'ನನ್ನ ಶತಕ ಗಾಜಾದ ನನ್ನ ಅಣ್ಣ-ತಂಗಿಯರಿಗೆ ಅರ್ಪಣೆ': ಪಾಕ್ ಕ್ರಿಕೆಟಿಗ ರಿಜ್ವಾನ್

By Naveen Kodase  |  First Published Oct 11, 2023, 3:15 PM IST

ಹಮಾಸ್‌ ಉಗ್ರರು ಮತ್ತು ಇಸ್ರೇಲಿ ಸೇನೆ ನಡುವಿನ ಸಂಘರ್ಷ ಸತತ 4ನೇ ದಿನವಾದ ಮಂಗಳವಾರ ಮತ್ತಷ್ಟು ತೀವ್ರಗೊಂಡಿದ್ದು, ಗಾಜಾ ಪ್ರದೇಶದ ಹಲವು ಆಯಕಟ್ಟಿನ ಪ್ರದೇಶಗಳ ಮೇಲೆ ಇಸ್ರೇಲ್ ದೇಶದ ಸೇನಾ ಪಡೆ ಭಾರೀ ಪ್ರಮಾಣ ದಾಳಿ ನಡೆಸಿದೆ. ಈ ದಾಳಿಯಲ್ಲಿ ಹಮಾಸ್‌ ಸರ್ಕಾರದ ಸಚಿವರ ಮನೆ, ಸರ್ಕಾರಿ ಕಟ್ಟಡಗಳು ಧ್ವಂಸವಾಗಿವೆ.


ಹೈದರಾಬಾದ್‌(ಅ.11): ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಬಾರಿಸಿದ ಅಜೇಯ ಶತಕ ಹಾಗೂ ಅಬ್ದುಲ್ ಶಫೀಕ್ ಬಾರಿಸಿದ ಸಮಯೋಚಿತ ಶತಕದ ನೆರವಿನಿಂದ ಶ್ರೀಲಂಕಾ ಎದುರು 345 ರನ್ ಗುರಿ ಬೆನ್ನತ್ತುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಈ ಮೂಲಕ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಬೆನ್ನತ್ತಿದ ತಂಡ ಎನ್ನುವ ದಾಖಲೆಗೆ ಪಾಕಿಸ್ತಾನ ಪಾತ್ರವಾಗಿದೆ. ಈ ಮೊದಲು ಐರ್ಲೆಂಡ್ ತಂಡವು 2011ರ ವಿಶ್ವಕಪ್ ಟೂರ್ನಿಯಲ್ಲಿ 329 ರನ್ ಬೆನ್ನತ್ತಿದ್ದೇ ಇದುವರೆಗಿನ ದಾಖಲೆಯಾಗಿತ್ತು.

ಮೊಹಮ್ಮದ್ ರಿಜ್ವಾನ್‌ 83 ರನ್ ಗಳಿಸಿದ್ದಾಗ ಕಾಲಿನಲ್ಲಿ ಸೆಳೆತ ಕಾಣಿಸಿಕೊಂಡಿತು. ಹೀಗಿದ್ದೂ ಛಲಬಿಡದೇ ಬ್ಯಾಟಿಂಗ್ ನಡೆಸುವ ಮೂಲಕ ತಂಡ ವಿಶ್ವಕಪ್ ಇತಿಹಾಸದಲ್ಲಿ ದಾಖಲೆಯ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾಯಿತು. ಶ್ರೀಲಂಕಾ ನೀಡಿದ್ದ ಬೃಹತ್ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಆರಂಭದಲ್ಲೇ ನಾಯಕ ಬಾಬರ್ ಅಜಂ ಹಾಗೂ ಇಮಾಮ್ ಉಲ್ ಹಕ್ ವಿಕೆಟ್ ಕಳೆದುಕೊಂಡಿತು. ಮೊದಲ 7.2 ಓವರ್‌ನಲ್ಲಿ ಪಾಕಿಸ್ತಾನ ತಂಡವು 37 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಕಂಗಾಲಾಗಿತ್ತು. ಈ ವೇಳೆ ಮೂರನೇ ವಿಕೆಟ್‌ಗೆ ಜತೆಯಾದ ರಿಜ್ವಾನ್ ಹಾಗೂ ಶಫಿಕ್ ಜೋಡಿ 176 ರನ್‌ ಜತೆಯಾಟವಾಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Latest Videos

undefined

ಲಂಕಾ ವಿರುದ್ಧ ಮೋಸದಿಂದ ಗೆದ್ದಿತಾ ಪಾಕಿಸ್ತಾನ? ಬೌಂಡರಿ ಗೆರೆ ವಿವಾದಕ್ಕೆ ಗುರಿಯಾದ ಬಾಬರ್ ಸೈನ್ಯ!

ಇನ್ನು ಪಂದ್ಯ ಮುಕ್ತಾಯದ ಬಳಿಕ ಟ್ವೀಟ್ ಮಾಡಿರುವ ರಿಜ್ವಾನ್, "ಇದು ಗಾಜಾದಲ್ಲಿರುವ ನನ್ನ ಅಣ್ಣ ತಂಗಿಯರಿಗೆ ಅರ್ಪಣೆ. ತಂಡದ ಗೆಲುವಿಗೆ ಕೊಡುಗೆ ನೀಡಿದ್ದು ಖುಷಿ ಕೊಟ್ಟಿತು. ಸಂಘಟಿತ ಪ್ರದರ್ಶನದಿಂದಾಗಿ ಈ ಗೆಲುವು ಸಾಧ್ಯವಾಯಿತು. ಅದರಲ್ಲೂ ಅಬ್ದುಲ್ಲಾ ಶಫೀಕ್ ಹಾಗೂ ಹಸನ್ ಅಲಿ ನಮ್ಮ ಗೆಲುವನ್ನು ಸುಲಭಗೊಳಿಸಿದರು.

ನಾವು ಹೈದರಾಬಾದ್‌ನಲ್ಲಿರುವ ಜನರು ನೀಡಿದ ಬೆಂಬಲ ಹಾಗೂ ಆತಿಥ್ಯಕ್ಕೆ ಕೃತಜ್ಞರಾಗಿರುತ್ತೇವೆ ಎಂದು ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ರಿಜ್ವಾನ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

This was for our brothers and sisters in Gaza. 🤲🏼

Happy to contribute in the win. Credits to the whole team and especially Abdullah Shafique and Hassan Ali for making it easier.

Extremely grateful to the people of Hyderabad for the amazing hospitality and support throughout.

— Muhammad Rizwan (@iMRizwanPak)

ಹಮಾಸ್‌ ಉಗ್ರರು ಮತ್ತು ಇಸ್ರೇಲಿ ಸೇನೆ ನಡುವಿನ ಸಂಘರ್ಷ ಸತತ 4ನೇ ದಿನವಾದ ಮಂಗಳವಾರ ಮತ್ತಷ್ಟು ತೀವ್ರಗೊಂಡಿದ್ದು, ಗಾಜಾ ಪ್ರದೇಶದ ಹಲವು ಆಯಕಟ್ಟಿನ ಪ್ರದೇಶಗಳ ಮೇಲೆ ಇಸ್ರೇಲ್ ದೇಶದ ಸೇನಾ ಪಡೆ ಭಾರೀ ಪ್ರಮಾಣ ದಾಳಿ ನಡೆಸಿದೆ. ಈ ದಾಳಿಯಲ್ಲಿ ಹಮಾಸ್‌ ಸರ್ಕಾರದ ಸಚಿವರ ಮನೆ, ಸರ್ಕಾರಿ ಕಟ್ಟಡಗಳು ಧ್ವಂಸವಾಗಿವೆ.

ಇದರ ನಡುವೆ, ಗಾಜಾ ಗಡಿಗೆ ಹೊಂದಿಕೊಂಡ ತನ್ನ ದೇಶದ ವ್ಯಾಪ್ತಿಯೊಳಗೆ 1500 ಹಮಾಸ್‌ ಉಗ್ರರ ಶವ ಪತ್ತೆಯಾಗಿದೆ ಎಂದು ಇಸ್ರೇಲ್‌ ಸೇನೆ ಮಂಗಳವಾರ ಮಾಹಿತಿ ನೀಡಿದೆ. ಇದರರ್ಥ ತನ್ನ ಪ್ರದೇಶಗಳಿಗೆ ನುಗ್ಗಿದ ಹಮಾಸ್‌ ಉಗ್ರರನ್ನು ಇಸ್ರೇಲ್‌ ಸೇನೆ ಹತ್ಯೆ ಮಾಡಿದೆ.

ICC World Cup 2023 ಲಂಕಾ ಎದುರು ದಾಖಲೆ ರನ್ ಚೇಸ್‌ ಮಾಡಿ ಗೆದ್ದ ಪಾಕಿಸ್ತಾನ..!

ಏತನ್ಮಧ್ಯೆ 4 ದಿನಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಒಟ್ಟಾರೆ ಸಾವನ್ನಪ್ಪಿದವರ ಸಂಖ್ಯೆ 1600 ಮತ್ತು ಗಾಯಾಳುಗಳ ಸಂಖ್ಯೆ 6500 ದಾಟಿದೆ. ಮೃತರಲ್ಲಿ ಇಸ್ರೇಲಿನ 900 ಹಾಗೂ ಹಮಾಸ್‌ನ 704 ಜನರಿದ್ದಾರೆ. ಆದರೆ ಇಸ್ರೇಲ್‌ ಹೇಳಿಕೊಂಡ 1500 ಹಮಾಸ್‌ ಉಗ್ರರ ಸಂಖ್ಯೆಯು ಈ ಅಂಕಿ-ಸಂಖ್ಯೆಗೆ ಸೇರ್ಪಡೆ ಆಗಿಲ್ಲ. ಏಕೆಂದರೆ ಇಸ್ರೇಲ್‌ ಹೇಳಿಕೊಂಡಿರುವ 1500 ಹಮಾಸ್‌ ಉಗ್ರರ ಸಾವನ್ನು ಹಮಾಸ್‌ ಇನ್ನೂ ದೃಢಪಡಿಸಿಲ್ಲ.

click me!