ಟೀಂ ಇಂಡಿಯಾಗೆ ಬೇಕಿದೆ ಯುವಿಯಂತ ಎಡಗೈ ಬ್ಯಾಟರ್.! ಇವರಲ್ಲಿ ಯಾರಿಗಿದೆ ಯುವಿ ಸ್ಥಾನ ತುಂಬಬಲ್ಲ ಸಾಮರ್ಥ್ಯ.?

By Suvarna News  |  First Published Dec 17, 2023, 4:50 PM IST

ಯುವಿ ಟೀಮ್ ಇಂಡಿಯಾ ಮಿಡಲ್ ಆರ್ಡರ್ ಬ್ಯಾಟಿಂಗ್ನ ಸ್ಟ್ರಾಂಗ್ ವೆಪೆನ್ ಆಗಿದ್ರು. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ ನಾಕೌಟ್ ಮ್ಯಾಚ್ಗಳಲ್ಲಿ ಅಸಲಿ ಮ್ಯಾಚ್ ವಿನ್ನರ್ ಅಗಿದ್ರು. ಭಾರತ ಆಸೀಸ್ ವಿರುದ್ಧದ ಈವರೆಗು ನಾಲ್ಕು ನಾಕೌಟ್ ಮ್ಯಾಚ್ಗಳನ್ನ ಗೆದ್ದಿದೆ. ಇದ್ರಲ್ಲಿ 3ರಲ್ಲಿ ಯುವಿ ಅಬ್ಬರಿಸಿದ್ದಾರೆ. 


ಬೆಂಗಳೂರು: ಈ ಆಟಗಾರ ಕ್ರಿಕೆಟ್ಗೆ ಕ್ರಿಕೆಟ್ಗೆ ಗುಡ್ ಬೈ ಹೇಳಿ ವರ್ಷಗಳೇ ಕಳೆದಿವೆ. ಆದ್ರೆ, ಟೀಮ್ ಇಂಡಿಯಾಗೆ ಅವ್ರ ಸ್ಥಾನ ತುಂಬಬಲ್ಲ ಮತ್ತೊಬ್ಬ ಆಟಗಾರ ಸಿಕ್ಕಿಲ್ಲ. ಇಂತಹ ಮಿಡಲ್ ಆರ್ಡರ್ ಬ್ಯಾಟರ್ ತಂಡದಲ್ಲಿದ್ರೆ, ಏಕದಿನ ವಿಶ್ವಕಪ್ ಫೈನಲ್ನಲ್ಲಿ ರೋಹಿತ್ ಪಡೆ ಆಸೀಸ್ಗೆ ಶರಣಾಗ್ತಿರಲಿಲ್ಲ. ಯಾರು ಆ ಆಟಗಾರ..? ಏನ್ ಕಥೆ ಅಂತೀರಾ..? ಈ ಸ್ಟೋರಿ ನೋಡಿ...!  

ಯುವರಾಜ್ ಸಿಂಗ್..! ಭಾರತ 2011ರ ಏಕದಿನ ವಿಶ್ವಕಪ್ ಹೀರೋ. ಹೆಮ್ಮಾರಿ ಕ್ಯಾನ್ಸರ್ನಿಂದ ಬಳಲುತ್ತಿದ್ದರೂ, ದೇಶಕ್ಕಾಗಿ ಹೋರಾಡಿದ ಧೀರ. ಯುವಿ ಕ್ರಿಕೆಟ್ಗೆ ಗುಡ್ ಬೈ ಹೇಳಿ ವರ್ಷಗಳೇ ಕಳೆದಿವೆ. ಆದ್ರೆ, ಟೀಮ್ ಇಂಡಿಯಾಗೆ ಅವ್ರ ಸ್ಥಾನ ತುಂಬಬಲ್ಲ ಮತ್ತೊಬ್ಬ ಆಟಗಾರ ಸಿಕ್ಕಿಲ್ಲ. ಯುವಿಯಂತ ಮಿಡಲ್ ಆರ್ಡರ್ ಬ್ಯಾಟರ್ ತಂಡದಲ್ಲಿದ್ರೆ, ಏಕದಿನ ವಿಶ್ವಕಪ್ ಫೈನಲ್ನಲ್ಲಿ ರೋಹಿತ್ ಪಡೆ ಆಸೀಸ್ಗೆ ಶರಣಾಗ್ತಿರಲಿಲ್ಲ. 

Latest Videos

undefined

ಯೆಸ್, ಯುವಿ ಟೀಮ್ ಇಂಡಿಯಾ ಮಿಡಲ್ ಆರ್ಡರ್ ಬ್ಯಾಟಿಂಗ್ನ ಸ್ಟ್ರಾಂಗ್ ವೆಪೆನ್ ಆಗಿದ್ರು. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ ನಾಕೌಟ್ ಮ್ಯಾಚ್ಗಳಲ್ಲಿ ಅಸಲಿ ಮ್ಯಾಚ್ ವಿನ್ನರ್ ಅಗಿದ್ರು. ಭಾರತ ಆಸೀಸ್ ವಿರುದ್ಧದ ಈವರೆಗು ನಾಲ್ಕು ನಾಕೌಟ್ ಮ್ಯಾಚ್ಗಳನ್ನ ಗೆದ್ದಿದೆ. ಇದ್ರಲ್ಲಿ 3ರಲ್ಲಿ ಯುವಿ ಅಬ್ಬರಿಸಿದ್ದಾರೆ. 

2000ರಲ್ಲಿ ಚಾಂಪಿಯನ್ಸ್ ಟ್ರೋಫಿ ಕ್ವಾರ್ಟರ್ ಫೈನಲ್ ಮ್ಯಾಚಲ್ಲಿ ಪಂಜಾಬ್ ಪುತ್ತರ್, 84 ರನ್ಗಳಿಸಿದ್ರು. 2007ರ T20 ವಿಶ್ವಕಪ್ ಸೆಮಿಫೈನಲ್ನಲ್ಲಿ ಕೇವಲ 30 ಎಸೆತಗಳಲ್ಲಿ 70 ರನ್ ಚಚ್ಚಿದ್ರು. 2011ರ ಏಕದಿನ ವಿಶ್ವಕಪ್ನಲ್ಲಿ ಚೇಸಿಂಗ್ ವೇಳೆ 57 ರನ್ ಸಿಡಿಸಿ, ತಂಡಕ್ಕೆ ಗೆಲುವು ತಂದುಕೊಟ್ಟಿದ್ರು. 

ಸದ್ಯ ಟೀಮ್ ಇಂಡಿಯಾಗೆ ಮಿಡಲ್ ಆರ್ಡರ್ನಲ್ಲಿ ಮಿಂಚಬಲ್ಲ ಎಡಗೈ ಬ್ಯಾಟರ್ ಬೇಕಾಗಿದೆ. ಯುವ ಆಟಗಾರರಿಗೆ ಹೆಚ್ಚು ಅವಕಾಶಗಳನ್ನ ನೀಡಿ ಬೆಳೆಸ ಬೇಕಿದೆ. ಈ ಮೂವರು ಯಂಗ್ಸ್ಟರ್ಗಳಿಗೆ ಯುವಿ ಸಾಮರ್ಥ್ಯ ತುಂಬೋ ಸಾಮರ್ಥ್ಯವಿದೆ. ಅದರಲ್ಲಿ ಮೊದಲನೇ ಆಟಗಾರ ತಿಲಕ್ ವರ್ಮಾ. 

ಯೆಸ್, ಯವಿನ ರಿಪ್ಲೇಸ್ ಮಾಡೋ ತಾಕತ್ತು ಈ ಹೈದ್ರಾಬಾದ್ ಪ್ಲೇಯರ್ಗಿದೆ ಅಂದ್ರೆ ತಪ್ಪಿಲ್ಲ. ಈತನ ಬ್ಯಾಟಿಂಗ್ ಶೈಲಿಯು ಯುವಿಯ ಬ್ಯಾಟಿಂಗ್ ನೆನಪಿಸುತ್ತೆ. ಮೊದಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ ತಿಲಕ್ ಇದನ್ನ ಪ್ರೂವ್ ಮಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ T20 ಪಂದ್ಯದಲ್ಲಿ, ಮೊದಲ ಪಂದ್ಯ ಆಡ್ತಿದ್ದೇನೆ ಅನ್ನೋ, ಯಾವುದೇ ಫಿಯರ್ ಇಲ್ಲದೇ, ಬೌಂಡರಿ, ಸಿಕ್ಸರ್ಗಳನ್ನ ಚಚ್ಚಿದ್ರು.

ರಿಂಕು ಸಿಂಗ್, ಯವಿಯನ್ನ ರಿಪ್ಲೇಸ್ ಮಾಡಬಲ್ಲ ಆಟಗಾರ ಎನಿಸಿಕೊಂ ಡಿದ್ದಾರೆ. ನಂಬರ್ 6ರಲ್ಲಿ ಕಣಕ್ಕಿಳಿದು ಫಿನಿಶರ್ ರೋಲ್ ನಿಭಾಯಿಸ್ತಿರೋ ರಿಂಕುಗೆ, ಮಿಡಲ್ ಆರ್ಡರ್ನಲ್ಲಿ ಆಡಿಸಿದ್ರೆ, ಯುವಿಯಂತೆ ಮ್ಯಾಚ್ ವಿನ್ನರ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ. 

ಇನ್ನು ರಾಂಚಿ ಬಾಯ್ ಇಶಾನ್ ಕಿಶನ್, ಯವಿಯಂತೆ ಮಿಡಲ್ ಆರ್ಡರ್ನಲ್ಲಿ ಅಬ್ಬರಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಏಷ್ಯಾಕಪ್ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಇಶಾನ್ ಆಟವೇ, ಇದಕ್ಕೆ ಸಾಕ್ಷಿ. ಇನ್ನು ಈ ಮೂವರ ಜೊತೆಗೆ ರಿಷಭ್ ಪಂತ್ ಕೂಡ ಯುವಿ ಸ್ಥಾನ ತುಂಬಬಲ್ಲ ರೇಸ್ನಲ್ಲಿದ್ದಾರೆ. 

ಅದೇನೆ ಇರಲಿ, ನಾಕೌಟ್ ಮ್ಯಾಚ್ಗಳಲ್ಲಿ ಗೆಲ್ಲಬೇಕಂದ್ರೆ, ಟೀಮ್ ಇಂಡಿಯಾಗೆ ಯುವಿಯಂತೆ ಎಡಗೈ ಬ್ಯಾಟರ್ ಬೇಕೇ ಬೇಕು. ಹೀಗಾಗಿ ಬಿಸಿಸಿಐ, ಕೋಚ್ ರಾಹುಲ್ ದ್ರಾವಿಡ್ ಯುವಿಯಂತೆ ಮ್ಯಾಚ್ ವಿನ್ನರ್ ಎಡಗೈ ಬ್ಯಾಟರ್ಗಳನ್ನಬೆಳೆಸಬೇಕಿದೆ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 

click me!