ಅನಿಲ್‌ ಕುಂಬ್ಳೆ ಬೌಲಿಂಗ್‌ ಶೈಲಿ ಅನುಕರಿಸಿದ ಬುಮ್ರಾ..! ವೆಲ್‌ ಡನ್‌ ಎಂದ ಜಂಬೋ

Published : Jan 31, 2021, 04:08 PM IST
ಅನಿಲ್‌ ಕುಂಬ್ಳೆ ಬೌಲಿಂಗ್‌ ಶೈಲಿ ಅನುಕರಿಸಿದ ಬುಮ್ರಾ..! ವೆಲ್‌ ಡನ್‌ ಎಂದ ಜಂಬೋ

ಸಾರಾಂಶ

ವೇಗಿ ಜಸ್ಪ್ರೀತ್‌ ಬುಮ್ರಾ ನೆಟ್ಸ್‌ ಪ್ರಾಕ್ಟೀಸ್‌ ವೇಳೆ ಸ್ಪಿನ್ನರ್ ಅನಿಲ್ ಕುಂಬ್ಳೆ ಬೌಲಿಂಗ್‌ ಶೈಲಿಯನ್ನು ಅನುಕರಿಸಿದ್ದದಾರೆ. ಈ ಬಗ್ಗೆ ಜಂಬೋ ಖ್ಯಾತಿಯ ಕುಂಬ್ಳೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.  

ಬೆಂಗಳೂರು(ಜ.31): ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ವಿಚಿತ್ರ ಬೌಲಿಂಗ್ ಶೈಲಿಯ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳ ಎದೆಯಲ್ಲಿ ನಡುಕು ಹುಟ್ಟಿಸುತ್ತಿದ್ದಾರೆ. ಆದರೆ ಇದೀಗ ಬುಮ್ರಾ ಟೀಂ ಇಂಡಿಯಾ ದಿಗ್ಗಜ ಸ್ಪಿನ್ನರ್ ಅನಿಲ್‌ ಕುಂಬ್ಳೆ ಬೌಲಿಂಗ್ ಶೈಲಿ ಅನುಕರಿಸುವ ಮೂಲಕ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ದ ತವರಿನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ, ನೆಟ್ಸ್‌ನಲ್ಲಿ ಅನಿಲ್‌ ಕುಂಬ್ಳೆ ಬೌಲಿಂಗ್ ಶೈಲಿ ಅನುಸರಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ಟ್ವೀಟ್‌ ಮಾಡಿದ್ದು, ಬುಮ್ರಾ ಈ ಶೈಲಿ ಕುಂಬ್ಳೆ ಬೌಲಿಂಗ್‌ ರೀತಿಯಲ್ಲಿಯೇ ಇದೆ ಎಂದು ಟ್ವೀಟ್ ಮಾಡಿತ್ತು.

ಈ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ಜಂಬೋ ಖ್ಯಾತಿಯ ಹೆಮ್ಮೆಯ ಕನ್ನಡಿಗ ವೆಲ್‌ ಡನ್‌ ಬೂಮ್‌, ಬೌಲಿಂಗ್‌ ಶೈಲಿ ಅದೇ ರೀತಿಯಿದೆ. ಮುಂದಿನ ತಲೆಮಾರಿನ ಯುವ ವೇಗದ ಬೌಲರ್‌ಗಳಿಗೆ ನೀವೇ ಸ್ಪೂರ್ತಿಯಾಗಿದ್ದು, ನಿಮ್ಮ ಬೌಲಿಂಗ್ ಶೈಲಿಯನ್ನು ಅನುಕರಿಸುತ್ತಿದ್ದಾರೆ. ಮುಂಬರುವ ಸರಣಿಗೆ ಶುಭಾಶಯಗಳು ಎಂದು ಕುಂಬ್ಳೆ ಹೇಳಿದ್ದಾರೆ.

IPL 2020: 6 ಬೌಲರ್‌ಗಳ ಆ್ಯಕ್ಷನ್ ಅನುಕರಣೆ ಮಾಡಿದ ಜಸ್ಪ್ರೀತ್ ಬುಮ್ರಾ..! ವಿಡಿಯೋ ವೈರಲ್

ದಿಗ್ಗಜ ಕ್ರಿಕೆಟಿಗ ಅನಿಲ್ ಕುಂಬ್ಳೆ  ಟೆಸ್ಟ್ ಕ್ರಿಕೆಟ್‌ನಲ್ಲಿ 619 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 337 ವಿಕೆಟ್ ಕಬಳಿಸಿದ್ದಾರೆ. ಕ್ರಿಕೆಟ್‌ಗೆ ವಿದಾಯ ಹೇಳಿ ದಶಕವೇ ಕಳೆದರೂ ಭಾರತ ಪರ ಗರಿಷ್ಠ ವಿಕೆಟ್‌ ಕಬಳಿಸಿದ ದಾಖಲೆ ಅನಿಲ್ ಕುಂಬ್ಳೆ ಹೆಸರಿನಲ್ಲಿದೆ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಾಕಿಸ್ತಾನ ಕೇವಲ 55 ರನ್‌ಗೆ ಆಲೌಟ್, 7 ವಿಕೆಟ್ ಗೆಲುವು ದಾಖಲಿಸಿ ದಾಖಲೆ ಬರೆದ ಭಾರತ ಮಹಿಳಾ ತಂಡ
ಆರ್‌ಸಿಬಿ ಫ್ಯಾನ್ಸ್‌ಗೆ ಬಿಗ್‌ ಅಪ್ಡೇಟ್‌; ಹೊಸತನ ಬಂದರೂ, ಹಳೆಯ ಗುರುತು ಬಿಟ್ಟುಕೊಡದ ಬಿರ್ಲಾ!