ಭಾರತ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಆಸರೆಯಾದ ರಾಸ್ ಟೇಲರ್ ಆಕರ್ಷಕ ಅರ್ಧಶತಕ ಸಿಡಿಸಿದ್ದಾರೆ. ಇಷ್ಟೇ ಅಲ್ಲ ಭಾರತ ವಿರುದ್ಧ ದಾಖಲೆ ಬರೆದಿದ್ದಾರೆ. ಟೇಲರ್ ದಾಖಲೆ ವಿವರ ಇಲ್ಲಿದೆ.
ಆಕ್ಲೆಂಡ್(ಫೆ.08): ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ ಉತ್ತಮ ಬೌಲಿಂಗ್ ದಾಳಿ ಮಾಡಿದರೂ ಅಲ್ಪ ಮೊತ್ತಕ್ಕೆ ಕಟ್ಟಿಹಾಕಲು ಸಾಧ್ಯವಾಗಲಿಲ್ಲ. ರಾಸ್ ಟೇಲರ್ ಅಂತಿಮ ಹಂತದಲ್ಲಿ ನೀಡಿದ ಹೋರಾಟದಿಂದ ಕಿವೀಸ್ ಸ್ಪರ್ಧಾತ್ಮ ಮೊತ್ತ ಪೇರಿಸಿದೆ. ದಿಢೀರ್ ಕುಸಿತದ ಬಳಿಕ ಏಕಾಂಗಿ ಹೋರಾಟ ನೀಡಿದ ಟೇಲರ್ ಹಾಫ್ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ: ಗಪ್ಟಿಲ್, ಟೇಲರ್ ಹೋರಾಟ, ಭಾರತಕ್ಕೆ 274 ರನ್ ಟಾರ್ಗೆಟ್.
undefined
ಭಾರತ ಬೌಲಿಂಗ್ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ ಅಲ್ಪಮೊತ್ತಕ್ಕೆ ಆಲೌಟ್ ಆಗುವ ಭೀತಿ ಎದುರಿಸಿತ್ತು. ಆದರೆ ರಾಸ್ ಟೇಲರ್ ಹೋರಾಟದಿಂದ ನ್ಯೂಜಿಲೆಂಡ್ ದಿಟ್ಟ ಹೋರಾಟ ನೀಡಿತು. ಹಾಫ್ ಸೆಂಚುರಿ ಸಿಡಿಸಿದ ಟೇಲರ್ ಭಾರತ ವಿರುದ್ಧ ಗರಿಷ್ಠ 50+ ಸಿಡಿಸಿ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: INDvNZ 2ನೇ ಏಕದಿನ: ದಾಖಲೆ ಬರೆದ ಮಾರ್ಟಿನ್ ಗಪ್ಟಿಲ್!
ಭಾರತ ವಿರುದ್ಧ ಗರಿಷ್ಟ 50+ ಸ್ಕೋರ್ ಮಾಡಿದ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್
11 - ರಾಸ್ ಟೇಲರ್
10 - ನಥನ್ ಆಶ್ಲೆ
9 - ಸ್ಟೀಫನ್ ಫ್ಲೆಮಿಂಗ್
9 - ಕೇನ್ ವಿಲಿಯಮ್ಸನ್
ಕೈಲ್ ಜ್ಯಾಮಿಸನ್ ಜೊತೆ ಸೇರಿ ಉತ್ತಮ ಜೊತೆಯಾಟ ನೀಡಿದ ಟೇಲರ್, ನ್ಯೂಜಿಲೆಂಡ್ ಪರ 9ನೇ ವಿಕೆಟ್‌ಗೆ 3ನೇ ಅತ್ಯುತ್ತಮ ಜೊತೆಯಾಟ ಅನ್ನೋ ದಾಖಲೆ ಬರೆದಿದ್ದಾರೆ.
ಗರಿಷ್ಠ 9ನೇ ವಿಕೆಟ್ ಜೊತೆಯಾಟ(ನ್ಯೂಜಿಲೆಂಡ್ ಪರ)
84 ಮ್ಯಾಟ್ ಹೆನ್ರಿ - ಜೇಮ್ಸ್ ನೀಶನ್ v ಭಾರತ, ಮೊಹಾಲಿ(2016)
83 ಕೈಲ್ ಮಿಲ್ಸ್ -ಟಿಮ್ ಸೌಥಿ v ಭಾರತ, ಕ್ರೈಸ್ಟ್‌ಚರ್ಚ್( 2009)
76* ರಾಸ್ ಟೇಲರ್ -ಕೈಲ್ ಜ್ಯಾಮಿಸನ್ v ಭಾರತ, ಆಕ್ಲೆಂಡ್( 2020)