
ನವದೆಹಲಿ(ಡಿ.27): ಜನವರಿ 10ರಿಂದ ಆರಂಭವಾಗಲಿರುವ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗೆ 42 ಆಟಗಾರರನ್ನೊಳಗೊಂಡ ಡೆಲ್ಲಿ ತಂಡವನ್ನು ಪ್ರಕಟಿಸಲಾಗಿದ್ದು. ಅನುಭವಿ ಬ್ಯಾಟ್ಸ್‌ಮನ್ ಶಿಖರ್ ಧವನ್ ತಂಡವನ್ನು ಮುನ್ನಡೆಸಲಿದ್ದಾರೆ.
ಹೌದು, ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ವಿರುದ್ದ ಸೀಮಿತ ಓವರ್‌ಗಳ ಸರಣಿಯಲ್ಲಿ ಪಾಲ್ಗೊಂಡಿದ್ದ ಧವನ್ ತವರಿನ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಕಳೆದ ಮೂರ್ನಾಲ್ಕು ತಿಂಗಳಿನಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಇಶಾಂತ್ ಶರ್ಮಾ ಕೂಡಾ ಡೆಲ್ಲಿ ತಂಡದಲ್ಲಿ ಸ್ಥಾನಪಡೆದಿದ್ದು, ತಮ್ಮ ಸಾಮರ್ಥ್ಯವನ್ನು ಸಾಭೀತುಪಡಿಸಲು ಎದುರು ನೋಡುತ್ತಿದ್ದಾರೆ.
ಸಯ್ಯದ್ ಮುಷ್ತಾಕ್ ಅಲಿ: ಇಂದು ರಾಜ್ಯ ತಂಡ ಪ್ರಕಟ
ಡೆಲ್ಲಿ ತಂಡದಲ್ಲಿ ಶಿಖರ್ ಧವನ್, ಇಶಾಂತ್ ಶರ್ಮಾ ಮಾತ್ರವಲ್ಲದೇ ಉನ್ಮುಕ್ತ ಚಾಂದ್, ನಿತಿಶ್ ರಾಣಾ, ಮನನ್ ಶರ್ಮಾ ಸೇರಿದಂತೆ ಹಲವು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷದ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಡೆಲ್ಲಿ ತಂಡದ ಪ್ರದರ್ಶನ ಅಷ್ಟೇನು ಉತ್ತಮವಾಗಿರಲಿಲ್ಲ. ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದ ಡೆಲ್ಲಿ ಸೂಪರ್ ಲೀಗ್ ಹಂತದಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆಲುವಿನ ನಗೆ ಬೀರಿತ್ತು.
ಈ ಬಾರಿ ಡೆಲ್ಲಿ ತಂಡವು 'ಇ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜನವರಿ 11ರಂದ ತನ್ನ ಮೊದಲ ಪಂದ್ಯದಲ್ಲಿ ಆತಿಥೇಯ ಮುಂಬೈ ತಂಡವನ್ನು ಎದುರಿಸಲಿದೆ. 'ಇ' ಗುಂಪಿನ ಪಂದ್ಯಗಳು ಮುಂಬೈನ ವಾಂಖೆಡೆ ಮೈದಾನದಲ್ಲಿ ಜರುಗಲಿವೆ
ಡೆಲ್ಲಿ ತಂಡ ಹೀಗಿದೆ ನೋಡಿ:
ಶಿಖರ್ ಧವನ್(ನಾಯಕ), ಇಶಾಂತ್ ಶರ್ಮಾ, ನಿತೀಶ್ ರಾಣಾ, ಅನುಜ್ ರಾವುತ್, ಜಾಂಟಿ ಸಿಧು, ಕ್ಷಿತಿಜ್ ಶರ್ಮಾ, ಹಿಮ್ಮತ್ ಸಿಂಗ್, ಲಲಿತ್ ಯಾದವ್, ದೃವ್ ಶೋರೆ, ಹಿತನ್ ದಲಾಲ್, ಪ್ರದೀಪ್ ಸಾಂಗ್ವನ್, ಸಿಮ್ರಜಿತ್ ಸಿಂಗ್, ಸಿದ್ದಾಂತ್ ಶರ್ಮಾ, ಕುನ್ವರ್ ಬಿದುರಿ, ವಿಕಾಸ್ ಮಿಶ್ರಾ, ಶಿವಾಂಕ್ ವಶಿಷ್ಠ, ಮನನ್ ಶರ್ಮಾ, ಮನ್ಜತ್ ಕಾಲ್ರಾ, ಖುಲ್ವಂತ್ ಖೆಜ್ರೋಲಿಯಾ, ಪವನ್ ನೇಗಿ, ತೇಜಸ್ ಬೊರೋಕಾ, ವೈಭವ್ ಕಂಡ್‌ಪಾಲ್, ಅಜಯ್ ಅಲ್ವಾಟ್, ಕರಣ್ ಡಾಗರ್, ಉನ್ಮುಕ್ತ್ ಚಾಂದ್, ಲಕ್ಷಯ್ ತಾರ್ಜಿಯಾ, ಪ್ರಿನ್ಸ್ ಚೌಧರಿ, ಯಾತ್ರಾಂತ್ ಸಿಂಗ್, ವಿನಾಯಕ್ ಗುಪ್ತಾ, ಶಾರ್ತಕ್ ರಂಜನ್, ಪ್ರಿಯಾನ್ಸ್ ಆರ್ಯ, ಅರ್ಟಿಚ್ ಬಕ್ಸಿ, ಸನತ್ ಸಾಂಗ್ವಾನ್, ಪ್ರದೀಪ್ ಮಲಿಕ್, ವೈಭವ್ ರಾವಲ್, ಜತಿನ್ ಯಾದವ್.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.