ವಿರಾಟ್ ಕೊಹ್ಲಿ ಆಡಿದ್ರೂ ಕಿಂಗ್, ಆಡದೇ ಇದ್ರೂ ಕಿಂಗ್..!

Published : Jun 02, 2022, 03:34 PM IST
ವಿರಾಟ್ ಕೊಹ್ಲಿ ಆಡಿದ್ರೂ ಕಿಂಗ್, ಆಡದೇ ಇದ್ರೂ ಕಿಂಗ್..!

ಸಾರಾಂಶ

ಈ ಬಾರಿಯ ಐಪಿಎಲ್ ನಲ್ಲೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮೂಲಕ ಮಿಂಚಲು ವಿಫಲವಾಗಿದ್ದಾರೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಅವರ ಕ್ರೇಜ್ ಕಡಿಮೆಯಾಗಿಲ್ಲ. ಐಪಿಎಲ್ ವೇಳೆ ಕೊಹ್ಲಿ ಮಾಡಿರುವ ಒಂದು ಟ್ವೀಟ್ ಈ ಬಾರಿಯ ಐಪಿಎಲ್ ನಲ್ಲಿ ಗರಿಷ್ಠ ಬಾರಿ ರೀ ಟ್ವೀಟ್ ಆದ ಟ್ವೀಟ್ ಎನಿಸಿಕೊಂಡಿದೆ.

ಮುಂಬೈ ( ಜೂನ್ 2) : ವಿರಾಟ್ ಕೊಹ್ಲಿ (Virat Kohli) ಈ ಅಪ್ರತಿಮ ಆಟಗಾರ ದಮನ ಮಾಡದಿರುವ ದಾಖಲೆಗಳಿಲ್ಲ. 14 ವರ್ಷಗಳ ಕ್ರಿಕೆಟ್​ ಜೆರ್ನಿಯಲ್ಲಿ  ಇರೋ ಬರೋ ದಾಖಲೆಗಳನ್ನೆಲ್ಲಾ ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಶರವೇಗವಾಗಿ 70 ಶತಕ. ಇನ್ನೇನೂ ಕ್ರಿಕೆಟ್ ದೇವರ 100 ಸೆಂಚುರಿ ದಾಖಲೆಯನ್ನ ಅಳಿಸಿಹಾಕಿ ಹಾಕ್ತಾರೆ ಅನ್ನುವಷ್ಟರಲ್ಲಿ ಬ್ಯಾಡ್​ಫಾರ್ಮ್​ ವಕ್ಕರಿಸಿತು. 2019 ನವೆಂಬರ್​​ 22ರ ಬಳಿಕ ಶುರುವಾದ ಸೆಂಚುರಿ (Century) ಪರದಾಟ, 2022ಕ್ಕೆ ಬಂದು ನಿಂತಿದೆ.  ಹೆಚ್ಚೂ ಕಡಿಮೆ ಎರಡೂವರೆ ವರ್ಷಗಳ ಕಾಲ ಶತಕ ರಹಿತ ಆಟವಾಡಿ ಅಭಿಮಾನಿಗಳನ್ನ ಬೇಸರಕ್ಕೆ ತಳ್ಳಿದ್ದಾರೆ.

ಸದ್ಯ ಕೊಹ್ಲಿ ಅನ್ನೋ ರಣಚತುರ ಪ್ರಚಂಡ ಫಾರ್ಮ್​ನಲ್ಲಿಲ್ಲ ನಿಜ. 71ನೇ ಶತಕ್ಕಕಾಗಿ ಪರದಾಡ್ತಿದ್ದಾರೆ ಅನ್ನೋದು ನಿಜ. ಇಷ್ಟಾದ್ರು ಈ ಮಾಡರ್ನ್ ಕ್ರಿಕೆಟ್ ದೊರೆಯ ಹವಾ ಮಾತ್ರ ಕಮ್ಮಿಯಾಗಿಲ್ಲ. ಅಸ್ಥಿರ ಪ್ರದರ್ಶನ ನಡುವೆಯೂ ವಿರಾಟ್ ಕಿಂಗ್ ಅನ್ನೋದು ಸಾಬೀತಾಗಿದೆ. ಆನ್ ದಿ ಫೀಲ್ಡ್​​ನ ಪ್ಲಾಫ್ ​​​ಶೋ ಮ್ಯಾನ್​​, ಆಫ್ ದಿ ಫೀಲ್ಡ್​​ನಲ್ಲಿ ಸೂಪರ್ ಸಿಕ್ಸ್​ ಬಾರಿಸಿದ್ದಾರೆ. ಅಂದ್ರೆ ಸೋಷಿಯಲ್​ ಮೀಡಿಯಾದಲ್ಲಿ ಒಂಟಿಸಲಗ ಹವಾ ಎಬ್ಬಿಸಿದ್ದಾರೆ.

ದಾಖಲೆ ಬರೆದ ಕೊಹ್ಲಿಯ ಪ್ಲೇ ಆಫ್ ಪೋಸ್ಟ್​​: ಈ ಬಾರಿಯ ಐಪಿಎಲ್​​ನಲ್ಲೂ ಆರ್ ಸಿಬಿ ಅದೃಷ್ಟ ಬದಲಾಗ್ಲಿಲ್ಲ. ಘಟಾನುಘಟಿ ಪ್ಲೇಯರ್ಸ್​ ಹೊಂದಿದ್ರೂ ಕೆಂಪಂಗಿ ಸೈನ್ಯಕ್ಕೆ ಕಪ್​ ಮಿಸ್ಸಾಯ್ತು. ಕ್ವಾಲಿಫೈಯರ್​​​​​-2ನಲ್ಲಿ ಆರ್ ಸಿಬಿ (RCB) ಹೊರಬಿದ್ದು, ಅಭಿಮಾನಿಗಳನ್ನ ಭ್ರಮನಿರಸನಗೊಳಿಸಿದೆ. ಆದ್ರೆ ಆರ್ ಸಿಬಿಗೆ ಈ ಸಲ ಕಪ್ ಮಿಸ್ಸಾಗಿರಬಹುದು. ಮಾಜಿ ಕ್ಯಾಪ್ಟನ್​ ಮಾತ್ರ ಚಾಂಪಿಯನ್ ಆಗಿದ್ದಾರೆ. ಪ್ಲೇ ಆಫ್​ ಟೈಮ್​​ ಅಲ್ಲಿ ಇವರು ಮಾಡಿದ ಪೋಸ್ಟ್​ವೊಂದು ಸೋಷಿಯಲ್​ ಮೀಡಿಯಾದಲ್ಲಿ  ದಾಖಲೆ ಬರೆದಿದೆ.

ಕೊಹ್ಲಿಯ ಪ್ಲೇ ಆಫ್​ ಟ್ವೀಟ್​ 27.8K ಬಾರಿ ರಿಟ್ವೀಟ್: ನಿಮಗೆಲ್ಲರಿಗೂ ನೆನಪಿದಿದೆ. ಈ ಬಾರಿ ಆರ್ ಸಿಬಿ ತಂಡಕ್ಕೆ ಪ್ಲೇಆಫ್ ಹಾದಿ ದುರ್ಗಮವಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಮುಂಬೈ ಇಂಡಿಯನ್ಸ್ (Mumbai Indians) ಗೆದ್ದರಷ್ಟೇ ನಾಕೌಟ್​​​​​ ತಲುಪುವ ಅವಕಾವಿತ್ತು. ಕೊನೆಗೆ ಅದು ನಿಜವಾಯ್ತು. ಡೆಲ್ಲಿ ಸೋತಿದ್ದರಿಂದ ಆರ್ ಸಿಬಿಗೆ ಫ್ಲೇ ಆಫ್​ ಟಿಕೆಟ್​ ಕನ್ಫರ್ಮ್​ ಆಗಿತ್ತು. ಈ ಖುಷಿಯಲ್ಲಿ ವಿರಾಟ್ ಕೊಹ್ಲಿ ಟ್ವೀಟರ್​​ನಲ್ಲಿ ಕೋಲ್ಕತ್ತಾ ಎಂದು ಬರೆದುಕೊಂಡ್ರು. ಅಂದ್ರೆ ಪ್ಲೇಆಫ್​ ಆಡಲು ಕೋಲ್ಕತ್ತಾಗೆ ತೆರಳುತ್ತಿದ್ದೇವೆ ಎನ್ನುವುದು ಆ ಪೋಸ್ಟ್​​​ನ ಅರ್ಥವಾಗಿತ್ತು.

ನೀನೇ ನನಗೆ ಸರಿಯಾದ ಜೋಡಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೀಪಕ್ ಚಹಾರ್

ಅಂದು ಕೊಹ್ಲಿ ಮಾಡಿದ ಈ ಪ್ಲೇ ಆಫ್​ ಟ್ವೀಟ್​​​ 27.8K ರಿಟ್ವೀಟ್ ಪಡೆದಿದೆ. ಅಂದ್ರೆ 27 ಸಾವಿರದ 800 ಮಂದಿ ರಿಟ್ವೀಟ್ ಮಾಡಿದ್ದು, 15ನೇ ಐಪಿಎಲ್​​ನಲ್ಲಿ ಹೆಚ್ಚು ರಿಟ್ವೀಟ್​​​​​ ಆದ ಟ್ವೀಟ್ ಅನ್ನಿಸಿಕೊಂಡಿದೆ. ಕೊಹ್ಲಿಗೆ ಸೋಷಿಯಲ್​ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್​ ಇರೋದ್ರಿಂದ ಇದು ಹೆಚ್ಚು ರಿಟ್ವೀಟ್ ಪಡೆದುಕೊಂಡಿದೆ. .

2023ರ ಮಾರ್ಚ್‌ಲ್ಲಿ ಚೊಚ್ಚಲ ಆವೃತ್ತಿಯ ಮಹಿಳಾ ಐಪಿಎಲ್..?

ಮುಂಬೈ ಇಂಡಿಯನ್ಸ್​ಗೆ 2ನೇ ಸ್ಥಾನ: ಇನ್ನು ಕೊಹ್ಲಿ ಟ್ವೀಟ್ ಮಾಡಿದ ದಿನದಂದೇ ಮುಂಬೈ ಇಂಡಿಯನ್ಸ್ ಕೂಡ ಒಂದು ಟ್ವೀಟ್ ಮಾಡಿತ್ತು. ಸದ್ಯ ಈ ಟ್ವೀಟ್​ 25.4K ಬಾರಿ ರಿಟ್ವೀಟ್​​ ಪಡೆದುಕೊಂಡಿದೆ. ರೋಹಿತ್​​ ಪಡೆ ಸೋಷಿಯಲ್​ ಮೀಡಿಯಾದಲ್ಲಿ ಅತ್ಯಧಿಕ ಫಾಲೋವರ್ಸ್​ ಹೊಂದಿದ ಮೊದಲ ಫ್ರಾಂಚೈಸಿ ಅನ್ನಿಸಿಕೊಂಡಿದ್ದು, ಏನೇ ಹಾಕಿದ್ರೂ ನೆಟ್ಟಿಗರು ಕುತೂಹಲದಿಂದ ವೀಕ್ಷಿಸ್ತಾರೆ. ಏನೇ ಹೇಳಿ, ಬ್ಯಾಡ್ ಫಾರ್ಮ್​ ಮಧ್ಯೆಯೂ  ಕೊಹ್ಲಿಯಂತೆ ಆಲ್ವೇಸ್ ಕಿಂಗ್ ಅನ್ನಿಸಿಕೊಳ್ಳೋದು ಸುಲಭವಲ್ಲ. ಅದುವೇ ಕೊಹ್ಲಿಯ ತಾಕತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

T20 ಕ್ರಿಕೆಟ್‌ನಲ್ಲಿ ಅತಿವೇಗದ 5000 ರನ್! ರಸೆಲ್, ಟಿಮ್ ಡೇವಿಡ್‌ರನ್ನೇ ಹಿಂದಿಕ್ಕಿದ ಅಭಿಷೇಕ್ ಶರ್ಮಾ!
ಒಂದ್ವೇಳೆ ಬಾಂಗ್ಲಾದೇಶ ಟಿ20 ವಿಶ್ವಕಪ್ ಬಾಯ್ಕಾಟ್ ಮಾಡಿದ್ರೆ ಅನುಭವಿಸೋ ಕಷ್ಟ ಒಂದೆರಡಲ್ಲ! ಭಾರೀ ಬೆಲೆ ತೆರಬೇಕು