2ನೇ ಏಕದಿನ ಪಂದ್ಯ; ಟೀಂ ಇಂಡಿಯಾ ದಿಗ್ಗಜರು ಔಟ್, ಆತಂಕದಲ್ಲಿ ಫ್ಯಾನ್ಸ್!

By Suvarna NewsFirst Published Feb 8, 2020, 1:13 PM IST
Highlights

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಭಾರತದ ಪಾಲಿಗೆ ಕಬ್ಬಿಣದ ಕಡಲೆಯಾಗಿ ಮಾರ್ಪಟ್ಟಿದೆ. ಮೊದಲ ಪಂದ್ಯದಲ್ಲಿ ಮುಗ್ಗರಿಸಿದ ಟೀಂ  ಇಂಡಿಯಾ ಇದೀಗ 2ನೇ ಹಾಗೂ ಮಹತ್ವದ ಪಂದ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಭಾರತ ತಂಡದ ಬ್ಯಾಟಿಂಗ್ ಅಭಿಮಾನಿಗಳ ಆತಂಕಕ್ಕೆ ಕಾರವಾಗಿದೆ 

ಆಕ್ಲೆಂಡ್(ಫೆ.08): ಭಾರತ ಹಾಗೂ ನ್ಯೂಜಿಲೆಂಡ್  ನಡುವಿನ 2ನೇ ಏಕದಿನ ಪಂದ್ಯ ಹಲವು ಕಾರಣಗಳಿಂದ ಮಹತ್ವ ಪಡೆದುಕೊಂಡಿದೆ. ಭಾರತಕ್ಕೆ ಸರಣಿ ಉಳಿಸಿಕೊಳ್ಳಲು ಈ ಪಂದ್ಯ ಗೆಲ್ಲಲೇಬೇಕಿದ್ದರೆ, ಟಿ20 ಸರಣಿ ಸೋತ ನ್ಯೂಜಿಲೆಂಡ್‌ಗೆ ಸರಣಿ ಗೆಲುವು ನಿರ್ಧರಿಸುವ ಪಂದ್ಯವಾಗಿದೆ. ಈ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. 

ಇದನ್ನೂ ಓದಿ: ಗಪ್ಟಿಲ್, ಟೇಲರ್ ಹೋರಾಟ, ಭಾರತಕ್ಕೆ 274 ರನ್ ಟಾರ್ಗೆಟ್

ನ್ಯೂಜಿಲೆಂಡ್ ನೀಡಿದ 274 ರನ್ ಟಾರ್ಗೆಟ್ ಭಾರತದ ಪಾಲಿಗೆ ಮೌಂಟ್ ಎವರೆಸ್ಟ್ ಬೆಟ್ಟದಷ್ಟು ದೊಡ್ಡದಾಗಿದೆ. ಕಾರಣ ಈ ಈಗಾಗಲೇ 4 ವಿಕೆಟ್ ಪತನಗೊಂಡಿದೆ. ಆರಂಭದಲ್ಲೇ ಮಯಾಂಕ್ ಅಗರ್ವಾಲ್ 3 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರೆ, ಪೃಥ್ವಿ ಶಾ 24 ರನ್ ಸಿಡಿಸಿ ಔಟಾದರು.

ಇದನ್ನೂ ಓದಿ: INDvNZ 2ನೇ ಏಕದಿನ: ದಾಖಲೆ ಬರೆದ ಮಾರ್ಟಿನ್ ಗಪ್ಟಿಲ್!

ನಾಯಕ ವಿರಾಟ್ ಕೊಹ್ಲಿ ಕೇವಲ 15 ರನ್ ಸಿಡಿಸಿ ಔಟಾದರು. ಈ ಮೂಲಕ ಭಾರತ ಹಿನ್ನಡೆ ಅನುಭವಿಸಿತು.  ಕೆಎಲ್ ರಾಹುಲ್ ಕೇವಲ 4 ರನ್  ಸಿಡಿಸಿ ನಿರ್ಗಮಿಸಿದರು. 71 ರನ್‌ಗೆ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ ಗೆಲುವಿಗೆ ಹರಸಾಹಸ ಪಡಬೇಕಿದೆ

click me!