ಟೀಂ ಇಂಡಿಯಾಗೆ ಬೃಹತ್ ಗುರಿ ನೀಡಿದ ಆಸೀಸ್; ಕೊಹ್ಲಿ ಸೈನ್ಯಕ್ಕೆ ನೆರವಾಗುತ್ತಾ ಸಿಡ್ನಿ ಇತಿಹಾಸ?

Published : Dec 06, 2020, 03:19 PM IST
ಟೀಂ ಇಂಡಿಯಾಗೆ ಬೃಹತ್ ಗುರಿ ನೀಡಿದ ಆಸೀಸ್; ಕೊಹ್ಲಿ ಸೈನ್ಯಕ್ಕೆ ನೆರವಾಗುತ್ತಾ ಸಿಡ್ನಿ ಇತಿಹಾಸ?

ಸಾರಾಂಶ

ಭಾರತ ವಿರುದ್ಧ 2ನೇ ಹಾಗೂ ಮಹತ್ವದ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ದಿಟ್ಟ ಹೋರಾಟ ನೀಡಿದೆ. ಈ ಮೂಲಕ 194 ರನ್ ಕಲೆ ಹಾಕಿದೆ. ಸಿಡ್ನಿಯಲ್ಲಿ ಅತ್ಯುತ್ತಮ ಇತಿಹಾಸ ಹೊಂದಿರುವ ಟೀಂ ಇಂಡಿಯಾಗೆ ಚೇಸಿಂಗ್ ಅಸಾಧ್ಯವೇನಲ್ಲ. ಸಿಡ್ನಿಯಲ್ಲಿ ಟೀಂ ಇಂಡಿಯಾ ಚೇಸಿಂಗ್ ಹಾಗೂ ಆಸೀಸ್ ಬ್ಯಾಟಿಂಗ್ ಮಾಹಿತಿ ಇಲ್ಲಿದೆ.  

ಸಿಡ್ನಿ(ಡಿ.6):   ಆಸ್ಟ್ರೇಲಿಯಾದ ಪ್ರತಿಷ್ಠಿತ ಸಿಡ್ನಿ ಮೈದಾನದಲ್ಲಿ ಟೀಂ ಇಂಡಿಯಾ ಕಾಂಗರೂಗಳ ವಿರುದ್ಧ 2 ಟಿ20 ಪಂದ್ಯ ಆಡಿ ಎರಡಲ್ಲೂ ಗೆಲುವು ದಾಖಲಿಸಿದೆ. ಇದೀಗ 3ನೇ ಬಾರಿ ಈ ಸಾಧನೆ ಮುಂದುವರಿಸುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ. ಕಾರಣ ಸಿಡ್ನಿಯಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ದಿಟ್ಟ ಹೋರಾಟದ ಮೂಲಕ 194 ರನ್ ಕಲೆಹಾಕಿದೆ.

ಸಿಡ್ನಿ ಮೈದಾನದಲ್ಲಿ 2 ಬಾರಿ ಚೇಸಿಂಗ್ ಮಾಡಿ ಗೆದ್ದಿರುವ ಟೀಂ ಇಂಡಿಯಾ, ಟಾಸ್ ಗೆದ್ದ ತಕ್ಷಣವೇ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇಂಜುರಿ ಕಾರಣ ಆ್ಯರೋನ ಫಿಂಚ್ ಬದಲು ನಾಯಕತ್ವ ವಹಿಸಿಕೊಂಡ ಮ್ಯಾಥ್ಯೂವೇಡ್ ಸ್ಫೋಟಕ ಆರಂಭ ನೀಡಿದರು. ಆದರೆ ಡಾರ್ಕಿ ಶಾರ್ಟ್ ಕೇವಲ 9 ರನ್ ಸಿಡಿಸಿ ಔಟಾದರು.

ಅಬ್ಬರಿಸಿದ ವೇಡ್ ಹಾಫ್ ಸೆಂಚುರಿ ಸಿಡಿಸಿದರು. ವೇಡ್ 32 ಎಸೆತದಲ್ಲಿ 58 ರನ್ ಸಿಡಿಸಿ ಔಟಾದರು. ಇನ್ನು ಸ್ಟೀವ್ ಸ್ಮಿತ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಯಾಟ ಟೀಂ ಇಂಡಿಯಾ ತಲೆನೋವಾಯಿತು. ಮ್ಯಾಕ್ಸ್‌ವೆಲ್ 22 ರನ್ ಚಚ್ಚಿದರು. ಮೊಯಿಸ್ ಹೆನ್ರಿಕೆಸ್ ಹಾಗೂ ಸ್ಮಿತ್ ಇನಿಂಗ್ಸ್ ಆಸೀಸ್ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ಯಿತು.

ಸ್ಮಿತ್ 46 ರನ್ ಸಿಡಿಸಿ ಔಟಾದರು. ಹೆನ್ರಿಕೆಸ್ 26 ರನ್ ಕಾಣಿಕೆ ನೀಡಿದರು.  ಮಾರ್ಕಸ್ ಸ್ಟೊಯ್ನಿಸ್ ಅಜೇಯ 16 ಹಾಗೂ ಡೇನಿಯಲ್ ಸ್ಯಾಮ್ ಅಜೇ 8 ರನ್ ಸಿಡಿಸಿದರು . ಈ ಮೂಲಕ ಆಸೀಸ್ 5 ವಿಕೆಟ್ ಕಳೆದುಕೊಂಡು 194 ರನ್ ಸಿಡಿತು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜು: ಶಿಕ್ಷಕ ತಂದೆಗೆ ₹12 ಸಾವಿರ ವೇತನ, ಮಗ ಪ್ರಶಾಂತ್‌ಗೆ 14.2 ಕೋಟಿ ಸಂಬಳ!
3 ಗಂಟೆ ಕಾದರೂ ಕರಗದ ಮಂಜು, ಭಾರತ ಸೌತ್ ಆಫ್ರಿಕಾ 4ನೇ ಟಿ20 ಪಂದ್ಯ ರದ್ದು