ಈ ಐವರು ಕ್ರಿಕೆಟಿಗರು ಪಂದ್ಯದ ವೇಳೆ ಹುಡುಗಿಯರ ಜೊತೆ ರಂಗಿನಾಟ; ಹೋಟೆಲ್‌ನಲ್ಲಿ ಅರೆನಗ್ನವಾಗಿ ಸಿಕ್ಕವರುಂಟೂ

By Mahmad Rafik  |  First Published Oct 5, 2024, 9:41 AM IST

ಕೆಲವು ಕ್ರಿಕೆಟಿಗರು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡು ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಆದರೆ ಕೆಲವರು ತಮ್ಮ ವೈಯಕ್ತಿಕ ವಿಷಯಗಳಿಂದಾಗಿ ಅಪಖ್ಯಾತಿಗೆ ಒಳಗಾಗಿದ್ದಾರೆ. ಈ ಲೇಖನದಲ್ಲಿ, ಪಂದ್ಯದ ವೇಳೆ ಹೋಟೆಲ್‌ಗಳಲ್ಲಿ ಯುವತಿಯರೊಂದಿಗೆ ರಂಗಿನಾಟದಲ್ಲಿ ತೊಡಗಿ ಸುದ್ದಿಗೆ ಗ್ರಾಸವಾದ ಐದು ಕ್ರಿಕೆಟಿಗರ ಬಗ್ಗೆ ತಿಳಿಯೋಣ.


ನವದೆಹಲಿ: ತಡವಾದ್ರೂ ಶ್ರಮದ ಫಲ ಖಂಡಿತ ಸಿಗುತ್ತೆ  ಎಂಬ ಮಾತಿದೆ. ಬಡ ಕುಟುಂಬದಿಂದ ಬಂದು ಅಂತರಾಷ್ಟ್ರೀಯಮಟ್ಟದಲ್ಲಿ ಗುರುತಿಸಿಕೊಂಡು ಆಟಗಾರರು ಹಲವರಿದ್ದಾರೆ. ಇಂದಿನ ಕ್ರಿಕೆಟ್ ಆಟಗಾರರಲ್ಲಿ ಹಲವರು ಇಂದಿನ ಯುವ ಸಮುದಾಯಕ್ಕೆ ಮಾದರಿ ಆಗಿದ್ದಾರೆ. ಸಚಿನ್ ತೆಂಡಲ್ಕೂರ್, ಮಹೇಂದ್ರ ಸಿಂಗ್ ಧೋನಿ, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಅನಿಲ್ ಕುಂಬ್ಳೆ ಸೇರಿದಂತೆ ಹಲವರು ತಮ್ಮ ಆಟದ ಮೂಲಕ ಯುವ ಪೀಳಿಗೆಯ ಜನತೆಗೆ ರೋಲ್ ಮಾಡೆಲ್ ಅಗಿದ್ದಾರೆ. ಆದರೆ ಕೆಲ ಕ್ರಿಕೆಟಿಗರು  ತಮ್ಮ ವೈಯಕ್ತಿಯ ವಿಷಯಗಳಿಂದ ಅಪಖ್ಯಾತಿಗೆ  ಒಳಗಾಗಿದ್ದಾರೆ. 

ಇಂದು ನಾವು ನಿಮಗೆ ಅಪಖ್ಯಾತಿಗೊಳಗಾದ ಐವರು ಕ್ರಿಕೆಟಿಗರು ಬಗ್ಗೆ ಹೇಳುತ್ತಿದ್ದೇವೆ. ಪಂದ್ಯದ ವೇಳೆ ಈ ಆಟಗಾರರು ಹೋಟೆಲ್‌ನಲ್ಲಿ ಯುವತಿಯರ ಜೊತೆ ತಗ್ಲಾಕೊಂಡು ಸುದ್ದಿಯಾದವರು. ಕ್ರಿಕೆಟ್ ಜಗತ್ತಿನಲ್ಲಿ ತಮ್ಮ ಕೆಲಸಗಳಿಂದ  ಅಪಖ್ಯಾತಿಗೆ ಒಳಗಾದವರು. ಆ ಐವರು ಆಟಗಾರರು ಯಾರು ಎಂಬುದರ ಮಾಹಿತಿ ಇಲ್ಲಿದೆ. 

Tap to resize

Latest Videos

undefined

1.ಶಾಹಿದ್ ಆಫ್ರಿದಿ
ಪಾಕಿಸ್ತಾನ ತಂಡದ ಮಾಜಿ ಕ್ಯಾಪ್ಟನ್ ಶಾಹದ್ ಆಫ್ರಿದಿ, ಕ್ರಿಕೆಟ್ ಅಂಗಳದ ಸ್ಪೋಟಕ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಕ್ರಿಕೆಟ್ ಹೊರತುಪಡಿಸಿ ಶಾಹಿದಿ ಆಫ್ರಿದಿ ಹಲವು ವಿಷಯಗಳಿಂದ ಸುದ್ದಿಯಲ್ಲಿದ್ದ ಆಟಗಾರ. 2000ರಲ್ಲಿ ಸಿಂಗಾಪುರದ ಟೂರ್ನಾಮೆಂಟ್‌ನಲ್ಲಿ ಶಾಹಿದ್ ಆಫ್ರಿದಿ ಭಾಗಿಯಾಗಬೇಕಿತ್ತು. ಅದಕ್ಕೂ ಮುನ್ನ ಗೆಳೆಯರಾದ ಹಸನ್ ರಜಾ ಮತ್ತು ಅತೀಕ್-ಉರ್-ಜಮಾನ್ ಹಾಗೂ ಹಿರಿಯ ಮಹಿಳೆಯ ಜೊತೆ ಕರಾಚಿಯ ಹೋಟೆಲ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. 

2.ಶೇನ್ ವಾರ್ನ್
ಆಸ್ಟ್ರೇಲಿಯಾ ತಂಡದ ಮಾಜಿ ಸ್ಪಿನ್ ಆಟಗಾರ ಶೇನ್ ವಾರ್ನ್ ತಮ್ಮ ಆಕ್ರಮಣಕಾರಿ ಬೌಲಿಂಗ್ ಜೊತೆ ಖಾಸಗಿ ವಿಷಯಗಳಿಂದಲೂ ಸುದ್ದಿಯಾದ ಕ್ರಿಕೆಟಿಗ. 2003ರಲ್ಲಿ ಶೇನ್ ವಾರ್ನ್ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿತ್ತು. ದಕ್ಷಿಣ ಆಫ್ರಿಕಾದ ಮಹಿಳೆ ಮೊಬೈಲ್‌ಗೆ ಅಸಭ್ಯ ಮೆಸೇಜ್ ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಆರೋಪದ ವಿರುದ್ಧ ಕಾನೂನು ಹೋರಾಟ ನಡೆಸಿದ ಶೇನ್ ವಾರ್ನ್ ಹಲವು ಸವಾಲುಗಳನ್ನು ಎದುರಿಸಿ  ಆನು ನಿರಪರಾಧಿ ಎಂದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದರು. 

ಇರಾನಿ ಕಪ್: ಶೇಷ ಭಾರತ ವಿರುದ್ದ ಮುಂಬೈಗೆ ಮುನ್ನಡೆ; ರೋಚಕಘಟ್ಟದತ್ತ ಕೊನೆಯ ದಿನದಾಟ

3.ಹರ್ಷಲ್ ಗಿಬ್ಸ್
ಅಪಖ್ಯಾತಿಗೊಳಗಾದ ಕ್ರಿಕೆಟಿಗರ ಪಟ್ಟಿಯಲ್ಲಿ ಹರ್ಷಲ್ ಗಿಬ್ಸ್ ಹೆಸರು ಸಹ ಖಂಡಿತ ಬರುತ್ತದೆ. ಯುವತಿ ಜೊತೆ ಕಳೆದ ಖಾಸಗಿ ಕ್ಷಣಗಳ ಬಗ್ಗೆ ಸ್ವತಃ ಹರ್ಷಲ್ ಗಿಬ್ಸ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 1999ರ ವಿಶ್ವಕಪ್ ಸಂದರ್ಭದಲ್ಲಿ, ಆಸ್ಟ್ರೇಲಿಯಾ ಜೊತೆಗಿನ ಪಂದ್ಯದಲ್ಲಿ ನಾನು ಸೆಂಚೂರಿ ದಾಖಲಿಸುತ್ತೇನೆ ಎಂಬುದರ ಬಗ್ಗೆ ಸಂದೇಹವಿತ್ತು. ಆದ್ರೆ ಪಂದ್ಯಕ್ಕೂ ಒಂದು ದಿನ ಮುನ್ನ ಯುವತಿಯೋರ್ವಳು ಹಾಸಿಗೆಯಲ್ಲಿ ನನ್ನೊಂದಿಗಿದ್ದಳು. ಆ ಹುಡುಗಿಯಿಂದ ನಾನು ಹೆಚ್ಚು ಪ್ರೇರಪಿತೆಗೊಂಡೆ. ಆಕೆ ನಾನು ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಳು. ನನಗೆ ಆಕೆ ಲಕ್ಕಿ ಚಾರ್ಮ್. ನಾನು ಮೈದಾನದಲ್ಲಿದ್ದಾಗಲೂ ಆಕೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದಳು. ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಯುವತಿ ಇದ್ದಳು ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು.

4.ಕ್ರಿಸ್ ಗೇಲ್ 
ಜಗತ್ತಿನ ಡೇಂಜರಸ್ ಆಟಗಾರರ ಪಟ್ಟಿಯಲ್ಲಿ ಕ್ರಿಸ್ ಗೇಲ್ ಇರುತ್ತಾರೆ. ಬ್ಯಾಟ್ ಹಿಡಿದು ಗೇಲ್ ಅಂಗಳಕ್ಕೆ ಎದುರಾಳಿ ಇಳಿದ್ರೆ ಎದುರಾಳಿಗಳು ಹೆದರುವ ಕಾಲ ಇತ್ತು. ಮೈದಾನದ  ಹೊರಗೆ ಗೆಳತಿ ಜೊತೆಗಿನ ವಿಷಯಗಳಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಕ್ರಿಸ್ ಗೇಲ್ ಹೆಸರು ಹಲವು ಸ್ಕ್ಯಾಂಗಳಲ್ಲಿ ಕೇಳಿ ಬಂದಿತ್ತು. ಕೆಲವು ಪ್ರಕರಣಗಳಲ್ಲಿ ಕ್ರಿಸ್ ಗೇಲ್ ರೆಡ್ ಹ್ಯಾಂಡ್‌ ಆಗಿಯೂ ಸಿಕ್ಕಿದ್ದರು. ಎದುರಾಳಗಳೊಂದಿಗೆ ಜಗಳ ಆಡಿ ಕ್ರಿಸ್ ಗೇಲ್ ವಿವಾದದಲ್ಲಿಯೂ ಸಿಲುಕಿಕೊಂಡಿದ್ದರು.

5.ಕೆವಿನ್ ಪೀಟರ್ಸನ್
ವಿಶ್ವದ ಅತ್ಯಂತ ಯಶಸ್ವಿ ಆಟಗಾರರ ಪೈಕಿ ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಸಹ ಕ್ಲೀನ್ ಇಮೇಜ್ ಹೊಂದಿಲ್ಲ. ಪೀಟರ್ಸನ್ ಹೆಸರು ಬಿಗ್ ಬ್ರದರ್ ಖ್ಯಾತಿಯ ಸೌಂದರ್ಯ ರಾಣಿ ವನೆಸ್ಸಾ ನಿಮ್ಮೊ ಜೊತೆಯಲ್ಲಿ ತಳಕು ಹಾಕಿಕೊಂಡಿತ್ತು. ಪೀಟರ್ಸನ್ ಹಾಗೂ ನಟಿಯ ನಡುವಿನ ಸಂಬಂಧ ಜಗಜ್ಜಾಹೀರು ಆಗಿತ್ತು. ನಿಮ್ಮೋ ಮತ್ತು ಕೆವಿನ್ ನಡುವಿನ ಸಂಬಂಧವು ಹಲವು ತಿಂಗಳುಗಳವರೆಗೆ ಮುಂದುವರಿದಿತ್ತು.

click me!