ಐಪಿಎಲ್‌ಗಿಲ್ಲ ಅವಕಾಶ: ವೇಗಿ ಶ್ರೀಶಾಂತ್‌ ಬೇಸರ

Published : Feb 13, 2021, 03:38 PM IST
ಐಪಿಎಲ್‌ಗಿಲ್ಲ ಅವಕಾಶ: ವೇಗಿ ಶ್ರೀಶಾಂತ್‌ ಬೇಸರ

ಸಾರಾಂಶ

ಕೇರಳ ವೇಗಿ ಶ್ರೀಶಾಂತ್ ಐಪಿಎಲ್ ಹರಾಜಿನಲ್ಲಿ ಸ್ಥಾನ ಪಡೆಯಲು ವಿಫಲವಾದ ಬೆನ್ನಲ್ಲೇ ಬೇಸರ ಹೊರಹಾಕಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಮುಂಬೈ(ಫೆ.13): ಬಹುನಿರೀಕ್ಷಿತ ಫೆಬ್ರವರಿ 18ರಂದು ಚೆನ್ನೈನಲ್ಲಿ ನಡೆಯಲಿರುವ 2021ರ ಐಪಿಎಲ್‌ ಆಟಗಾರರ ಹರಾಜಿನಲ್ಲಿ ಪಾಲ್ಗೊಳ್ಳಲು ಭಾರತದ ಮಾಜಿ ವೇಗಿ ಶ್ರೀಶಾಂತ್‌ಗೆ ಬಿಸಿಸಿಐ ಅವಕಾಶ ನಿರಾಕರಿಸಿದೆ. 

ಈ ವಿಚಾರವಾಗಿ ಎಸ್‌. ಶ್ರೀಶಾಂತ್‌ ಬೇಸರ ವ್ಯಕ್ತಪಡಿಸಿದ್ದು, ಅವಕಾಶಕ್ಕಾಗಿ ಕಾಯುವುದಾಗಿ 38 ವರ್ಷದ ವೇಗಿ ಹೇಳಿಕೊಂಡಿದ್ದಾರೆ. ಐಪಿಎಲ್‌ ಹರಾಜಿನ ಶಾರ್ಟ್‌ಲಿಸ್ಟ್‌ನಲ್ಲಿ ಸ್ಥಾನ ಪಡೆಯದೇ ಇರುವುದಕ್ಕೆ ನನಗೆ ಬೇಸರವಾಗುತ್ತಿದೆ. ಹಾಗಂತ ನಾನು ಇಷ್ಟಕ್ಕೆ ಹೋರಾಟ ನಿಲ್ಲಿಸುವುದಿಲ್ಲ. ಕ್ರಿಕೆಟ್‌ ಆಡಲು 8 ವರ್ಷ ಕಾಯುತ್ತೇನೆ ಎಂದಾದರೆ, ಇನ್ನು ಕೆಲಕಾಲ ಕಾಯುತ್ತೇನೆ, ಕೈಚೆಲ್ಲಿ ಕೂರುವುದಿಲ್ಲ ಎಂದು ಶ್ರೀಶಾಂತ್‌ ಹೇಳಿದ್ದಾರೆ.

ಐಪಿಎಲ್ ಹರಾಜು 2021: ಏನು? ಎತ್ತ? ಯಾವಾಗ..? ಕಂಪ್ಲೀಟ್‌ ಡೀಟೈಲ್ಸ್‌

ಕಳೆದ ತಿಂಗಳು ನಡೆದಿದ್ದ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಕೇರಳ ತಂಡದ ಪರ ಕಣಕ್ಕಿಳಿದು 7 ವರ್ಷಗಳ ಬಳಿಕ ಕ್ರಿಕೆಟ್‌ಗೆ ವಾಪಸಾಗಿದ್ದ ಶ್ರೀಶಾಂತ್‌ 75 ಲಕ್ಷ ಮೂಲಬೆಲೆಯೊಂದಿಗೆ ಹರಾಜಿಗೆ ನೋಂದಣಿ ಮಾಡಿಕೊಂಡಿದ್ದರು. ಕೆಲ ತಂಡಗಳು ಅವರನ್ನು ಖರೀದಿಸಲು ಆಸಕ್ತಿ ತೋರಿದ್ದವು ಎನ್ನಲಾಗಿತ್ತು. ಆದರೆ ಗುರುವಾರ ಅಂತಿಮ 292 ಆಟಗಾರರ ಪಟ್ಟಿ ಪ್ರಕಟಿಸಿದ ಬಿಸಿಸಿಐ, ಶ್ರೀಶಾಂತ್‌ ಹೆಸರನ್ನು ಪಟ್ಟಿಯಲ್ಲಿ ಸೇರಿಸಿಲ್ಲ. ಇದರೊಂದಿಗೆ ಐಪಿಎಲ್‌ಗೆ ವಾಪಸಾಗುವ ಕೇರಳ ವೇಗಿಯ ಕನಸು ಭಗ್ನಗೊಂಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾತ್ಮನಿಗೆ ಐಸಿಸಿ ವಿಶೇಷ ಗೌರವ.. 2027ರ ಏಕದಿನ ವಿಶ್ವಕಪ್‌ಗೆ ದಿನಾಂಕ ನಿಗದಿ..!
IND vs SL 1st Test Day 2 Highlights : ಮಳೆಯ ನಡುವೆಯೂ ಟೀಂ ಇಂಡಿಯಾ ಭರ್ಜರಿ ಪ್ರದರ್ಶನ.. ಪಡಿಕ್ಕಲ್ ಇತಿಹಾಸ