ಫ್ಲ್ಯಾಟ್‌ನಲ್ಲಿ ಶವವಾಗಿ ಪತ್ತೆಯಾದ ಕರ್ನಾಟಕ ಮೂಲದ ಟೀಮ್‌ ಇಂಡಿಯಾ ಮಾಜಿ ಆಟಗಾರನ ತಾಯಿ!

Published : Oct 05, 2024, 09:15 AM ISTUpdated : Oct 05, 2024, 09:42 AM IST
 ಫ್ಲ್ಯಾಟ್‌ನಲ್ಲಿ ಶವವಾಗಿ ಪತ್ತೆಯಾದ ಕರ್ನಾಟಕ ಮೂಲದ ಟೀಮ್‌ ಇಂಡಿಯಾ ಮಾಜಿ ಆಟಗಾರನ ತಾಯಿ!

ಸಾರಾಂಶ

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸಲೀಲ್ ಅಂಕೋಲಾ ಅವರ ತಾಯಿ ಮಾಲಾ ಅಶೋಕ್ ಅಂಕೋಲಾ ಪುಣೆಯ ತಮ್ಮ ಫ್ಲಾಟ್‌ನಲ್ಲಿ ಶುಕ್ರವಾರ ನಿಗೂಢ ರೀತಿಯಲ್ಲಿ ಮೃತರಾಗಿ ಪತ್ತೆಯಾಗಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮುಂಬೈ (ಅ.5): ಟೀಮ್‌ ಇಂಡಿಯಾದ ಮಾಜಿ ಕ್ರಿಕೆಟಿಗ ಮತ್ತು ಆಯ್ಕೆಗಾರ ಸಲೀಲ್ ಅಂಕೋಲಾ ಅವರ ತಾಯಿ ಪುಣೆಯ ಫ್ಲಾಟ್‌ನಲ್ಲಿ ಶುಕ್ರವಾರ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಈ ದುರಂತ ಘಟನೆಯ ಕುರಿತು ಅಂಕೋಲಾದ ಕುಟುಂಬ ಇನ್ನೂ ಹೇಳಿಕೆ ನೀಡಿಲ್ಲ. ಸಲೀಲ್ ಅವರ ತಾಯಿಯ ಹೆಸರನ್ನು ಮಾಲಾ ಅಶೋಕ್ ಅಂಕೋಲಾ ಎಂದು ಹೇಳಲಾಗಿದ್ದು, ಪುಣೆಯ ಡೆಕ್ಕನ್ ಜಿಮ್ಖಾನಾ ಪ್ರದೇಶದಲ್ಲಿರುವ ಪ್ರಭಾತ್ ರೋಡ್ ಕಾಂಪ್ಲೆಕ್ಸ್‌ನಲ್ಲಿ ವಾಸ ಮಾಡುತ್ತಿದ್ದರು. ಕರ್ನಾಟಕದ ಉತ್ತರ ಕನ್ನಡದ ಅಂಕೋಲಾ ಮೂಲದವರಾದ 56 ವರ್ಷದ ಸಲೀಲ್‌ ಅಶೋಕ್‌ ಅಂಕೋಲಾ, ತಮ್ಮ ಇಡೀ ಕ್ರಿಕೆಟ್‌ ವೃತ್ತಿಜಜೀವನವನ್ನು ಮುಂಬೈ ಪರವಾಗಿಯೇ ಆಡಿದ್ದರು. ಭಾರತದ ಪರವಾಗಿ 20 ಏಕದಿನ ಹಾಗೂ ಏಕೈಕ ಟೆಸ್ಟ್‌ ಪಂದ್ಯವಾಡಿದ್ದ ಸಲೀಲ್‌ ಅಂಕೋಲಾ, 1996ರ ಏಕದಿನ ವಿಶ್ವಕಪ್‌ ತಂಡದ ಭಾಗವಾಗಿದ್ದರು.

ಫ್ಲಾಟ್‌ನ ಬಾಗಿಲು ಬಹಳ ಸಮಯದಿಂದ ಮುಚ್ಚಿದ್ದರಿಂದ ಅಕ್ಕಪಕ್ಕದ ಮನೆಯವರು ಮಾಲಾ ಅವರ ಫ್ಲಾಟ್‌ಗೆ ನುಗ್ಗಿ ನೋಡಿದಾಗ ಅವರು ರಕ್ತದ ಮಡುವಿನಲ್ಲಿ ಹಾಸಿಗೆಯ ಮೇಲೆ ಬಿದ್ದಿರುವುದನ್ನು ಕಂಡಿದ್ದಾರೆ. ವರದಿಗಳ ಪ್ರಕಾರ ಆಕೆಯ ಕುತ್ತಿಗೆಯನ್ನು ಹರಿತವಾದ ಆಯುಧದಿಂದ ಸೀಳಲಾಗಿದೆ. ತಕ್ಷಣ ಆಕೆಯ ಕುಟುಂಬದವರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎನ್ನಲಾಗಿದೆ. ಪೊಲೀಸರು ತನಿಖೆಯನ್ನು ಆರಂಭ ಮಾಡಿದ್ದು, ಘಟನೆಯ ಕುರಿತು ಇನ್ನಷ್ಟು ವಿವರಗಳು ಸಿಗುವ ಸಾಧ್ಯತೆ ಇದೆ.

ಕ್ರಿಕೆಟ್‌ ಲೋಕದ ಟಾಪ್‌ 10 ಬ್ಯೂಟಿಫುಲ್‌ ಪ್ಲೇಯರ್ಸ್‌ ಇವರು!

ಸಲೀಲ್‌ ಅಂಕೋಲಾ 1989ರ ನವೆಂಬರ್ 15 ರಂದು ಕರಾಚಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಕೈಕ ಟೆಸ್ಟ್‌ ಪಂದ್ಯ ಆಡಿದ್ದರು. ಮಾಜಿ ಬಲಗೈ ವೇಗಿ ಸಲೀಂ ಮಲಿಕ್ ಅವರನ್ನು ಮೊದಲ ಎಸೆತದಲ್ಲಿ ಮತ್ತು ಸಲೀಮ್ ಯೂಸುಫ್ ಅವರನ್ನು ಎರಡನೇ ಎಸೆತದಲ್ಲಿ ಔಟ್ ಮಾಡಿ ಗಮನಸೆಳೆದಿದ್ದರು. ಅವರು ಕೇವಲ 20 ಏಕದಿನ ಪಂದ್ಯಗಳಲ್ಲಿ ಆಡಿದ್ದಯ, ಕೊನೆಯ ಪಂದ್ಯವನ್ನು 1997 ರಲ್ಲಿ ಆಡಿದ್ದರು.

ಬಾರ್ಡರ್‌-ಗವಾಸ್ಕರ್ ಸರಣಿಯಿಂದ ಮೊಹಮ್ಮದ್ ಶಮಿ ಔಟ್?: ಗಾಳಿ ಸುದ್ದಿ ಬಗ್ಗೆ ತುಟಿಬಿಚ್ಚಿದ ಟೀಂ ಇಂಡಿಯಾ ವೇಗಿ

ಪ್ರಭಾತ್ ರಸ್ತೆಯಲ್ಲಿರುವ ಆಕೆಯ ನಿವಾಸದಲ್ಲಿ ಈ ಘಟನೆ ನಡೆದಿದ್ದು, ಪ್ರದೇಶದಲ್ಲಿ ಕೋಲಾಹಲ ಸೃಷ್ಟಿಸಿದೆ. ಮಾಲಾ ಅಶೋಕ್ ಅವರ ಶವ  ಕುತ್ತಿಗೆಯಲ್ಲಿ ಗಾಯದ ಗುರುತುಗಳೊಂದಿಗೆ ಪತ್ತೆಯಾಗಿದೆ ಎಂದು ಪೊಲೀಸರು ವರದಿ ಮಾಡಿದ್ದಾರೆ. ಆದರೆ, ಮನೆಗೆ ಬಲವಂತವಾಗಿ ಯಾರೂ ಹೊಕ್ಕಿರುವಕುರುಹುಗಳು ಸಿಕ್ಕಿಲ್ಲ. ಹಾಗಾಗಿ ಇದು ಕೊಲೆಯೋ ಆತ್ಮಹತ್ಯೆಯೋ ಎನ್ನುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮಾಲಾ ಅಂಕೋಲಾ ಅವರನ್ನು ಪುಣೆಯ ಅವರ ನಿವಾಸದಲ್ಲಿಯೇ ಕೊಲೆ ಮಾಡಲಾಗಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. 77ರ ಹರೆಯದ ಮಹಿಳೆಯ ಮೇಲೆ ದಾಳಿ ನಡೆದಿದ್ದು, ನಂತರ ಆಕೆಯನ್ನು ಪೂನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುವ ಮುನ್ನವೇ ಸಾವನ್ನಪ್ಪಿದ್ದಾರೆ. ಅಪರಿಚಿತ ದಾಳಿಕೋರರು ಆಕೆಯನ್ನು ಕೊಂದಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಕೆಯ ಕೊಲೆಯ ಹಿಂದಿನ ಉದ್ದೇಶವು ಸ್ಪಷ್ಟವಾಗಿಲ್ಲ. ಈ ದುರಂತ ಘಟನೆಯ ಸುತ್ತಲಿನ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಪೊಲೀಸರು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಸಲೀಲ್ ಅಂಕೋಲಾ, ಮಾಜಿ ಕ್ರಿಕೆಟಿಗ ಮತ್ತು ನಟ, ದೂರದರ್ಶನದಲ್ಲಿ ವೃತ್ತಿಜೀವನ ಹೊಂದಿದ್ದರು. 1990 ರ ದಶಕದ ಉತ್ತರಾರ್ಧದಲ್ಲಿ 'ಚಾಹತ್ ಔರ್ ನಫ್ರತ್' ಮತ್ತು 'ಕೋರಾ ಕಾಗಜ್' ನಂತಹ ಪ್ರದರ್ಶನಗಳೊಂದಿಗೆ ತಮ್ಮ ನಟನೆಯನ್ನು ಪ್ರಾರಂಭಿಸಿದರು. 'ಕರಮ್ ಅಪ್ನಾ ಅಪ್ನಾ' ಚಿತ್ರದಲ್ಲಿ ಮಹೇನ್ ಕಪೂರ್ ಪಾತ್ರದ ನಂತರ ಅವರು ಬೆಳಕಿಗೆ ಬಂದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?