
ರಾಂಚಿ(ಜು.07): ವಿಶ್ವಕಂಡ ಅದ್ಭುತ ಕ್ರಿಕೆಟಿಗ, ಶ್ರೇಷ್ಠ ನಾಯಕ ಎಂ.ಎಸ್.ಧೋನಿ 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಧೋನಿ ಹುಟ್ಟು ಹಬ್ಬಕ್ಕೆ ವೆಸ್ಟ್ ಇಂಡೀಸ್ ಕ್ರಿಕೆಟಿಗ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟೀಮ್‌ಮೇಟ್ಸ್ ಡ್ವೇನ್ ಬ್ರಾವೋ ಹೆಲಿಕಾಪ್ಟರ್ 7 ಹಾಡನ್ನು ಧೋನಿಗೆ ಗಿಫ್ಟ್ ನೀಡಿದ್ದಾರೆ. ಧೋನಿ ಕುರಿತ ಈ ಹಾಡು , ಹುಟ್ಟು ಹಬ್ಬಕ್ಕೆ ಉಡುಗೊರೆಯಾಗಿ ಬ್ರಾವೋ ನೀಡಿದ್ದಾರೆ.
ಎಂ.ಎಸ್.ಧೋನಿ ಹುಟ್ಟು ಹಬ್ಬ ಜುಲೈ 07ನೇ ತಾರೀಖು. ಹೀಗಾಗಿ ಧೋನಿ ಜರ್ಸಿ ನಂಬರ್ 7. ಇದೇ ಜರ್ಸಿ ನಂಬರ್ 7 ಹಾಗೂ ಧೋನಿಯ ಸಿಗ್ನೇಚರ್ ಸಿಕ್ಸ್ ಹೆಲಿಕಾಪ್ಟರ್ ಶಾಟ್‌ನ್ನು ಈ ಹಾಡಿನಲ್ಲಿ ಸೇರಿಸಲಾಗಿದೆ. ಧೋನಿ ಸಾಧನೆಗಳನ್ನು, ಸರಳತೆಯನ್ನು ಈ ಹಾಡಿನಲ್ಲಿ ವಿವರಿಸಲಾಗಿದೆ. ಧೋನಿ ಕ್ರಿಕೆಟ್ ಜರ್ನಿ, ಐಸಿಸಿ 3 ಟ್ರೋಫಿ ಸೇರಿದಂತೆ ಸಾಧನೆಯ ಚಿತ್ರಣವನ್ನು ನೀಡಲಾಗಿದೆ.
ಚಾಂಪಿಯನ್ ಹಾಡಿನ ಮೂಲಕ ಹೊಸ ಸಂಚಲನ ಮೂಡಿಸಿರುವ ಡ್ವೇನ್ ಬ್ರಾವೋ ಇದೀಗ ಧೋನಿಗಾಗಿಗ ಹೆಲಿಕಾಪ್ಟರ್ 7 ಹಾಡನ್ನು ಬಿಡುಗಡೆ ಮಾಡಿ ಸದ್ದು ಮಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಟ್ವಿಟರ್ ಖಾತೆಯಲ್ಲಿ ಸಂಪೂರ್ಣ ಹಾಡನ್ನು ಪೋಸ್ಟ್ ಮಾಡಲಾಗಿದೆ. ಧೋನಿ ಹಾಡಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಮಹಿ ಬರ್ತ್ ಡೇಗೆ ಹೃದಯಸ್ಪರ್ಷಿಯಾಗಿ ಶುಭಕೋರಿದ ಕೊಹ್ಲಿ..!.
ಧೋನಿ ಹುಟ್ಟು ಹಬ್ಬಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರು, ವಿದೇಶಿ ಕ್ರಿಕೆಟಿಗರು ಸೇರಿದಂತೆ ಎಲ್ಲರೂ ಧೋನಿಗೆ ಶುಭಾಶಯ ಕೋರಿದ್ದಾರೆ. 2019ರ ವಿಶ್ವಕಪ್ ಟೂರ್ನಿ ಬಳಿಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಧೋನಿ, ಈ ಬಾರಿಯ ಐಪಿಎಲ್ ಟೂರ್ನಿ ಮೂಲಕ ಕಮ್‌ಬ್ಯಾಕ್ ಮಾಡಲಿದ್ದಾರೆ ಅನ್ನೋ ಮಾತುಗಳು ಬಲವಾಗಿತ್ತು. ಆದರೆ ಕೊರೋನಾ ವೈರಸ್ ಕಾರಣ ಐಪಿಎಲ್ ಟೂರ್ನಿ ಆಯೋಜನೆ ಕಷ್ಟವಾಗಿದೆ. ಸರಿಸುಮಾರು 1 ವರ್ಷಗಳ ಬಳಿಕ ಧೋನಿ ಬ್ಯಾಟಿಂಗ್ ನೋಡಲು ಬಯಸಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.