ಕಳೆದ ಸೆಪ್ಟೆಂಬರ್‌ನಿಂದಲೂ ಕ್ರಿಕೆಟ್‌ನಿಂದ ದೂರ ಉಳಿದಿರುವ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ
ಮುಂಬರುವ ಆಗಸ್ಟ್‌ನಲ್ಲಿ ಮಾರಕ ವೇಗಿ ಬುಮ್ರಾ ತಂಡ ಕೂಡಿಕೊಳ್ಳುವ ಸಾಧ್ಯತೆ
ಐರ್ಲೆಂಡ್ ಪ್ರವಾಸಕ್ಕೆ ಬುಮ್ರಾ ತಂಡ ಕೂಡಿಕೊಳ್ಳುವ ಸಾಧ್ಯತೆ
ನವದೆಹಲಿ(ಜೂ.19): ಬೆನ್ನು ನೋವಿನಿಂದಾಗಿ ಕಳೆದ ಸೆಪ್ಟೆಂಬರ್‌ನಿಂದಲೂ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಐರ್ಲೆಂಡ್ ವಿರುದ್ಧದ ಸರಣಿಗೆ ತಂಡಕ್ಕೆ ಮರಳುವ ಸಾಧ್ಯತೆಯಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಭಾರತ ತಂಡ ಆಗಸ್ಟ್‌ನಲ್ಲಿ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, 3 ಟಿ20 ಪಂದ್ಯಗಳ್ನಾಡಲಿದೆ.
ಈ ಸರಣಿಗೂ ಮುನ್ನ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಸಂಪೂರ್ಣ ಫಿಟ್ ಆಗುವ ನಿರೀಕ್ಷೆಯಿದ್ದು, ಆಡುವ ಸಾಧ್ಯತೆಯಿದೆ ಎಂದು ಬಿಸಿಸಿಐ (BCCI) ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ. ಬುಮ್ರಾ ಸದ್ಯ ಬೆಂಗಳೂರಿನ ಎನ್ಸಿಎನಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದಾರೆ.
ಆ್ಯಷಸ್: ಆಸೀಸ್ ವಿರುದ್ಧ ಇಂಗ್ಲೆಂಡ್‌ಗೆ ಮುನ್ನಡೆ
ಬಮಿಂರ್ಗ್ಹ್ಯಾಮ್: ಉಸ್ಮಾನ್ ಖವಾಜ(141) ಶತಕದ ಹೊರತಾಗಿಯೂ ಆಸ್ಪ್ರೇಲಿಯಾ ವಿರುದ್ಧದ ಮೊದಲ ಆ್ಯಷಸ್ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಇನ್ನಿಂಗ್‌್ಸ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್‌ನ 393 ರನ್‌ಗೆ ಉತ್ತರವಾಗಿ ಆಸೀಸ್ ಭಾನುವಾರ 386ಕ್ಕೆ ಆಲೌಟಾಗಿ 7 ರನ್ ಹಿನ್ನಡೆ ಅನುಭವಿಸಿತು. ಮೂರನೇ ದಿನದಾಟಕ್ಕೆ ಚಹಾ ವಿರಾಮದ ಬಳಿಕ ಮಳೆ ಅಡ್ಡಿ ಪಡಿಸಿದ್ದರಿಂದಾಗಿ ಕೊನೆಯ ಸೆಷನ್ ಪಂದ್ಯಾಟ ನಡೆಯಲಿಲ್ಲ. ಮೂರನೇ ದಿನದಾಟದಂತ್ಯದ ವೇಳೆಗೆ ಇಂಗ್ಲೆಂಡ್ ತಂಡವು 28 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡ ಒಟ್ಟಾರೆ 35 ರನ್ ಮುನ್ನಡೆ ಸಾಧಿಸಿದೆ.
ಲಂಕಾ ಪ್ರವಾಸಕ್ಕೆ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರಕಟ; ಮಾರಕ ವೇಗಿಗೆ ಬುಲಾವ್
2ನೇ ದಿನ 5 ವಿಕೆಟ್ಗೆ 311 ರನ್ ಗಳಿಸಿದ್ದ ಆಸೀಸ್ ಭಾನುವಾರವೂ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಇನ್ನಿಂಗ್‌್ಸ ಮುನ್ನಡೆ ಪಡೆಯುವ ನಿರೀಕ್ಷೆಯಲ್ಲಿದ್ದರೂ ಅಲೆಕ್ಸ್ ಕೇರ್ರಿ(66) ಹಾಗೂ ಖವಾಜ ಔಟಾದ ಬಳಿಕ ತಂಡ ಬೇಗನೇ ಗಂಟುಮೂಟೆ ಕಟ್ಟಿತು. ಬಳಿಕ 2ನೇ ಇನ್ನಿಂಗ್‌್ಸ ಆರಂಭಿಸಿದ ಇಂಗ್ಲೆಂಡ್ ಆರಂಭಿಕ ಆಘಾತಕ್ಕೊಳಗಾಗಿ ಚಹಾ ವಿರಾಮಕ್ಕೆ 28 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು.
ವಿಂಡೀಸ್ ಸರಣಿ ಬಳಿಕ ಕೌಂಟಿ ಕ್ರಿಕೆಟ್‌ಗೆ ರಹಾನೆ
ನವದೆಹಲಿ: ಭಾರತದ ಹಿರಿಯ ಬ್ಯಾಟರ್ ಅಜಿಂಕ್ಯ ರಹಾನೆ (Ajinkya Rahane) ಮುಂದಿನ ತಿಂಗಳು ನಡೆಯಲಿರುವ ವೆಸ್ಟ್ಇಂಡೀಸ್ ವಿರುದ್ಧದ ಸರಣಿ ಬಳಿಕ ಲೀಚೆಸ್ಟರ್ಶೈರ್ ಪರ ಕೌಂಟಿ ಕ್ರಿಕೆಟ್ನಲ್ಲಿ ಆಡಲಿದ್ದಾರೆ ಎಂದು ತಿಳಿದುಬಂದಿದೆ. ರಹಾನೆ ಜನವರಿಯಲ್ಲೇ ಲೀಚೆಸ್ಟರ್ಶೈರ್ ಪರ ಒಪ್ಪಂದ ಮಾಡಿಕೊಂಡಿದ್ದು, ಜೂನ್-ಸೆಪ್ಟೆಂಬರ್ ನಡುವೆ 8 ಪ್ರಥಮ ದರ್ಜೆ ಹಾಗೂ ರಾಯಲ್ ಲಂಡನ್ ಕಪ್ ಟೂರ್ನಿಯ ಎಲ್ಲಾ ಪಂದ್ಯಗಳಲ್ಲಿ ಆಡಬೇಕಿತ್ತು. ಆದರೆ ಐಪಿಎಲ್ ಬಳಿಕ ಅವರು ಭಾರತ ತಂಡಕ್ಕೆ ಮರಳಿದ್ದು, ವಿಂಡೀಸ್ ಸರಣಿಯಲ್ಲೂ ಆಡುವ ಸಾಧ್ಯತೆ ಹೆಚ್ಚು. ಈ ಮೊದಲು ರಹಾನೆ 2019ರಲ್ಲಿ ಹ್ಯಾಂಪ್ಶೈರ್ ಪರ ಆಡಿದ್ದರು.
ವಿಶ್ವಕಪ್ ಅರ್ಹತಾ ಸುತ್ತು: ಗೆದ್ದ ವಿಂಡೀಸ್, ಜಿಂಬಾಬ್ವೆ
ಹರಾರೆ: ಐಸಿಸಿ ಏಕದಿನ ವಿಶ್ವಕಪ್ನ ಅರ್ಹತಾ ಟೂರ್ನಿಯಲ್ಲಿ ವೆಸ್ಟ್ಇಂಡೀಸ್ ಹಾಗೂ ಆತಿಥೇಯ ಜಿಂಬಾಬ್ವೆ ಶುಭಾರಂಭ ಮಾಡಿವೆ. ಅಮೆರಿಕ ವಿರುದ್ಧದ ಪಂದ್ಯದಲ್ಲಿ ವಿಂಡೀಸ್ 39 ರನ್ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ವಿಂಡೀಸ್, ಚಾರ್ಲ್ಸ್(66), ಹೋಲ್ಡರ್(56), ಚೇಸ್(55) ಹೋಪ್(54) ಅರ್ಧಶತಕಗಳ ನೆರವಿನಿಂದ 49.3 ಓವರ್ಗಳಲ್ಲಿ 297ಕ್ಕೆ ಆಲೌಟಾಯಿತು.
ದೊಡ್ಡ ಗುರಿ ಬೆನ್ನತ್ತಿದ ಅಮೆರಿಕ ಗಜಾನಂದ್ ಸಿಂಗ್(101) ಹೋರಾಟದ ಹೊರತಾಗಿಯೂ 7 ವಿಕೆಟ್ಗೆ 258 ರನ್ ಗಳಿಸಿ ಸೋಲ್ಪೊಪಿಕೊಂಡಿತು. ಮತ್ತೊಂದು ಪಂದ್ಯದಲ್ಲಿ ನೇಪಾಳ ವಿರುದ್ಧ ಜಿಂಬಾಬ್ವೆ 8 ವಿಕೆಟ್ ಜಯಗಳಿಸಿತು. ನೇಪಾಳ 8 ವಿಕೆಟ್ಗೆ 290 ರನ್ ಗಳಿಸಿದರೆ, ಜಿಂಬಾಬ್ವೆ 44.1 ಓವರಲ್ಲೇ ಗುರಿ ಬೆನ್ನತ್ತಿತು. ಶಾನ್ ವಿಲಿಯಮ್ಸ್(102*), ಕ್ರೇಗ್ ಎರ್ವಿನ್(121*) ಶತಕ ಸಿಡಿಸಿದರು.