ಹೊಸ ರೂಲ್ಸ್‌ನೊಂದಿಗೆ ಇಂದಿನಿಂದ ಟೆಸ್ಟ್‌ ಕ್ರಿಕೆಟ್ ಆರಂಭ‌!

By Kannadaprabha News  |  First Published Jul 8, 2020, 7:32 AM IST

ಬರೋಬ್ಬರಿ 117 ದಿನಗಳ ಬಳಿಕ ಅಂತಾರಾಷ್ಟ್ರೀಯ  ಕ್ರಿಕೆಟ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೊರೋನಾ ಭೀತಿಯ ನಡುವೆ ಹಲವು ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಸೆಣಸಲಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಸೌಥಾಂಪ್ಟನ್(ಜು.08)‌: ಕೊರೋನಾ ಸೋಂಕಿನಿಂದಾಗಿ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌, 117 ದಿನಗಳ ಬಳಿಕ ಬುಧವಾರದಿಂದ ಪುನಾರಂಭಗೊಳ್ಳಲಿದೆ. ಇಲ್ಲಿನ ಏಜೀಸ್‌ ಬೌಲ್‌ ಕ್ರೀಡಾಂಗಣದಲ್ಲಿ ಇಂಗ್ಲೆಂಡ್‌ ಹಾಗೂ ವೆಸ್ಟ್‌ಇಂಡೀಸ್‌ ನಡುವೆ 3 ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ ನಡೆಯಲಿದೆ. ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಬಯೋ ಸೆಕ್ಯೂರ್‌ ವಾತಾವರಣ ನಿರ್ಮಿಸಲಾಗಿದೆ. ಮಾ.13ರಂದು ಆಸ್ಪ್ರೇಲಿಯಾ-ನ್ಯೂಜಿಲೆಂಡ್‌ ನಡುವೆ ಏಕದಿನ ಪಂದ್ಯ ನಡೆದಿತ್ತು. ಅದೇ ಕೊನೆ, ಆ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವೊಂದು ನಡೆಯಲಿದೆ.

ಏನಿದು ಬಯೋ ಸೆಕ್ಯೂರ್‌?:

Tap to resize

Latest Videos

undefined

ಕ್ರೀಡಾಂಗಣದ ಸುತ್ತ ಕೊರೋನಾ ಸೋಂಕು ತಗುಲದಂತೆ ಎಲ್ಲಾ ಸುರಕ್ಷಿತ ಕ್ರಮಗಳನ್ನು ಅಳವಡಿಸಲಾಗಿದೆ. ಇದನ್ನೇ ಬಯೋ ಸೆಕ್ಯೂರ್‌ ವಾತಾವರಣ ಎಂದು ಕರೆಯಲಾಗುತ್ತದೆ. ಸೀಮಿತ ಜನರಿಗಷ್ಟೇ ಈ ಪ್ರದೇಶದೊಳಗೆ ಪ್ರವೇಶ ನೀಡಲಾಗುತ್ತದೆ. ಕ್ರೀಡಾಂಗಣದ ಪಕ್ಕದಲ್ಲೇ ಇರುವ ಹೋಟೆಲ್‌ನಲ್ಲಿ ಆಟಗಾರರು ವಾಸ್ತವ್ಯ ಹೂಡಿದ್ದಾರೆ. ಪತ್ರಕರ್ತರ ಪ್ರವೇಶಕ್ಕೂ ಹಲವು ಮಾರ್ಗಸೂಚಿಗಳನ್ನು ಜಾರಿ ಮಾಡಲಾಗಿದೆ. 

ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್‌ಗೆ ಇಂಗ್ಲೆಂಡ್ ತಂಡ ಪ್ರಕಟ

ಯಾರೇ ಈ ಪ್ರದೇಶದೊಳಗೆ ಪ್ರವೇಶಿಸಬೇಕಿದ್ದರೂ ಥರ್ಮಲ್‌ ಸ್ಕ್ಯಾನಿಂಗ್‌ (ದೇಹದ ತಾಪಮಾನ ಪರೀಕ್ಷೆ)ಗೆ ಒಳಪಡಬೇಕಿದೆ. ಆಟಗಾರರು ಹಾಗೂ ಈ ಪ್ರದೇಶಕ್ಕೆ ಪ್ರವೇಶಿಸುವವರ ಆರೋಗ್ಯ ವಿವರಗಳನ್ನು ಪ್ರತಿ ದಿನ ವರದಿ ಮಾಡಬೇಕಿದೆ. ಆಟಗಾರರು, ಅಂಪೈರ್‌ಗಳು, ರೆಫ್ರಿ, ಸಹಾಯಕ ಸಿಬ್ಬಂದಿ, ಪ್ರಸಾರಕರು, ಸ್ಕೋರರ್‌ಗಳು, ಪತ್ರಕರ್ತರು, ಆಹಾರ ವಿತರಕರು ಎಲ್ಲಾ ಸೇರಿ ಗರಿಷ್ಠ 200ರಿಂದ 250 ಮಂದಿಗಷ್ಟೇ ಕ್ರೀಡಾಂಗಣದ ಆವರಣದೊಳಗೆ ಪ್ರವೇಶ ನೀಡಲಾಗುವುದು. ಆಟಗಾರರು ಹಲವು ಬದಲಾವಣೆಗಳೊಂದಿಗೆ ಆಡಬೇಕಿದೆ.

ಹಲವು ಬದಲಾವಣೆ

* ಚೆಂಡಿಗೆ ಎಂಜಲು ಹಾಕಿ ಉಜ್ಜುವಂತಿಲ್ಲ

* ಅಂಪೈರ್‌ಗಳು ಮಾಸ್ಕ್‌ ಧರಿಸಿರಬೇಕು

* ವಿಕೆಟ್‌ ಬಿದ್ದಾಗ ಅಂತರ ಕಾಯ್ದುಕೊಂಡು ಸಂಭ್ರಮಿಸಬೇಕು

* ಬೌಂಡರಿ ಗೆರೆ ಬಳಿ ಇರುವ ಸ್ಯಾನಿಟೈಸರ್‌ ಅನ್ನು ಬಳಕೆ ಮಾಡಬೇಕು

* ಆಟಗಾರರು ಮೈದಾನದಲ್ಲಿ ಉಗುಳುವಂತಿಲ್ಲ

click me!