ್ತಿರುವುದಂತೂ ಸುಳ್ಳಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.