Team India ವಿಂಡೀಸ್ ಪ್ರವಾಸಕ್ಕೆ ವೇಳಾಪಟ್ಟಿ ಪ್ರಕಟ, ಕೊನೆಯ 2 ಪಂದ್ಯಕ್ಕೆ ಅಮೆರಿಕ ಆತಿಥ್ಯ..!

Published : May 07, 2022, 01:20 PM IST
Team India ವಿಂಡೀಸ್ ಪ್ರವಾಸಕ್ಕೆ ವೇಳಾಪಟ್ಟಿ ಪ್ರಕಟ, ಕೊನೆಯ 2 ಪಂದ್ಯಕ್ಕೆ ಅಮೆರಿಕ ಆತಿಥ್ಯ..!

ಸಾರಾಂಶ

* ವೆಸ್ಟ್‌ ಇಂಡೀಸ್ ಎದುರಿನ ಸೀಮಿತ ಓವರ್‌ಗಳ ಸರಣಿಗೆ ವೇಳಾಪಟ್ಟಿ ಪ್ರಕಟ * ಜುಲೈ 22ರಿಂದ ಆರಂಭವಾಗಲಿದೆ ವೆಸ್ಟ್ ಇಂಡೀಸ್ ಎದುರಿನ ಸೀಮಿತ ಓವರ್‌ಗಳ ಸರಣಿ * ಕೊನೆ ಎರಡು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಗೆ ಅಮೆರಿಕ ಆತಿಥ್ಯ

ನವದೆಹಲಿ(ಮೇ.07): ರೋಹಿತ್ ಶರ್ಮಾ (Rohit Sharma) ನೇತೃತ್ವದ ಟೀಂ ಇಂಡಿಯಾ (Team India) ಜುಲೈನಲ್ಲಿ ವೆಸ್ಟ್ ಇಂಡೀಸ್ ಪ್ರವಾಸವನ್ನು ಮಾಡಲಿದ್ದು, ವಿಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾ (India Tour of West Indies) 3 ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ವಿಂಡೀಸ್ ಪ್ರವಾಸವು ಜುಲೈ 22ರಿಂದ ಆರಂಭವಾಗಲಿದ್ದು, ವಿಂಡೀಸ್ ಪ್ರವಾಸದ ಕೊನೆ ಎರಡು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಗೆ ಅಮೆರಿಕ ಆತಿಥ್ಯವನ್ನು ವಹಿಸಲಿದೆ 

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾ ಮೊದಲಿಗೆ ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡಲಿದ್ದು, ಜುಲೈ 22, 24 ಹಾಗೂ 27ರಂದು ಟ್ರಿನಿಡ್ಯಾಡ್‌ನ ಕ್ವೀನ್‌ ಪಾರ್ಕ್‌ ಓವಲ್ ಮೈದಾನದಲ್ಲಿ ನಡೆಯಲಿದೆ. ಏಕದಿನ ಸರಣಿ ಮುಕ್ತಾಯವಾಗುತ್ತಿದ್ದಂತೆಯೆ ವೆಸ್ಟ್ ಇಂಡೀಸ್ ಎದುರು ಟೀಂ ಇಂಡಿಯಾ 5 ಪಂದ್ಯಗಳ ಟಿ20 ಸರಣಿಯನ್ನಾಡಲಿದ್ದು, ಮೊದಲ ಟಿ20 ಪಂದ್ಯವು ಜುಲೈ 29ರಿಂದ ಆರಂಭವಾಗಲಿದೆ. ಮೊದಲ ಟಿ20 ಪಂದ್ಯಕ್ಕೆ ಬ್ರಿಯನ್ ಚಾರ್ಲ್ಸ್‌ ಲಾರಾ ಮೈದಾನ ಆತಿಥ್ಯವನ್ನು ವಹಿಸಿದರೆ, ಆಗಸ್ಟ್ 01 ಹಾಗೂ 02ರಂದು ನಡೆಯಲಿರುವ ಎರಡು ಹಾಗೂ ಮೂರನೇ ಟಿ20 ಪಂದ್ಯಕ್ಕೆ ವಾರ್ನರ್‌ ಪಾರ್ಕ್‌ ಮೈದಾನ ಸಾಕ್ಷಿಯಾಗಲಿದೆ. ಇನ್ನು ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳು ಆಗಸ್ಟ್ 06 ಹಾಗೂ 07ರಂದು ಅಮೆರಿಕದ ಪ್ಲೋರಿಡಾದಲ್ಲಿ ಜರುಗಲಿವೆ. 

ಈ ಮೊದಲು ಸಹಾ ಟೀಂ ಇಂಡಿಯಾ, ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಕಳೆದ ಮೂರು ಪ್ರವಾಸಗಳ ಪೈಕಿ ಎರಡು ಪ್ರವಾಸದಲ್ಲಿ ಅಮೆರಿಕ ನೆಲದಲ್ಲಿ ಟಿ20 ಪಂದ್ಯಗಳನ್ನಾಡಿದೆ. 2016ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಟೀಂ ಇಂಡಿಯಾ ಅಮೆರಿಕದಲ್ಲಿ 2 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಇನ್ನು 2019ರಲ್ಲಿ 3 ಪಂದ್ಯಗಳ ಟಿ20 ಸರಣಿಯ ಮೊದಲೆರಡು ಪಂದ್ಯಗಳಿಗೆ ಅಮೆರಿಕ ಸಾಕ್ಷಿಯಾಗಿತ್ತು.

Ben Stokes ಒಂದೇ ಓವರ್‌ನಲ್ಲಿ 5 ಸಿಕ್ಸರ್ ಹಾಗೂ ಬೌಂಡರಿ ಬಾರಿಸಿ ದಾಖಲೆ ಬರೆದ ಸ್ಟೋಕ್ಸ್‌..!

ಐಪಿಎಲ್ ಟೂರ್ನಿ ಮುಕ್ತಾಯದ ಬಳಿಕ ಟೀಂ ಇಂಡಿಯಾ, ತವರಿನಲ್ಲಿಯೇ ದಕ್ಷಿಣ ಆಫ್ರಿಕಾ ಎದುರು 5 ಪಂದ್ಯಗಳ ಟಿ20 ಸರಣಿಯನ್ನಾಡಲಿದೆ. ಇದಾದ ಬಳಿಕ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಐರ್ಲೆಂಡ್ ಹಾಗೂ ಇಂಗ್ಲೆಂಡ್ ವಿರುದ್ದ ಸರಣಿಯನ್ನಾಡಲಿದೆ. ಐರ್ಲೆಂಡ್ ಪ್ರವಾಸ ಮುಗಿಸಿದ ಬಳಿಕ ಟೀಂ ಇಂಡಿಯಾ, ಇಂಗ್ಲೆಂಡ್‌ಗೆ ಬಂದಿಳಿಯಲಿದ್ದು, ಈ ವೇಳೆ ಕಳೆದ ವರ್ಷದಲ್ಲಿ ಬಾಕಿ ಉಳಿದಿದ್ದ ಟೆಸ್ಟ್‌ ಸರಣಿಯ ಏಕೈಕ ಪಂದ್ಯ ಹಾಗೂ 3 ಪಂದ್ಯಗಳ ಟಿ20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಐಪಿಎಲ್ ಟೂರ್ನಿ ಮುಕ್ತಾಯದ ಬಳಿಕ ಟೀಂ ಇಂಡಿಯಾ ತವರಿನಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಸರಣಿಗೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ, ಕೆಲ ಹೊಸ ಮುಖಗಳಿಗೆ ಅವಕಾಶ ನೀಡುವ ಸಾಧ್ಯತೆಯಿದೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ICC Men’s T20 World Cup: ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ: ಅಚ್ಚರಿಯ ಆಯ್ಕೆ, ಗಿಲ್‌ಗಿಲ್ಲ ಸ್ಥಾನ
ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ