ರಾಹುಲ್‌ ದ್ರಾವಿಡ್​ ಕ್ರಿಕೆಟಿಗನಾಗಿದ್ದಾಗ ಇದ್ದ ಕನ್ಸಿಸ್​​ಟೆನ್ಸಿ ಕೋಚ್​​​​​ ಆಗಿ ಯಾಕಿಲ್ಲ..?

Published : Jul 15, 2023, 03:10 PM IST
ರಾಹುಲ್‌ ದ್ರಾವಿಡ್​ ಕ್ರಿಕೆಟಿಗನಾಗಿದ್ದಾಗ ಇದ್ದ ಕನ್ಸಿಸ್​​ಟೆನ್ಸಿ ಕೋಚ್​​​​​ ಆಗಿ ಯಾಕಿಲ್ಲ..?

ಸಾರಾಂಶ

ಭಾರತ ಕ್ರಿಕೆಟ್‌ ತಂಡದಲ್ಲಿ ಪದೇ ಪದೇ ಪ್ರಯೋಗ ಮಾಡುತ್ತಿರುವ ರಾಹುಲ್ ದ್ರಾವಿಡ್ ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡದ ಹೆಡ್‌ಕೋಚ್‌ 6 ಟೆಸ್ಟ್​ ಸರಣಿ.. 6 ಆರಂಭಿಕ ಜೋಡಿ..!

ಬೆಂಗಳೂರು(ಜು.15): ರಾಹುಲ್ ದ್ರಾವಿಡ್​ ಸದ್ಯ ಟೀಂ ಇಂಡಿಯಾ ಕೋಚ್​​. 16 ವರ್ಷಗಳ ಕಾಲ ಇಂಟರ್​​ ನ್ಯಾಷನಲ್ ಕ್ರಿಕೆಟ್ ಆಡಿದ್ದ ದಿ ವಾಲ್, ಟೆಸ್ಟ್ ಮತ್ತು ಒನ್​ಡೇಯಲ್ಲಿ 10 ಸಾವಿರಕ್ಕೂ ಅಧಿಕ ರನ್ ಹೊಡೆದಿದ್ದಾರೆ. ಈ ಎರಡು ಮಾದರಿಯಲ್ಲಿ ಅವರು ಆಡಿದಷ್ಟು ವರ್ಷಗಳು ಕನ್ಸಿಸ್​​ಟೆನ್ಸಿ ಫರ್ಫಾಮೆನ್ಸ್ ನೀಡಿದ್ದಾರೆ. ಅದರಲ್ಲೂ ಟೆಸ್ಟ್​​​ ಕ್ರಿಕೆಟ್​ನಲ್ಲಂತೂ ಡೆಬ್ಯು ಟೆಸ್ಟ್​ ಸಿರೀಸ್​ನಿಂದ ಹಿಡಿದು ವಿದಾಯದ ಟೆಸ್ಟ್ ಸರಣಿಯವರೆಗೂ ರನ್ ಹೊಡೆದಿದ್ದಾರೆ.

ಹೀಗೆ ಆಟಗಾರನಾಗಿ ಕನ್ಸಿಟೆನ್ಸಿ ಪರ್ಫಾಮೆನ್ಸ್ ನೀಡ್ತಿದ್ದ ದ್ರಾವಿಡ್​, ಕೋಚ್ ಆಗಿ ಕನ್ಸಿಸ್​​ಟೆನ್ಸಿ ಪರ್ಫಾಮೆನ್ಸ್ ನೀಡ್ತಿಲ್ಲ. ಅವರು ಸಹ ಕನ್ಸಿಟೆನ್ಸಿಯಾಗಿ ಇಲ್ಲ. ಟೀಂ ಇಂಡಿಯಾ ಕೋಚ್ ಆದ್ಮೇಲೆ, ಆಟಗಾರರ ಮೇಲೆ ಅತಿಯಾದ ಪ್ರಯೋಗ ಮಾಡಿ ತಂಡವನ್ನ ದುರ್ಬಲಗೊಳಿಸ್ತಿದ್ದಾರೆ. ದ್ರಾವಿಡ್ ಕೋಚ್ ಅವಧಿಯಲ್ಲೇ  ಒಂದೇ ವರ್ಷದಲ್ಲಿ ಭಾರತಕ್ಕೆ 7 ಮಂದಿ ನಾಯಕರಾದ್ರು. ಟೀಂ ಇಂಡಿಯಾ, ಏಷ್ಯಾಕಪ್​, ಟಿ20 ವಿಶ್ವಕಪ್​, ಟೆಸ್ಟ್ ವಿಶ್ವಕಪ್​ಗಳನ್ನ ಗೆಲ್ಲಲು ವಿಫಲವಾಗಿದೆ. ಆದ್ರೂ ಬುದ್ದಿ ಕಲಿಯದೆ ದ್ರಾವಿಡ್, ಈಗ ಓಪನರ್​ಗಳ ಮೇಲೆ ಪ್ರಯೋಗ ಮಾಡೋಕೆ ಶುರು ಮಾಡಿದ್ದಾರೆ.

Duleep Trophy Final: ಪಶ್ಚಿಮ ವಲಯಕ್ಕೆ ಗೆಲ್ಲಲು ಕಠಿಣ ಗುರಿ ನೀಡಿದ ದಕ್ಷಿಣ ವಲಯ

6 ಟೆಸ್ಟ್​ ಸರಣಿ.. 6 ಆರಂಭಿಕ ಜೋಡಿ..!

2022ರ ಜನವರಿಯಿಂದ ಸದ್ಯ ನಡೆಯುತ್ತಿರುವ ವೆಸ್ಟ್​ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್​ ವರೆಗೆ ಟೀಂ ಇಂಡಿಯಾ 6 ಟೆಸ್ಟ್ ಸರಣಿಗಳನ್ನಾಡಿದೆ. ಈ ಆರರಲ್ಲಿ ಭಾರತದ ಇನ್ನಿಂಗ್ಸ್ ಆರಂಭಿಸಿರೋದು 6 ಜೋಡಿಗಳು. ನೀವು ನಂಬದಿದ್ದರೂ ಇದು ಸತ್ಯ. 2022ರ ಸೌತ್ ಆಫ್ರಿಕಾ ಟೆಸ್ಟ್​ ಸರಣಿಯಲ್ಲಿ ಕನ್ನಡಿಗರಾದ ಕೆಎಲ್ ರಾಹುಲ್-ಮಯಾಂಕ್ ಅಗರ್ವಾಲ್ ಓಪನರ್ಸ್​.  ಶ್ರೀಲಂಕಾ ಟೆಸ್ಟ್​ ಸಿರೀಸ್​ನಲ್ಲಿ ರೋಹಿತ್​ ಶರ್ಮಾ-ಮಯಾಂಕ್ ಇನ್ನಿಂಗ್ಸ್ ಆರಂಭಿಸಿದ್ದರು. ಇನ್ನು ಇಂಗ್ಲೆಂಡ್ ವಿರುದ್ಧ ಕಳೆದ ವರ್ಷ ಏಕೈಕ ಟೆಸ್ಟ್ ಆಡಿದ್ದ ಭಾರತಕ್ಕೆ ಶುಬ್​ಮನ್ ಗಿಲ್-ಚೇತೇಶ್ವರ್ ಪೂಜಾರ ಓಪನರ್ಸ್. ಡಿಸೆಂಬರ್​ನಲ್ಲಿ ಬಾಂಗ್ಲಾ ಟೆಸ್ಟ್ ಸರಣಿಯಲ್ಲಿ ರಾಹುಲ್​-ಗಿಲ್ ಆರಂಭಿಕ ಜೋಡಿ.

ರವಿಚಂದ್ರನ್‌ ಅಶ್ವಿನ್ ಯಶಸ್ಸಿನಲ್ಲಿ ಧೋನಿಗೂ ಸಲ್ಲಬೇಕು ಕ್ರೆಡಿಟ್..! ಭಜ್ಜಿಗೆ ಸರಿಯಾಟಿ ಅಶ್ವಿನ್‌ ಬೆಳೆಸಿದ್ದು ಮಹಿ

ಈ ವರ್ಷ ಆಸ್ಟ್ರೇಲಿಯಾ ವಿರುದ್ಧದ ಮೊದಲೆರಡು ಟೆಸ್ಟ್​​​​​​​​​​​​​​​​​​​​​​​​​​ಗಳಲ್ಲಿ ರೋಹಿತ್​-ರಾಹುಲ್ ಓಪನರ್ಸ್ ಆಗಿದ್ದರೆ, ಉಳಿದೆರಡು ಟೆಸ್ಟ್ ಮತ್ತು WTC ಫೈನಲ್​ನಲ್ಲಿ ರೋಹಿತ್​-ಗಿಲ್ ಆರಂಭಿಕರಾಗಿದ್ದರು. ಅಲ್ಲಿಗೆ ಒಂದೇ ಸರಣಿಯಲ್ಲಿ ಆರಂಭಿಕ ಜೋಡಿ ಬದಲಾಗಿದೆ. ಸದ್ಯ ನಡೆಯುತ್ತಿರುವ ವಿಂಡೀಸ್ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ರೋಹಿತ್​-ಯಶಸ್ವಿ ಜೈಸ್ವಾಲ್ ಓಪನರ್ಸ್​. ಅಲ್ಲಿಗೆ 18 ತಿಂಗಳಲ್ಲಿ ಭಾರತಕ್ಕೆ 6 ಬೇರೆ ಬೇರೆ ಆರಂಭಿಕ ಜೋಡಿಯನ್ನ ಕಂಡಿದೆ ಭಾರತ. ಪ್ರತಿ ಸರಣಿಯಲ್ಲೂ ಓಪನರ್ಸ್ ಚೇಂಜ್ ಆಗ್ತಲೇ ಇದ್ದಾರೆ.

ಗಿಲ್ ಕೇಳಿದ್ರು.. ದ್ರಾವಿಡ್ ದಾನ ಮಾಡಿದ್ರು..!

ವಿಂಡೀಸ್​ನಲ್ಲೂ ರೋಹಿತ್​ ಶರ್ಮಾ- ಶುಭ್‌ಮನ್‌ ಗಿಲ್ ಓಪನರ್ಸ್ ಆಗಿರ್ಬೇಕಿತ್ತು. ಆದ್ರೆ ನಾನು ನಂಬರ್ 3 ಸ್ಲಾಟ್​ನಲ್ಲಿ ಆಡ್ತೇನೆ ಅಂತ ಕೋಚ್ ರಾಹುಲ್ ದ್ರಾವಿಡ್‌ ಬಳಿ ಶುಭ್‌ಮನ್ ಗಿಲ್ ಕೇಳಿದ್ರಂತೆ. ಅದಕ್ಕೆ ರಾಹುಲ್ ದ್ರಾವಿಡ್ ತಥಸ್ತು ಅಂದರಂತೆ. ಹಾಗಾಗಿ ಈಗ ರೋಹಿತ್​-ಜೈಸ್ವಾಲ್ ಓಪನರ್ಸ್. ಇಂಜುರಿ ಮತ್ತು ಕಳಪೆ ಫಾರ್ಮ್​ನಿಂದ ಹೀಗೆ ಆರಂಭಿಕ ಜೋಡಿ ಬದಲಾಗಿದೆ ಅಂತ ಹೇಳಬಹುದು. ಆದ್ರೆ ರೋಹಿತ್​-ಗಿಲ್ ಜೋಡಿಯನ್ನ ಬದಲಿಸಿದ್ದೇಕೆ..? ಈಗ ರೋಹಿತ್​-ಜೈಸ್ವಾಲ್ ಆರಂಭಿಕರು. ಇದೇ ವರ್ಷ ಡಿಸೆಂಬರ್​ನಲ್ಲಿ ಆಫ್ರಿಕಾ ಸಿರೀಸ್ ಇದೆ. ಅಷ್ಟೊತ್ತಿಗೆ ರೋಹಿತ್ ಕೆರಿಯರ್ ಕ್ಲೋಸ್ ಆಗಿರುತ್ತೆ. ರಾಹುಲ್ ರೀ ಎಂಟ್ರಿಕೊಡ್ತಾರೆ. ಆಗ ರಾಹುಲ್​-ಜೈಸ್ವಾಲ್ ಓಪನರ್ಸ್​. ಒಟ್ನಲ್ಲಿ ದ್ರಾವಿಡ್​ ಅದ್ಭುತ ಆಟಗಾರನೇ ಹೊರತು ಅದ್ಭುತ ಕೋಚ್ ಆಗ್ತಿಲ್ಲ ಅನ್ನೋದಕ್ಕೆ ಇದಕ್ಕಿಂತ ಬೆಸ್ಟ್ ಎಕ್ಸಾಂಪಲ್ ಬೇಕಿಲ್ಲ ಅನಿಸುತ್ತೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?