* ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಅವ್ಯವಸ್ಥೆಯ ಬಗ್ಗೆ ಹಾರ್ದಿಕ್ ಪಾಂಡ್ಯ ಬೇಸರ
* ಮುಂಬರುವ ದಿನಗಳಲ್ಲಿ ವ್ಯವಸ್ಥೆ ಬದಲಾಗುವ ನಿರೀಕ್ಷೆ
* ಏಕದಿನ ಸರಣಿ ಗೆದ್ದು ಬೀಗಿದ ಟೀಂ ಇಂಡಿಯಾ
ಟ್ರಿನಿಡ್ಯಾಡ್(ಆ.02): ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಲ್ಲಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ವೆಸ್ಟ್ ಇಂಡೀಸ್ ಎದುರು ಏಕದಿನ ಕ್ರಿಕೆಟ್‌ನಲ್ಲಿ ಸತತ 13ನೇ ಬಾರಿಗೆ ಸರಣಿ ಜಯಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಕೆಲವು ದಿನಗಳ ಹಿಂದಷ್ಟೇ ಭಾರತ ಮಹಿಳಾ ಕ್ರಿಕೆಟ್ ತಂಡವು ಬಾಂಗ್ಲಾದೇಶ ಪ್ರವಾಸ ಕೈಗೊಂಡಿದ್ದಾಗ ಅಲ್ಲಿನ ಅವ್ಯವಸ್ಥೆಯ ಬಗ್ಗೆ ನಾಯಕಿ ಹರ್ಮನ್‌ಪ್ರೀತ್ ಕೌರ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಷ್ಟೇ ಅಲ್ಲದೇ ಮೈದಾನದಲ್ಲಿ ಬ್ಯಾಟಿಂದ, ವಿಕೆಟ್‌ಗಡೆ ಹೊಡೆದಿದ್ದಕ್ಕೆ ಎರಡು ಪಂದ್ಯಗಳ ನಿಷೇಧಕ್ಕೂ ಗುರಿಯಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಟೀಂ ಇಂಡಿಯಾ, ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ, ಇದೀಗ ವಿಂಡೀಸ್ ಕ್ರಿಕೆಟ್ ಮಂಡಳಿಯ ವಿರುದ್ದ ತಮ್ಮ ಅಸಾಮಾಧಾನ ಹೊರಹಾಕಿದ್ದಾರೆ.
ಭಾರತ ಕ್ರಿಕೆಟ್ ತಂಡವು ದೀರ್ಘಕಾಲಿಕ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದ್ದು, ಈಗಾಗಲೇ ಎರಡು ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಿದೆ. ಆಗಸ್ಟ್ 03ರಿಂದ 5 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಟಿ20 ಸರಣಿ ಆರಂಭಕ್ಕೂ ಮುನ್ನವೇ ಹಾರ್ದಿಕ್ ಪಾಂಡ್ಯ, ಸೂಕ್ತ ಮೂಲಭೂತ ಸೌಕರ್ಯ ಕಲ್ಪಿಸದ ವೆಸ್ಟ್ ಇಂಡೀಸ್ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.
undefined
ಏಕದಿನ ವಿಶ್ವಕಪ್‌ಗೆ ಭಾರತ ಸಂಭಾವ್ಯ ತಂಡವನ್ನು ಹೆಸರಿಸಿದ ವಾಸೀಂ ಜಾಫರ್..! ಯಾರಿಗೆಲ್ಲಾ ಸಿಕ್ಕಿದೆ ಸ್ಥಾನ?
ವೆಸ್ಟ್ ಇಂಡೀಸ್ ಎದುರಿನ ಕೊನೆಯ ಎರಡು ಏಕದಿನ ಪಂದ್ಯಗಳಿಗೆ ಭಾರತ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ, ತಂಡ ಏಕದಿನ ಸರಣಿ ಗೆಲ್ಲುತ್ತಿದ್ದಂತೆಯೇ, "ನಾವು ಆಡಿದ ಒಳ್ಳೆಯ ಸ್ಟೇಡಿಯಂಗಳಲ್ಲಿ ಇದೂ ಕೂಡಾ ಒಂದು ಎನಿಸಿದೆ. ಮುಂದಿನ ಸಲ ಬಂದಾಗ ಇಲ್ಲಿನ ಪರಿಸ್ಥಿತಿ ಸುಧಾರಿಸಬಹುದು ಎಂದು ಭಾವಿಸಿದ್ದೇನೆ. ಇಲ್ಲಿನ ಟ್ರಾವೆಲ್ ವ್ಯವಸ್ಥೆಯ ತೊಡಕುಗಳ ಬಗ್ಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಹೆಚ್ಚು ಗಮನ ಕೊಡಲಿದೆ ಎಂದು ಭಾವಿಸುತ್ತೇನೆ. ನಾವೇನೂ ಐಶಾರಾಮಿ ವ್ಯವಸ್ಥೆಗಳ ಬಗ್ಗೆ ಕೇಳುತ್ತಿಲ್ಲ, ಕನಿಷ್ಠ ಪಕ್ಷ ಮೂಲಭೂತ ಸೌಕರ್ಯಗಳನ್ನಾದರೂ ನೀಡಬೇಕಲ್ಲ?. ಎಂದು ಹಾರ್ದಿಕ್ ಪಾಂಡ್ಯ ದೂರಿದ್ದಾರೆ.
ಇನ್ನು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ನಿರ್ಣಾಯಕ ಪಂದ್ಯದ ಬಗ್ಗೆ ಹೇಳುವುದಾದರೇ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ, ಇಶಾನ್ ಕಿಶನ್, ಶುಭ್‌ಮನ್ ಗಿಲ್, ಸಂಜು ಸ್ಯಾಮ್ಸನ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಬಾರಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಭಾರತ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 351 ರನ್ ಬಾರಿಸಿತ್ತು.
ಟೀಂ ಇಂಡಿಯಾ ಆರ್ಭಟಕ್ಕೆ ಶರಣಾದ ವಿಂಡೀಸ್; 13ನೇ ಏಕದಿನ ಸರಣಿ ಗೆದ್ದ ಭಾರತ..!
ಇನ್ನು ಕಠಿಣ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ, ಮುಕೇಶ್ ಕುಮಾರ್ ಆರಂಭದಲ್ಲೇ ಶಾಕ್ ನೀಡಿದರು. ಮೊದಲ 3 ಓವರ್‌ನಲ್ಲೇ 7 ರನ್ ಗಳಿಸುವಷ್ಟರಲ್ಲಿ ವಿಂಡೀಸ್ ಆರಂಭಿಕರಿಬ್ಬರನ್ನು ಬಲಿ ಪಡೆಯುವಲ್ಲಿ ಮುಕೇಶ್ ಕುಮಾರ್ ಯಶಸ್ವಿಯಾದರು. ಇದಾದ ಬಳಿಕ ಒಂದು ತುದಿಯಲ್ಲಿ ಅಲಿಕ್ ಅಥಂಜೆ 50 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ 32 ರನ್ ಬಾರಿಸುವ ಮೂಲಕ ಕೊಂಚ ಪ್ರತಿರೋಧ ತೋರಿದರು. ಆದರೆ ಮತ್ತೊಂದು ತುದಿಯಲ್ಲಿ ಶಾಯ್ ಹೋಪ್(5), ಕೇಸಿ ಕಾರ್ಟಿ(6), ಶಿಮ್ರೊನ್ ಹೆಟ್ಮೇಯರ್(4) ಹಾಗೂ ರೊಮ್ಯಾರಿಯೋ ಶೆಫರ್ಡ್(8) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ವೆಸ್ಟ್ ಇಂಡೀಸ್ ತಂಡವು 88 ರನ್ ಗಳಿಸುವಷ್ಟರಲ್ಲಿ 8 ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿತ್ತು.
ಇನ್ನು ಕೊನೆಯಲ್ಲಿ ಯಾನಿಕ್ ಕಾರಿಯ್(19), ಅಲ್ಜಾರಿ ಜೋಸೆಫ್(26) ಹಾಗೂ ಗುದಕೇಶ್ ಮೋಟಿ ಅಜೇಯ 39 ರನ್ ಬಾರಿಸುವ ಮೂಲಕ ತಂಡ 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ವೆಸ್ಟ್ ಇಂಡೀಸ್ ಎದುರು ಮಾರಕ ದಾಳಿ ನಡೆಸಿದ ಶಾರ್ದೂಲ್ ಠಾಕೂರ್ 37 ರನ್ ನೀಡಿ 4 ವಿಕೆಟ್ ಪಡೆದರೆ, ಮುಕೇಶ್ ಕುಮಾರ್ 30 ರನ್‌ಗೆ 3, ಕುಲ್ದೀಪ್ ಯಾದವ್ 2 ಹಾಗೂ ಜಯದೇವ್ ಉನಾದ್ಕತ್ ಒಂದು ವಿಕೆಟ್ ಪಡೆದರು.