ಮತ್ತೆ ಮತ್ತೆ ನೋಡಬೇಕೆನಿಸುವ ಸ್ಮಿತ್ ರನೌಟ್; ಜಡೇಜಾಗೂ ಅಚ್ಚು ಮೆಚ್ಚು!

By Suvarna News  |  First Published Jan 8, 2021, 8:09 PM IST

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಮಾಡಿದ ರನೌಟ್ ಭಾರಿ ಮೆಚ್ಚುಗೆ ಗಳಿಸಿದೆ. ಸ್ಟೀವ್ ಸ್ಮಿತ್ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದ ರನೌಟ್ ಸ್ವತಃ ರವೀಂದ್ರ ಜಡೇಜಾಗೂ ಅಚ್ಚು ಮೆಚ್ಚು. ಈ ರನೌಟ್  ಹಾಗೂ ಜಡೇಜಾ ಹೇಳಿದ ಮಾತಿನ ವಿವರ ಇಲ್ಲಿದೆ.


ಸಿಡ್ನಿ(ಜ.08): ರವೀಂದ್ರ ಜಡೇಜಾ ಕಡೆ ಬಾಲ್ ಹೋದರೆ ರನ್‌ಗಾಗಿ ಪ್ರಯತ್ನಿಸಿದರೆ ವಿಕೆಟ್ ಉರುಳುವುದು ಖಚಿತ . ಕಾರಣ ಫೀಲ್ಡಿಂಗ್ ಹಾಗೂ ಥ್ರೋನಲ್ಲಿ ಜಡೇಜಾಗಿ ಸರಿಸಾಟಿ ಸದ್ಯ ಯಾರೂ ಇಲ್ಲ. ಬಹುತೇಕ ಬ್ಯಾಟ್ಸ್‌ಮನ್‌ಗಳು ಜಡೇಜಾ ಫೀಲ್ಡಿಂಗ್ ಮಾಡುತ್ತಿರುವ ಕಡೆ ಚೆಂಡು ಹೊಡೆದರೆ ಹೆಚ್ಚಿನ ಸರ್ಕಸ್ ಮಾಡುವುದಿಲ್ಲ. ಹೀಗೆ 2ನೇ ರನ್‌ಗೆ ಪ್ರಯತ್ನಿಸಿದ ಸ್ಟೀವ್ ಸ್ಮಿತ್ ರನೌಟ್ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಈ ರನೌಟ್ ಸ್ವತ ರವೀಂದ್ರ ಜಡೇಜಾಗೂ ಅಚ್ಚು ಮೆಚ್ಚು.

ಸಿಡ್ನಿ ಟೆಸ್ಟ್: ಜಡೇಜಾ ದಾಳಿಗೆ ತತ್ತರಿಸಿದ ಆಸೀಸ್‌ 338 ರನ್‌ಗಳಿಗೆ ಆಲೌಟ್

Tap to resize

Latest Videos

ಸಿಡ್ನಿ ಟೆಸ್ಟ್  ಪಂದ್ಯದಲ್ಲಿ ಸ್ಟೀವ್ ಸ್ಮಿತ್ ಶತಕ ಸಿಡಿಸಿ ಮಿಂಚಿದ್ದರು. ತಂಡಕ್ಕಾಗಿ ಹೆಚ್ಚಿನ ರನ್ ಕಲೆಹಾಕಲು ಸ್ಮಿತ್ ಪ್ರತಿ ಎಸೆತದಲ್ಲೂ ರನ್ ಕೆಲೆಹಾಕಲು ಪ್ರಯತ್ನಿಸಿದ್ದರು. ಇನ್ನು 11ನೇ ಬ್ಯಾಟ್ಸ್‌ಮನ್ ಜೊತೆ ಇನ್ನಿಂಗ್ಸ್ ಮುಂದುವರಿಸಿದ ಸ್ಮಿತ್ 2ನೇ ರನ್ ಕಲೆಹಾಕಲು ಮುಂದಾಗಿದ್ದರು. ಈ ವೇಳೆ ಮಿಡಾನ್‌ನಿಂದ ಓಡಿ ಬೂಂದ ಜಡೇಜಾ ಡೀಪ್ ಸ್ಕ್ವೇರ್‌ನಿಂದ ಬಾಲ್ ಥ್ರೋ ಮಾಡಿದ್ದರು. 

 

Ravindra Jadeja You're amazing. What an incredible Run out. Steve Smith out with a Outstanding Throw run out by Jadeja. pic.twitter.com/CzDCjUz1bl

— 🏏Cricket Videos📹 (@cricket_videos_)

ಸಿಡ್ನಿ ಟೆಸ್ಟ್; ರಾಷ್ಟ್ರಗೀತೆ ವೇಳೆ ಭಾವುಕರಾಗಿ ಕಣ್ಣೀರಿಟ್ಟ ಮೊಹಮ್ಮದ್ ಸಿರಾಜ್; ವಿಡಿಯೋ ವೈರಲ್!.

ಬಾಲ್ ನೇರವಾಗಿ ಡೈರೆಕ್ಟ್ ಹಿಟ್ ಆಗಿತ್ತು. ಹೀಗಾಗಿ ಸ್ಟೀವ್ ಸ್ಮಿತ್ ರನೌಟ್‌ಗೆ ಬಲಿಯಾಗಿದ್ದರು. ಇದು ನಾನು ಮಾಡಿದ ರನೌಟ್ ಪೈಕಿ ಅತ್ಯುತ್ತಮ ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ. ಮತ್ತೆ ಮತ್ತೆ ರಿವೈಂಡ್ ಮಾಡಿ ನೋಡಬೆಕನ್ನಿಸುವ ರನೌಟ್ ಆಗಿ ಬದಲಾಗಿದೆ. ಇನ್ನು ಅಭಿಮಾನಿಗಳು ಕೂಡ ಜಡ್ಡು ರನೌಟ್‌ ಹಾಗೂ ಫೀಲ್ಡಿಂಗ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

click me!