ಸಾಕ್ಷಿ ಹುಟ್ಟುಹಬ್ಬಕ್ಕೆ ದುಬೈನಲ್ಲಿ ಒಟ್ಟಾದ ಧೋನಿ-ಮಲಿಕ್, ಸಾನಿಯಾ ಮಿರ್ಜಾ

Published : Nov 20, 2020, 07:05 PM IST
ಸಾಕ್ಷಿ ಹುಟ್ಟುಹಬ್ಬಕ್ಕೆ ದುಬೈನಲ್ಲಿ ಒಟ್ಟಾದ ಧೋನಿ-ಮಲಿಕ್, ಸಾನಿಯಾ ಮಿರ್ಜಾ

ಸಾರಾಂಶ

ಸಾಕ್ಷಿ ಧೋನಿ ಹುಟ್ಟುಹಬ್ಬದ ಸಂಭ್ರಮಾಚರಣೆಗೆ ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಶೊಯೆಬ್ ಮಲಿಕ್, ಸಾನಿಯಾ ಮಿರ್ಜಾ ಹಾಗೂ ಮತ್ತವರ ತಂಗಿ ಸಾಕ್ಷಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದುಬೈ(ನ.20): ಕಳೆದ ಮೂರು ತಿಂಗಳುಗಳಿಂದ ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಇದೀಗ ಕುಟುಂಬದೊಂದಿಗೆ ದುಬೈನಲ್ಲಿ ರಜೆಯ ಖುಷಿಯನ್ನು ಅನುಭವಿಸುತ್ತಿದ್ದಾರೆ. ಕಳೆದ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕವಂತೂ ಇನ್ನಷ್ಟು ಸಮಯವನ್ನು ಪತ್ನಿ ಸಾಕ್ಷಿ ಹಾಗೂ ಮಗಳು ಝಿವಾಳೊಟ್ಟಿಗೆ ಕಳೆಯುತ್ತಿದ್ದಾರೆ.

ಇದರ ನಡುವೆ ನವೆಂಬರ್‌ 19ರಂದು ಸಾಕ್ಷಿ ಹುಟ್ಟುಹಬ್ಬವನ್ನು ಧೋನಿ ದುಬೈನಲ್ಲಿಯೇ ಆಚರಿಸಿದ್ದಾರೆ. ಈ ಖುಷಿಯ ಸಂದರ್ಭಕ್ಕೆ ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಶೊಯೆಬ್ ಮಲಿಕ್, ಪತ್ನಿ ಸಾನಿಯಾ ಮಿರ್ಜಾ ಹಾಗೂ ಸಾನಿಯಾ ತಂಗಿ ಸಾಥ್ ನೀಡಿದ್ದಾರೆ. ಹೌದು, ಮೈದಾನದಲ್ಲಿ ಭಾರತ-ಪಾಕಿಸ್ತಾನದ ಕ್ರಿಕೆಟಿಗರು ಬದ್ಧ ಎದುರಾಳಿಗಳಂತೆ ಕಾದಾಡುತ್ತಾರೆ, ಆದರೆ ಮೈದಾನದಾಚೆಗೆ ಉಭಯ ಆಟಗಾರರು ಉತ್ತಮ ಸಂಬಂಧ ಹೊಂದಿದ್ದಾರೆ. ಅಂದಹಾಗೆ ಧೋನಿ ಹಾಗೂ ಮಲಿಕ್ ಉತ್ತಮ ಸ್ನೇಹಿತರು ಕೂಡಾ ಹೌದು.

ಆಸೀಸ್ ಎದುರಿನ ಸೀಮಿತ ಓವರ್‌ ಸರಣಿಯಲ್ಲಿ ಈ ಐವರು ರೋಹಿತ್ ಶರ್ಮಾ ಸ್ಥಾನ ತುಂಬಬಹುದು..!

ಸಾನಿಯಾ ಮಿರ್ಜಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರ್ತ್‌ಡೇ ಗರ್ಲ್ ಸಾಕ್ಷಿ, ಧೋನಿ ಹಾಗೂ ತಮ್ಮ ಕುಟುಂಬ ಒಟ್ಟಿಗೆ ಇರುವ ಫೋಟೋವನ್ನು ಶೇರ್‌ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಧೋನಿ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಮುಂಬರುವ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನು ಶೊಯೆಬ್ ಮಲಿಕ್ ಈಗಾಗಲೇ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಪಾಕಿಸ್ತಾನ ಪರ ಟಿ20 ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಸದ್ಯ ನ್ಯೂಜಿಲೆಂಡ್ ಪ್ರವಾಸದಿಂದ ಹಿಂದೆ ಸರಿದಿರುವ ಮಲಿಕ್ ಪತ್ನಿ ಸಾನಿಯಾ ಜತೆ ಬಿಡುವಿನ ಸಮಯವನ್ನು ಎಂಜಾಯ್ ಮಾಡುತ್ತಿದ್ದಾರೆ.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಾಕಿಸ್ತಾನ ಕೇವಲ 55 ರನ್‌ಗೆ ಆಲೌಟ್, 7 ವಿಕೆಟ್ ಗೆಲುವು ದಾಖಲಿಸಿ ದಾಖಲೆ ಬರೆದ ಭಾರತ ಮಹಿಳಾ ತಂಡ
ಆರ್‌ಸಿಬಿ ಫ್ಯಾನ್ಸ್‌ಗೆ ಬಿಗ್‌ ಅಪ್ಡೇಟ್‌; ಹೊಸತನ ಬಂದರೂ, ಹಳೆಯ ಗುರುತು ಬಿಟ್ಟುಕೊಡದ ಬಿರ್ಲಾ!