ಗುಡ್‌ ನ್ಯೂಸ್‌: ಟೀಂ ಇಂಡಿಯಾದ ಯಾರಿಗೂ ಕೊರೋನಾ ಸೋಂಕು ಇಲ್ಲ

By Kannadaprabha News  |  First Published Jan 5, 2021, 8:09 AM IST

ಮೂರನೇ ಟೆಸ್ಟ್‌ ಪಂದ್ಯ ಆರಂಭಕ್ಕೂ ಮುನ್ನ ಉಂಟಾಗಿದ್ದ ಗೊಂದಲಕ್ಕೆ ತೆರೆ ಬಿದ್ದಿದ್ದು, ಟೀಂ ಇಂಡಿಯಾದ ಯಾವ ಆಟಗಾರರಿಗೂ ಕೊರೋನಾ ಸೋಂಕಿಲ್ಲದಿರುವುದು ದೃಢಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಮೆಲ್ಬರ್ನ್(ಜ.05)‌: ಭಾರತ ಕ್ರಿಕೆಟ್‌ ತಂಡದ ಎಲ್ಲ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯ ಕೋವಿಡ್‌ ಪರೀಕ್ಷಾ ವರದಿ ನೆಗೆಟಿವ್‌ ಬಂದಿದ್ದು, ಯಾರಿಗೂ ಸೋಂಕು ಅಂಟಿಲ್ಲ ಎನ್ನುವುದು ದೃಢಪಟ್ಟಿದೆ. ಭಾನುವಾರ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಯನ್ನು ಆರ್‌ಟಿ-ಪಿಸಿಆರ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿ ಬಂದ ಬಳಿಕ, ಸೋಮವಾರ ತಂಡ ಮೆಲ್ಬರ್ನ್‌ನಿಂದ ಸಿಡ್ನಿಗೆ ಪ್ರಯಾಣಿಸಿತು.

ಇತ್ತೀಚೆಗಷ್ಟೇ ನವಲ್‌ದೀಪ್‌ ಸಿಂಗ್‌ ಎನ್ನುವ ಅಭಿಮಾನಿಯೊಬ್ಬ ಟ್ವೀಟರ್‌ನಲ್ಲಿ ಹಾಕಿದ ವಿಡಿಯೋದಿಂದಾಗಿ ಭಾರತದ ಐವರು ಆಟಗಾರರು ಕೋವಿಡ್‌ ನಿಯಮ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ, ಆಟಗಾರರನ್ನು ಕ್ರಿಕೆಟ್‌ ಆಸ್ಪ್ರೇಲಿಯಾ ಐಸೋಲೇಷನ್‌ನಲ್ಲಿ ಇರಿಸಿತ್ತು. ಇದೀಗ ಕೋವಿಡ್‌ ಪರೀಕ್ಷಾ ವರದಿ ನೆಗೆಟಿವ್‌ ಬಂದಿರುವ ಹಿನ್ನೆಲೆಯಲ್ಲಿ ರೋಹಿತ್‌ ಶರ್ಮಾ, ರಿಷಭ್‌ ಪಂತ್‌, ಶುಭ್‌ಮನ್‌ ಗಿಲ್‌, ನವ್‌ದೀಪ್‌ ಸೈನಿ ಹಾಗೂ ಪೃಥ್ವಿ ಶಾ ನಿರಾಳರಾಗಿದ್ದಾರೆ. ಈ ಐವರ ಪೈಕಿ ರೋಹಿತ್‌, ಗಿಲ್‌ ಹಾಗೂ ಪಂತ್‌ 3ನೇ ಟೆಸ್ಟ್‌ನಲ್ಲಿ ಆಡುವುದು ಖಚಿತ. ವೇಗಿ ಸೈನಿಗೂ ಅವಕಾಶ ಸಿಗುವ ನಿರೀಕ್ಷೆ ಇದೆ. ಪೃಥ್ವಿ ಶಾ ಮಾತ್ರ ಮತ್ತೊಮ್ಮೆ ಹೊರಗುಳಿಯಲಿದ್ದಾರೆ.

Latest Videos

undefined

ಇಂಡೋ-ಆಸೀಸ್‌ ಎರಡೂ ಟೆಸ್ಟ್‌ ಸಿಡ್ನಿಯಲ್ಲೇ..?

ಕೋವಿಡ್‌ ನಿಯಮ ಉಲ್ಲಂಘನೆ ಸಂಬಂಧ ಕ್ರಿಕೆಟ್‌ ಆಸ್ಪ್ರೇಲಿಯಾ ಹಾಗೂ ಬಿಸಿಸಿಐ ಜಂಟಿ ತನಿಖೆ ನಡೆಸುವುದಾಗಿ ಪ್ರಕಟಿಸಿದ್ದವು. ಆದರೆ 3 ದಿನಗಳು ಕಳೆದರೂ ತನಿಖೆ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
 

click me!