ಭಾರತದಲ್ಲಿ ಮಾತ್ರ ಶುಭ್‌ಮನ್‌ ಗಿಲ್ ಆರ್ಭಟನಾ..?

By Suvarna News  |  First Published Jul 20, 2023, 1:56 PM IST

* ವಿದೇಶಿ ಪ್ರವಾಸದಲ್ಲಿ ಪದೇ ಪದೇ ವಿಫಲವಾಗುತ್ತಿರುವ ಶುಭ್‌ಮನ್‌ ಗಿಲ್‌
* ಕಳೆದ 7 ಇನ್ನಿಂಗ್ಸ್​​ಗಳಲ್ಲಿ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ ಗಿಲ್
* ಭಾರತದಲ್ಲಿ ಗಿಲ್ ಆರ್ಭಟನಾ ಎನ್ನುವ ಪ್ರಶ್ನೆ ಆರಂಭ?


ಬೆಂಗಳೂರು(ಜು.20) ಶುಭ್​ಮನ್ ಗಿಲ್..! ಸದ್ಯ ಭಾರತೀಯ ಕ್ರಿಕೆಟ್​ನ ನಯಾ ಪ್ರಿನ್ಸ್. ಈ ಪಂಜಾಬ್ ಪುತ್ತರ್ ​ ಅದ್ಭುತ ಬ್ಯಾಟಿಂಗ್​ನಿಂದ ಹೊಸ ಅಲೆ ಎಬ್ಬಿಸಿದ್ದಾರೆ. ಕ್ರಿಕೆಟ್​ ಜಗತ್ತಿನಲ್ಲಿ ಸೆನ್ಸೇಷನ್ ಹುಟ್ಟುಹಾಕಿದ್ದಾರೆ. ಭಾರತೀಯ ಕ್ರಿಕೆಟ್​ನ ನೆಕ್ಸ್ಟ್​ ವಿರಾಟ್ ಕೊಹ್ಲಿ ಅಂತ ಕರೆಸಿಕೊಳ್ತಿದ್ದಾರೆ.  ಈ ಬಾರಿಯ ಐಪಿಎಲ್‌​ನಲ್ಲಿ ಗಿಲ್ ಜಬರ್​ದಸ್ತ್​ ಪ್ರದರ್ಶನ ನೀಡಿದ್ರು. 17 ಪಂದ್ಯಗಳಿಂದ 890 ರನ್​ಗಳಿಸಿ, ಆರೇಂಜ್ ಕ್ಯಾಪ್ ಮುಡಿಗೇರಿಸಿಕೊಂಡಿದ್ರು.  ಗುಜರಾತ್ ಟೈಟನ್ಸ್ ಸತತ 2ನೇ ಬಾರಿ ಫೈನಲ್​ ತಲುಪುವಲ್ಲಿ ಪ್ರಮುಖ ಪಾತ್ರವಹಿಸಿದ್ರು. ಆದ್ರೀಗ, ಟೀಂ ಇಂಡಿಯಾ ಪರ ಫ್ಲಾಪ್ ಶೋ ನೀಡ್ತಿದ್ದಾರೆ. ಇದರಿಂದ ಇಂಡಿಯನ್‌ ಪ್ರೀಮಿಯರ್ ಲೀಗ್‌ನಲ್ಲಿ ಮಾತ್ರ ಶುಭ್‌ಮನ್‌ ಗಿಲ್ ಆರ್ಭಟ ಮಾತುಗಳು ಕೇಳಿ ಬರ್ತಿವೆ. 

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​ನಲ್ಲಿ ಪಂಜಾಬ್ ಪುತ್ತರ್​ ಫೇಲ್..!

Tap to resize

Latest Videos

ಹೌದು,  2023ರ ಐಪಿಎಲ್‌ನಲ್ಲಿ 3 ಶತಕ, 4 ಅರ್ಧಶತಕ ಸಿಡಿಸಿದ್ದ ಶುಭ್‌ಮನ್ ಗಿಲ್, ಐಪಿಎಲ್‌ ನಂತರ ಸೈಲೆಂಟಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್​ನಲ್ಲಿ ಗಿಲ್‌ ಸತತ ಎರಡು ಇನಿಂಗ್ಸ್‌ನಲ್ಲೂ ವೈಫಲ್ಯ ಅನುಭವಿಸಿದ್ರು. ಮೊದಲ ಇನ್ನಿಂಗ್ಸ್​​ನಲ್ಲಿ  ಕೇವಲ 13 ರನ್​ಗಳಿಸಿ ಗಿಲ್‌ ಕ್ಲೀನ್ ಬೌಲ್ಡಾದ್ರೆ,  2ನೇ ಇನ್ನಿಂಗ್ಸ್​​ನಲ್ಲೂ ಬೇಗ ಜಾಗ ಖಾಲಿ ಮಾಡಿದ್ರು. ಇನ್ನು ಇದಾಗಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್​ನಲ್ಲೂ ಫೇಲ್ ಆದ್ರು. 

Ind vs WI: ಭಾರತಕ್ಕೆ ಸತತ 9ನೇ ಸರಣಿ ಜಯದ ಗುರಿ..!

ಕಳೆದ 7 ಇನ್ನಿಂಗ್ಸ್​​ಗಳಲ್ಲಿ ಒಂದೇ ಒಂದು ಅರ್ಧಶತಕ ಇಲ್ಲ..!

ಯೆಸ್, ಶುಭ್‌ಮನ್‌ ಗಿಲ್ ಭಾರತ ಮತ್ತು ಏಷ್ಯಾದಲ್ಲಿ ಮಿಂಚಿದ್ದಾರೆ. ಆದ್ರೆ. ಏಷ್ಯಾದಾಚೆ ಗಿಲ್  ಮಕಾಡೆ ಮಲಗಿದ್ದಾರೆ. 2020ರಲ್ಲಿ ಆಸ್ಟ್ರೇಲಿಯಾದಲ್ಲಿ ಟೆಸ್ಟ್​​ ಕ್ರಿಕೆಟ್‌ಗೆ ಎಂಟ್ರಿ ನೀಡಿದ ಗಿಲ್, ಮೊದಲ ಸರಣಿಯಲ್ಲೇ 2 ಅರ್ಧಶತಕ ದಾಖಲಿಸಿದ್ರು. ಆದ್ರೆ, ಅದರ ನಂತರ ಗಿಲ್ ಕಂಪ್ಲೀಟ್ ಫ್ಲಾಪ್ ಆಗಿದ್ದಾರೆ. ಏಷ್ಯಾದಾಚೆ ಆಡಿದ  ಕಳೆದ 7 ಇನ್ನಿಂಗ್​​ಗಳಲ್ಲಿ ಒಂದೇ ಒಂದು ಅರ್ಧಶತಕ ಇಲ್ಲ. ಅಷ್ಟೇ ಅಲ್ಲ, ಒಮ್ಮೆ ಮಾತ್ರ 20ರನ್ ಗಡಿ ದಾಟಿದ್ದಾರೆ. ಈವರೆಗೂ ಶುಭ್‌ಮನ್‌ ಗಿಲ್​ ಏಷ್ಯಾದಾಚೆಗಿನ ರಾಷ್ಟ್ರಗಳಲ್ಲಿ 7 ಟೆಸ್ಟ್​​ಗಳನ್ನಾಡಿದ್ದಾರೆ. 13 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಇದ್ರಲ್ಲಿ 29.4ರ ಸರಾಸರಿಯಲ್ಲಿ ಕೇವಲ 353 ರನ್​ಗಳಿಸಿದ್ದಾರೆ. 

ಜೀವನೋಪಾಯಕ್ಕಾಗಿ ಯಶಸ್ವಿ ಜೈಸ್ವಾಲ್ ಎಂದೂ ಪಾನಿಪೂರಿ ಮಾರಿಲ್ಲ..! ಶಾಕಿಂಗ್ ವಿಚಾರ ಬಾಯ್ಬಿಟ್ಟ ಕೋಚ್..!

ಎರಡನೇ ಟೆಸ್ಟ್​​​ನಲ್ಲಿ ಕಮ್​ಬ್ಯಾಕ್ ಮಾಡ್ತಾರಾ..? 

ಸದ್ಯ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯೋದು ಸುಲಭದ ಮಾತಲ್ಲ. ಹೀಗಿರುವಾಗ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬೇಕಾದ್ರೆ ಸಿಕ್ಕ ಅವಕಾಶದಲ್ಲಿ ಅಬ್ಬರಿಸಲೇಬೇಕು. ಇದರಿಂದ ಗಿಲ್ ಕೂಡ ಹೊರತಾಗಿಲ್ಲ. ಒಂದು ವೇಳೆ ಈ ಯಂಗ್ ಬ್ಯಾಟ್ಸ್​ಮನ್ ವಿದೇಶದಲ್ಲಿ ಫಾರ್ಮ್​ ಕಂಡುಕೊಳ್ಳದಿದ್ರೆ, ಟೆಸ್ಟ್​ ತಂಡದಿಂದ ಗೇಟ್ ಪಾಸ್ ಸಿಗೋದು ಫಿಕ್ಸ್. ಆದ್ರೆ, ಹಾಗಾದಿರಲಿ ವೆಸ್ಟ್​ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್​ನಲ್ಲಿ ಗಿಲ್ ಅಬ್ಬರಿಸಲಿ. ಆ ಮೂಲಕ ತನ್ನ ಸಾಮರ್ಥ್ಯ ಪ್ರೂವ್ ಮಾಡಲಿ ಅನ್ನೋದೆ ನಮ್ಮ ಆಶಯ.

click me!