INDvAUS: ಧೋನಿಗೂ ಆಗದ ಸಾಧನೆ ಮಾಡಿದ ಕೊಹ್ಲಿ!

By Suvarna NewsFirst Published Jan 17, 2020, 11:15 PM IST
Highlights

ರಾಜ್‌ಕೋಟ್ ಕ್ರೀಡಾಂಗಣದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದೆ. ಈ ಗೆಲುವಿನ ಮೂಲಕ ನಾಯಕ ವಿರಾಟ್ ಕೊಹ್ಲಿ, ಎಂ.ಎಸ್.ಧೋನಿಗೂ ಸಾಧ್ಯವಾಗದ ಸಾಧನೆ ಮಾಡಿದ್ದಾರೆ.

ರಾಜ್‌ಕೋಟ್(ಜ.17): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಕುತೂಹಲ ಘಟ್ಟ ತಲುಪಿದೆ. ಕಾರಣ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದ್ದರೆ, 2ನೇ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸೋ ಮೂಲಕ ಕಮ್‌ಬ್ಯಾಕ್ ಮಾಡಿತು. ಇದರೊಂದಿಗೆ ನಾಯಕ ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದರು.

ಇದನ್ನೂ ಓದಿ: ಆಸ್ಟ್ರೇಲಿಯಾ ಮಣಿಸಿ ತಿರುಗೇಟು ನೀಡಿದ ಭಾರತ; ಸರಣಿ ಸಮಬಲ!

ರಾಜ್‌ಕೋಟ್‌ನಲ್ಲಿ ನಡೆದ 2ನೇ ಪಂದ್ಯದಲ್ಲಿ ಭಾರತ ಆಲ್ರೌಂಡರ್ ಪ್ರದರ್ಶನ ನೀಡಿತು.  ರೋಹಿತ್ ಶರ್ಮಾ 42, ಶಿಖರ್ ಧವನ್ 96, ನಾಯಕ ವಿರಾಟ್ ಕೊಹ್ಲಿ 78, ಕೆಎಲ್ ರಾಹುಲ್ 80 ಹಾಗೂ ರವೀಂದ್ರ ಜಡೇಜಾ ಅಜೇಯ 20 ರನ್ ಸಿಡಿಸೋ ಮೂಲಕ ಭಾರತ 6 ವಿಕೆಟ್ ನಷ್ಟಕ್ಕೆ 340 ರನ್ ಸಿಡಿಸಿತು. ಆಸ್ಟ್ರೇಲಿಯಾಗೆ 341 ರನ್ ಟಾರ್ಗೆಟ್ ನೀಡಿತು.

ಬೃಹತ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 304 ರನ್‌ಗೆ ಆಲೌಟ್ ಆಗೋ ಮೂಲಕ ಭಾರತ 36 ರನ್ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ ರಾಜ್‌ಕೋಟ್‌ನಲ್ಲಿ ಮೊದಲ ಏಕದಿನ ಗೆಲುವು ಸಾಧಿಸಿತು. 2013ರಲ್ಲಿ ಧೋನಿ ನಾಯಕತ್ವದಲ್ಲಿ ರಾಜ್‌ಕೋಟ್ ಮೈದಾನದಲ್ಲಿ ಮೊದಲ ಅಂತರಾಷ್ಟ್ರೀಯ ಏಕದಿನ ಪಂದ್ಯ ಆಡಲಾಗಿತ್ತು.  ಧೋನಿ ನಾಯಕತ್ವದಲ್ಲಿ 2 ಏಕದಿನ ಪಂದ್ಯದಲ್ಲೂ ಭಾರತ ಸೋಲು ಕಂಡಿದೆ. ಇದೀಗ ಏಕದಿನದಲ್ಲಿ ರಾಜ್‌ಕೋಟ್‌ನಲ್ಲಿ ಮೊದಲ ಗೆಲುವಿನ ಸಿಹಿ ಕಂಡ ನಾಯಕ ವಿರಾಟ್ ಕೊಹ್ಲಿ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

ರಾಜ್‌ಕೋಟ್ ಏಕದಿನ ಪಂದ್ಯ
ಭಾರತ vs ಇಂಗ್ಲೆಂಡ್, 2013, ಭಾರತಕ್ಕೆ 9 ರನ್ ಸೋಲು
ಭಾರತ vs ಸೌತ್ ಆಫ್ರಿಕಾ, 2015, ಭಾರತಕ್ಕೆ 18 ರನ್ ಸೋಲು
ಭಾರತ vs ಆಸ್ಟ್ರೇಲಿಯಾ, 2020, ಭಾರತಕ್ಕೆ 36 ರನ್ ಗೆಲುವು
 

click me!