ಆಸ್ಪತ್ರೆ ದಾಖಲಾಗಿದ್ದ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್‌ ತಂದೆ ನಿಧನ!

By Suvarna News  |  First Published Nov 20, 2020, 8:16 PM IST

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾರೆ. ಕ್ವಾರಂಟೈನ್‌ಗೆ ಒಳಗಾಗಿರುವ ಸಿರಾಜ್‌ಗೆ ಬಹುದೊಡ್ಡ ಆಘಾತ ಎದುರಾಗಿದೆ. ಆಸ್ಪತ್ರೆ ದಾಖಲಾಗಿದ್ದ ಸಿರಾಜ್ ತಂದೆ ನಿಧನರಾಗಿದ್ದಾರೆ.
 


ಹೈದರಾಬಾದ್(ನ.20):  ಸತತ ಪರಿಶ್ರಮ, ಕಡು ಬಡತನದ ನಡುವೆ ಬೆಳೆದ ಅದ್ಬುತ ಪ್ರತಿಭೆ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್. ಆಟೋ ಡ್ರೈವರ್ ಆಗಿರುವ ಸಿರಾಜ್ ತಂದೆ ಒಂದೊಂದು ರೂಪಾಯಿ ಕೂಡಿಟ್ಟು ಮಗನ ಕನಸಿಗೆ ನೀರೆರೆದಿದ್ದರು. ಟೀಂ ಇಂಡಿಯಾ ಕ್ರಿಕೆಟಿಗನಾಗಿ ಮಿಂಚುತ್ತಿರುವ ಸಿರಾಜ್‌ಗೆ ಬಹುದೊಡ್ಡ ಶಕ್ತಿ ಎಂದರೆ ತನ್ನ ತಂದೆ. ಆದರೆ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಸಿರಾಜ್ ತಂದೆ ಮೊಹಮ್ಮದ್ ಗೌಸೆ ನಿಧನರಾಗಿದ್ದಾರೆ.

ಧೋನಿ ಹೇಳಿದ ಮುತ್ತಿನಂಥ ಮಾತೊಂದನ್ನು ನೆನಪಿಸಿಕೊಂಡ ಮೊಹಮ್ಮದ್ ಸಿರಾಜ್..!

Latest Videos

undefined

53 ವರ್ಷದ ಸಿರಾಜ್ ತಂದೆ ಕಳೆದ ಹಲವು ದಿನಗಳಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆದು ಚೇತರಿಕೆ ಕಂಡಿದ್ದರು. ಆದರೆ ಮತ್ತೆ ಸಮಸ್ಯೆ ಉಲ್ಬಣಿಸಿದ ಕಾರಣ ಆಸ್ಪತ್ರೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಿರಾಜ್ ತಂದೆ ನಿಧನರಾಗಿದ್ದಾರೆ.

ಕೊಳಗೇರಿ ಹುಡುಗನ ಬೌಲಿಂಗ್‌ಗೆ ಕೆಕೆಆರ್‌ ತತ್ತರ!.

ತಂದೆ ನಿಧರಾಗಿದರೂ ಸದ್ಯ ಅಂತಿಮ ದರ್ಶನಕ್ಕೆ ಪುತ್ರ ಮೊಹಮ್ಮದ್ ಸಿರಾಜ್ ಬರಲು ಸಾಧ್ಯವಿಲ್ಲ. ಸದ್ಯ ಸಿಡ್ನಿಯಲ್ಲಿ ಕ್ವಾರಂಟೈನ್‌ನಲ್ಲಿರುವ ಸಿರಾಜ್ ಭಾರತಕ್ಕೆ ಬರುವುದು ಅಸಾಧ್ಯವಾಗಿದೆ.  ಕೊರೋನಾ ಕಾರಣ ಏಕದಿನ, ಟೆಸ್ಟ್ ಹಾಗೂ ಟಿ20 ತಂಡದ ಎಲ್ಲಾ ಕ್ರಿಕೆಟಿಗರು ಜೊತೆಯಾಗಿ ಆಸೀಸ್ ಪ್ರವಾಸ ಮಾಡಿದ್ದಾರೆ. ಇಷ್ಟೇ ಅಲ್ಲ ನಿಯಮ ಹಾಗೂ ಸುರಕ್ಷತೆ ಕಾರಣದಿಂದ ಕ್ವಾರಂಟೈನ್ ಹಾಗೂ ಬಯೋಬಬಲ್ ಕಡ್ಡಾಯವಾಗಿದೆ. 

ಆಟೋ ಚಾಲಕನ ಮಗ ಇಂದು ಐಪಿಎಲ್'ನಲ್ಲಿ ಕೋಟ್ಯಾಧಿಪತಿ.

ಟೀಂ ಇಂಡಿಯಾದಲ್ಲಿ ಆಡುವುದನ್ನು ನನ್ನ ತಂದೆ ಎದರುನೋಡುತ್ತಿದ್ದರು. ದೇಶದ ಹೆಸರನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರಬೇಕು ಎಂದು ತಂದೆ ಪದೆ ಪದೇ ಹೇಳುತ್ತಿದ್ದರು. ನನ್ನ ಆರಂಭಿಕ ದಿನದಲ್ಲಿ ತಂದೆ ಆಟೋ ರಿಕ್ಷಾ ಓಡಿಸಿ ನನ್ನ ಕ್ರಿಕಟ್ ಕನಸು ಸಾಕಾರ ಮಾಡಿದ್ದಾರೆ. ತಂದೆ ನನ್ನ ಶಕ್ತಿಯಾಗಿದ್ದಾರೆ ಎಂದು ಸಿರಾಜ್ ಮಾಧ್ಯಮಕ್ಕೆ ಅಳುತ್ತಾ ಪ್ರತಿಕ್ರಿಯೆ ನೀಡಿದ್ದಾರೆ.

click me!