Ind vs Eng ರೋಹಿತ್ ಶರ್ಮಾಗಿಂದು ಮೊದಲ ವಿದೇಶಿ ಅಗ್ನಿಪರೀಕ್ಷೆ..!

Published : Jul 07, 2022, 03:18 PM IST
Ind vs Eng ರೋಹಿತ್ ಶರ್ಮಾಗಿಂದು ಮೊದಲ ವಿದೇಶಿ ಅಗ್ನಿಪರೀಕ್ಷೆ..!

ಸಾರಾಂಶ

* ಭಾರತ-ಇಂಗ್ಲೆಂಡ್ ನಡುವಿನ ಟಿ20 ಸರಣಿಗೆ ಕ್ಷಣಗಣನೆ * ಪೂರ್ಣಪ್ರಮಾಣದ ಟೀಂ ಇಂಡಿಯಾ ನಾಯಕರಾದ ಬಳಿಕ ರೋಹಿತ್‌ ಶರ್ಮಾಗೆ ಅಗ್ನಿಪರೀಕ್ಷೆ' * ಸ್ವದೇಶದಲ್ಲಿ ಗೆಲುವಿನ ನಾಗಾಲೋಟ ಮುಂದುವರೆಸಿದ್ದ ಹಿಟ್‌ಮ್ಯಾನ್ ಪಡೆಗೆ ರಿಯಲ್ ಟೆಸ್ಟ್ ಆರಂಭ

ಸೌಥಾಂಪ್ಟನ್​(ಜು): ಡಿಸೆಂಬರ್​​​​ 8, 2021 ರಂದು ರೋಹಿತ್ ಶರ್ಮಾ ಟೀಂ​ ಇಂಡಿಯಾದ (Team India) ಕ್ಯಾಪ್ಟನ್ ಆಗಿ ನೇಮಕಗೊಂಡಿದ್ರು. ಸದ್ಯ ಹಿಟ್​ಮ್ಯಾನ್​​  ತಂಡದ ಚುಕ್ಕಾಣಿ ಹಿಡಿದು 7 ತಿಂಗಳು ಕಳೆದಿದೆ. ಆದರೂ ಈವರೆಗೆ ರೋಹಿತ್ ಶರ್ಮಾ ವಿದೇಶಿ ನೆಲದಲ್ಲಿ ಒಮ್ಮೆಯೂ ತಂಡವನ್ನು ಮುನ್ನಡೆಸಿಲ್ಲ. ಬರೀ ತವರಿನಲ್ಲಷ್ಟೇ ತಂಡ ಮುನ್ನಡೆಸಿದ್ದಾರೆ. ಇಂತಹ ರೋಹಿತ್​​​ ಶರ್ಮಾಗೆ ಇದೀಗ ಮೊದಲ ವಿದೇಶಿ ಅಗ್ನಿಪರೀಕ್ಷೆ ಎದುರಾಗಿದೆ.

7 ತಿಂಗಳ ಬಳಿಕ ವಿದೇಶಿ ನೆಲದಲ್ಲಿ ಚುಕ್ಕಾಣಿ : 

ಇಂದಿನಿಂದ ಇಂಗ್ಲೆಂಡ್​ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದೆ. ಇದು ರೋಹಿತ್ ಶರ್ಮಾಗೆ (Rohit Sharma) ಹೊಸ ಟಾಸ್ಕ್. ಯಾಕಂದ್ರೆ ಟೀಂ​​ ಇಂಡಿಯಾ ಪೂರ್ಣಪ್ರಮಾಣದ ಕ್ಯಾಪ್ಟನ್ ಆದ 7 ತಿಂಗಳ ಬಳಿಕ ರೋಹಿತ್ ಶರ್ಮಾ ಫಾರಿನ್​ ನೆಲದಲ್ಲಿ ಮೊದಲ ಬಾರಿ ಭಾರತ ಕ್ರಿಕೆಟ್‌ ತಂಡ ಮುನ್ನಡೆಸ್ತಿದ್ದಾರೆ. ಅದು ಬಲಿಷ್ಠ ಇಂಗ್ಲೆಂಡ್​​​​​​ ತಂಡದ ವಿರುದ್ಧ. ಹೀಗಾಗಿ ರೋಹಿತ್​ ಶರ್ಮಾಗೆ ಮೊದಲ ವಿದೇಶಿ ಸರಣಿನೇ ದೊಡ್ಡ ಸವಾಲೆನಿಸಿದೆ.

ರೋಹಿತ್​​ಗೆ ಈಗಾಗ್ಲೇ ಕ್ಯಾಪ್ಟನ್ ಆಗಿ ತವರಿನಲ್ಲಿ ಯಶಸ್ಸು ಗಳಿಸಿದ್ದೂ, ಒಂದು ಪಂದ್ಯದಲ್ಲೂ ಭಾರತ ಸೋತಿಲ್ಲ. ಹಿಟ್‌ಮ್ಯಾನ್ ಈಗಾಗ್ಲೆ ಗೆಲುವಿನ ತೋರಣ ಕಟ್ಟಿದ್ದಾರೆ. ಈಗ ಈ ಮ್ಯಾಜಿಕ್​​​​, ಆಂಗ್ಲರ ನಾಡಲ್ಲೂ ರಿಪೀಟ್ ಆಗೋದು ಕಠಿಣ ವೆನಿಸಿದೆ. ಯಾಕಂದ್ರೆ ಇಂಡಿಯನ್​ ಕಂಡಿಷನ್​​​ ಬೇರೆ, ಇಂಗ್ಲೆಂಡ್ ಕಂಡೀಷನ್ ಬೇರೆ. ಇಲ್ಲಿ ಅನುಭವ ಹೊಂದಿದ್ರೆ ಸಾಲದು, ಸಾಂಘಿಕ ಪ್ರದರ್ಶನ ಮೂಡಿ ಬರಬೇಕಿದೆ. ಆದ್ರೆ ತಂಡ ಆ ಕೊರತೆ ಎದುರಿಸ್ತಿದೆ.

Ind vs Eng ಇಂದಿನಿಂದ ಟೀಂ ಇಂಡಿಯಾಗೆ ಇಂಗ್ಲೆಂಡ್ ಟಿ20 ಚಾಲೆಂಜ್..!

ಸ್ವತಃ ಕ್ಯಾಪ್ಟನ್ ರೋಹಿತ್ ಶರ್ಮಾ ಬ್ಯಾಡ್​​ ಫಾರ್ಮ್​ ಸುಳಿಗೆ ಸಿಲುಕಿದ್ದಾರೆ. ಇವರ ಬ್ಯಾಟ್​​ನಿಂದ ಬಿಗ್ ಇನ್ನಿಂಗ್ಸ್ ಮೂಡಿ ಬರ್ತಿಲ್ಲ. ಇನ್ನು ತಂಡದ ಮಿಡಲ್ ಆರ್ಡರ್​​​​​​​ ಬ್ಯಾಟರ್ಸ್​ ಕೂಡ ಸ್ಥಿರ ಪ್ರದರ್ಶನ ನೀಡ್ತಿಲ್ಲ. ಇದರ ಜೊತೆ ಯಂಗ್​​ ಪ್ಲೇಯರ್ಸ್​ ತಂಡದಲ್ಲಿದ್ದು ನೈತಿಕ ಸ್ಥೈರ್ಯ ತುಂಬುವ ಕೆಲಸವನ್ನ ಕ್ಯಾಪ್ಟನ್ ರೋಹಿತ್ ಶರ್ಮಾ​ ಮಾಡಬೇಕಿದೆ. ಫೈನಲಿ ಸ್ವದೇಶಿ ಯಶಸ್ವಿ ಕ್ಯಾಪ್ಟನ್, ಫಾರಿನ್​​​​ನಲ್ಲಿ ಸಕ್ಸಸ್​ ಕಾಣ್ತಾರಾ ? ಇಲ್ಲ ಹಿಟ್​ಮ್ಯಾನ್​ ಕ್ಯಾಪ್ಟನ್ಸಿ ಸೂಪರ್ ಶೋ ಬರೀ ಭಾರತಕ್ಕಷ್ಟೇ ಸೀಮಿತವಾಗುತ್ತಾ ಅನ್ನೋದನ್ನು ಕಾದು ನೋಡಬೇಕು.

ಭಾರತ-ಇಂಗ್ಲೆಂಡ್ ನಡುವಿನ ಸೀಮಿತ ಓವರ್‌ಗಳ ಸರಣಿಯ ವೇಳಾಪಟ್ಟಿ

ಜುಲೈ 07 - ಮೊದಲ ಟಿ20- ಸೌಥಾಂಪ್ಟನ್- ರಾತ್ರಿ 10.30
ಜುಲೈ 09 - ಎರಡನೇ ಟಿ20- ಬರ್ಮಿಂಗ್‌ಹ್ಯಾಮ್- ಸಂಜೆ 7.00
ಜುಲೈ 10 - ಮೂರನೇ ಟಿ20 - ನಾಟಿಂಗ್‌ಹ್ಯಾಮ್‌- ಸಂಜೆ 7.00  

ಜುಲೈ 12 - ಮೊದಲ ಏಕದಿನ - ಲಂಡನ್ - ಸಂಜೆ 5.30
ಜುಲೈ 14 - ಎರಡನೇ ಏಕದಿನ - ಲಂಡನ್ - ಸಂಜೆ 5.30
ಜುಲೈ 17 - ಮೂರನೇ ಏಕದಿನ - ಮ್ಯಾಂಚೆಸ್ಟರ್ - ಮಧ್ಯಾಹ್ನ 3.30

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಜಯ್‌ ಹಜಾರೆ ಟ್ರೋಫಿ: ಒಂದೂವರೆ ದಶಕದ ಬಳಿಕ ಡೆಲ್ಲಿ ಪರ ವಿರಾಟ್ ಕೊಹ್ಲಿ ಮೈದಾನಕ್ಕೆ! ಬೆಂಗಳೂರಲ್ಲಿ ನಡೆಯುತ್ತೆ ಮ್ಯಾಚ್‌
ಬೆಂಗಳೂರಲ್ಲಿ ಐಪಿಎಲ್‌ ನಡೆಸಲು ಸಂಪುಟ ಅಸ್ತು