ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡಕ್ಕೆ ಬವುಮಾ ಹೊಸ ನಾಯಕ

By Suvarna NewsFirst Published Mar 5, 2021, 1:07 PM IST
Highlights

ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡಕ್ಕೆ ಹೊಸ ನಾಯಕರನ್ನು ನೇಮಿಸಲಾಗಿದೆ. ಸೀಮಿತ ಓವರ್‌ಗಳ ತಂಡವನ್ನು ತಂಡವನ್ನು ತೆಂಬ ಬವುಮಾ ಮುನ್ನಡೆಸಿದರೆ, ಟೆಸ್ಟ್ ತಂಡವನ್ನು ಡೀನ್ ಎಲ್ಗಾರ್ ಮುನ್ನಡೆಸಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಜೋಹಾನ್ಸ್‌ಬರ್ಗ್(ಮಾ.05)‌: ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಸಂಸ್ಥೆ ಗುರುವಾರ ತನ್ನ ತಂಡಗಳಿಗೆ ಹೊಸ ನಾಯಕರನ್ನು ನೇಮಿಸಿದೆ. ಏಕದಿನ ಹಾಗೂ ಟಿ20 ತಂಡಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ತೆಂಬ ಬವುಮಾರನ್ನು ನಾಯಕನನ್ನಾಗಿ ನೇಮಿಸಿದ್ದು, ಟೆಸ್ಟ್‌ ತಂಡದ ನಾಯಕತ್ವವನ್ನು ಡೀನ್‌ ಎಲ್ಗರ್‌ಗೆ ನೀಡಲಾಗಿದೆ.

ಫಾಫ್‌ ಡು ಪ್ಲೆಸಿ ನಾಯಕತ್ವದಿಂದ ಕೆಳಗಿಳಿದ ಬಳಿಕ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಕ್ವಿಂಟನ್‌ ಡಿ ಕಾಕ್‌ರನ್ನು ಹಂಗಾಮಿ ನಾಯಕನನ್ನಾಗಿ ನೇಮಿಸಲಾಗಿತ್ತು. ಸಂಕಷ್ಟದ ಕಾಲದಲ್ಲಿ ತಂಡವನ್ನು ಮುನ್ನಡೆಸಿದ್ದಕ್ಕೆ ಡಿ ಕಾಕ್‌ಗೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಡೈರೆಕ್ಟರ್ ಗ್ರೇಮ್‌ ಸ್ಮಿತ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ. 

🚨 BREAKING NEWS

🇿🇦 Top order batsmen Dean Elgar (Test) and Temba Bavuma (Limited Overs) will lead the on the field pic.twitter.com/gHMlINTZEw

— Cricket South Africa (@OfficialCSA)

ತೆಂಬ ಬವುಮಾ ಭಾರತದಲ್ಲಿ ನಡೆಯಲಿರುವ 2021 & ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2022ರ ಐಸಿಸಿ ಟಿ20 ವಿಶ್ವಕಪ್ ಹಾಗೂ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಡೀನ್‌ ಎಲ್ಗಾರ್‌ ಐಸಿಸಿ ಟೆಸ್ಟ್ ಚಾಂಪಿಯನ್‌ ಫೈನಲ್‌ ಮುಕ್ತಾಯದ ಬಳಿಕ ಹರಿಣಗಳ ಪಡೆಯನ್ನು ಮುನ್ನಡೆಸಲಿದ್ದಾರೆ.

IPL 2021: ದೇಶ ಮೊದಲು, ಐಪಿಎಲ್ ಆಮೇಲೆ ಎಂದ ಕಗಿಸೋ ರಬಾಡ..!

ಇತ್ತೀಚಿನ ದಿನಗಳಲ್ಲಿ ತೆಂಬ ಬವುಮಾ ಸ್ಥಿರ ಪ್ರದರ್ಶನ ತೋರುತ್ತಿದ್ದ, ಸಹ ಆಟಗಾರರ ಜತೆ ಪ್ರಭಾವಶಾಲಿ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಸ್ಥಿರ ಪ್ರದರ್ಶನ ತೋರುವುದರ ಜತೆಗೆ ಉತ್ತಮ ನಾಯಕತ್ವದ ಗುಣಗಳನ್ನು ಹೊಂದಿದ್ದಾರೆ. ಇನ್ನು ಟೆಸ್ಟ್ ತಂಡದಲ್ಲಿ ಬವುಮಾ ಉಮನಾಯಕನಾಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಗ್ರೇಮ್‌ ಸ್ಮಿತ್ ತಿಳಿಸಿದ್ದಾರೆ.

ತೆಂಬ ಬವುಮಾ ದಕ್ಷಿಣ ಆಫ್ರಿಕಾ ಪರ 44 ಟೆಸ್ಟ್‌, 6 ಏಕದಿನ ಹಾಗೂ 8 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇನ್ನು ಡೀನ್ ಎಲ್ಗಾರ್ 67 ಟೆಸ್ಟ್‌ ಹಾಗೂ 8 ಏಕದಿನ ಪಂದ್ಯಗಳನ್ನಾಡಿದ್ದಾರೆ.

click me!